ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಅತ್ತಿಗುಪ್ಪೆ ಸಾಹಿತ್ಯ ಬಳಗದ ಮಕ್ಕಳ ದೀಪಾವಳಿ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಗ್ರಾಮ ಭಾರತಿ ವಿದ್ಯಾಸಂಸ್ಥೆಯ ಸಾಹುಕಾರ್ ಚಿಕ್ಕಣ್ಣಗೌಡ ಸಭಾಂಗಣದಲ್ಲಿ ಅತ್ತಿಗುಪ್ಪೆ ಸಾಹಿತ್ಯ ಬಳಗದ ಅಧ್ಯಕ್ಷರಾದ ಮಾರೇನಹಳ್ಳಿ ಲೋಕೇಶ್ ಅವರ ಸಹಕಾರದಿಂದ ಮಕ್ಕಳ ದೀಪಾವಳಿ ಕವಿಗೋಷ್ಠಿ ಮತ್ತು ಬೆಂಗಳೂರು ಆನೇಕಲ್ ತಾಲೂಕಿನ ದೊಮ್ಮಸಂದ್ರ ಸರ್ಕಾರಿ ಶಾಲಾ ಶಿಕ್ಷಕಿ ಚಂದ್ರಿಕಾ ಆರ್ ಬಾಯಿರಿ ಅವರ ಸ್ವರಚಿತ ಶಿಶುಪ್ರಾಸ "ಚಂದ್ರಬಿಂಬ" ಸಂಕಲನ ಬಿಡುಗಡೆ ಕಾರ್ಯಕ್ರಮ ೨೩/೧೦/೨೦೨೨ ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಗತಿಪರ ಚಿಂತಕ ಕವಿ ಹರವು ದೇವೇಗೌಡರು, ಪುಸ್ತಕ ಬಿಡುಗಡೆ ಮಾಡಿದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರು ಸಿ. ಚಾಮಶೆಟ್ಟಿಯವರು, ಸಾಹಿತಿ, ಪೆಥೋಲಜಿ ತಜ್ಞರು ಡಾ ಎಚ್.ಎ ಪಾರ್ಶ್ವನಾಥ್ ಅವರು, ಮುನ್ನುಡಿ ಬರೆದುಕೊಟ್ಟ ಲೇಖಕಿ ಸಿಂಧು ಭಾರ್ಗವ ಬೆಂಗಳೂರು, ಪತಿ ರಾಘವೇಂದ್ರ ಬಾಯಿರಿಯವರು ಹಾಗೂ ಊರಿನ ಗಣ್ಯರು ಉಪಸ್ಥಿತಿಯಿದ್ದರು. ಕವಿಗೋಷ್ಠಿಯಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಕವಿತೆ ಚುಟುಕುಗಳನ್ನು ವಾಚಿಸಿದರು.
ಪುಸ್ತಕ ಖರೀದಿಸಲು ಆಸಕ್ತಿ ಇರುವವರು ಸಂಪರ್ಕಿಸಿ : Chandrikabhat625@gmail.com
ವರದಿ : ಲೇಖಕಿ ಸಿಂಧು ಭಾರ್ಗವ, ಬೆಂಗಳೂರು













No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...