Friday, June 24, 2022

ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಗಳಿಂದ ಆಗುವ ಲಾಭ ನಷ್ಟಗಳು



ಬತ್ತದ ತೊರೆ ಸ್ನೇಹ ಬಳಗ

ಕಾರಂತಜ್ಜನ ನೆರಳಿನಡಿಯಲ್ಲಿ...

  ಕಲೆ‌ಮತ್ತು ಸಾಹಿತ್ಯ ವೇದಿಕೆ 

ವಿಷಯ: ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಗಳಿಂದ ಉಂಟಾಗುವ ಲಾಭ- ನಷ್ಟಗಳು


"ಲಾಭ-ನಷ್ಟಗಳು ಎರಡು ಇದೆ"


 ಸಾಮಾಜಿಕ ಜಾಲತಾಣಗಳು ಮನುಷ್ಯನ ಬುದ್ಧಿಯನ್ನು ವಿಕಾಸವನ್ನು ಬಯಸುತ್ತದೆ. ಈ ಜಾಲತಾಣಗಳನ್ನು ಕೆಲವರು ಕೆಟ್ಟ ದೃಷ್ಟಿಯಿಂದ ಬಳಸಿದರೆ ಮತ್ತೆ ಕೆಲವರು ತಮ್ಮದೇ ಆದ ಕವಿತೆಗಳನ್ನು ಕಥೆಗಳನ್ನು ಅಥವಾ ತಮ್ಮ ಬರಹಗಳನ್ನು ಕೆಲವೆಲ್ಲ ಗುಂಪುಗಳಲ್ಲಿ ಹಂಚಿಕೊಳ್ಳುವುದು ಸಹಜ.

ಹಿಂದಿನ ಕಾಲದಲ್ಲಿ ಕರೆಂಟಿರಲಿಲ್ಲ., ರೇಡಿಯೋ ಇರಲಿಲ್ಲ ಫೋನ್ ಇರಲಿಲ್ಲ ಹಾಗೂ ನಾವು ಈಗ ಬಳಸುವಂತಹ ಮೊಬೈಲ್ ಕೂಡ ಇರಲಿಲ್ಲ. ಅಂದರು ನಾವು ಬದುಕಿದ್ದೇವೆ. ಅದೆಷ್ಟು ಶತಮಾನಗಳು ಪತ್ರಿಕಾ ಮಾಧ್ಯಮದ ಮೂಲಕ., ಪತ್ರಮುಖೇನ ವಿಷಯಗಳನ್ನು ಅರಿಯುತ್ತಿದ್ದವು. ನಂತರ ರೇಡಿಯೋ ಟಿವಿ ಬಂದಮೇಲಂತೂ ಹೊಸ ಜಗತ್ತಿಗೆ ಕಾಲಿಟ್ಟ ಅನುಭವ. ಪ್ರತಿಯೊಬ್ಬನು ಇತ್ತೀಚೆಗೆ ಮೊಬೈಲಿನಲ್ಲಿ ಹಲವಾರು ಗ್ರೂಪ್ ಗಳಿಗೆ ಸೇರಿಕೊಂಡು ತಮ್ಮ ಬರಹಗಳನ್ನು ಹಂಚಿಕೊಳ್ಳುತ್ತಾರೆ ‌. ಅದರಲ್ಲೂ ಹನಿಗವನಗಳು ಚಿಕ್ಕಚಿಕ್ಕ ವಿಚಾರಗಳನ್ನು ಹಂಚಿಕೊಳ್ಳುವುದು ಎಂದರೆ ಬಹಳಷ್ಟು ಖುಷಿ.

ಈ ಜಾಲತಾಣಗಳಲ್ಲಿ ಅನೇಕ ಸಾಹಿತ್ಯ ಪ್ರಕಾರಗಳು ಬಳಗಗಳು ಇಂದು ಹಾಸುಹೊಕ್ಕಾಗಿವೆ. ಇದರಲ್ಲಿ ಬರುವಂತಹ ಎಲ್ಲಾ ಕೃತಿಗಳು ಆ ವ್ಯಕ್ತಿಯ ಬರವಣಿಗೆ ಹಾಗೂ ಶೈಲಿಯನ್ನು ರೂಪಿಸುತ್ತದೆ.

ಈ ಸ್ಪರ್ಧೆಗಳಿಂದ ಲಾಭವಿದೆ ಎಂದು ಕೇಳಿದರು ಹೊಸಬರಿಗೆ ತಮ್ಮದೇ ಆದ ಬರಹಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಕೆಲವರು ವಾಟ್ಸಪ್ಪು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸದಿದ್ದರೂ ಸ್ಪರ್ಧಾಳುಗಳಾಗಿ ಭಾಗವಹಿಸುವುದು ಮತ್ತಷ್ಟು ಖುಷಿಯನ್ನು ನೀಡುತ್ತದೆ. ಕೆಲವರ ಬರಹಗಳನ್ನು ಪತ್ರಿಕೆಗಳಿಗೆ ಕಳಿಸಿದರು ಪ್ರಕಟವಾಗದೆ ವಿಷಾದ ಪತ್ರದೊಂದಿಗೆ ಹಿಂದಿರುಗುವುದು ಕ್ರಮವೂ ಇದೆ. ಆದರೆ ಇಲ್ಲಿ ನಡೆಸುವ ಎಲ್ಲಾ ಸ್ಪರ್ಧೆಗಳಲ್ಲಿ ತಮ್ಮ ಬರಹಗಳನ್ನು ಮಿತ್ರರೊಂದಿಗೆ ಹಂಚಿಕೊಂಡಾಗ ಅದೊಂದು ರೀತಿಯ ಖುಷಿ ಬೇರೆ. ಇನ್ನೂರು, ಮುನ್ನೂರು ಸದಸ್ಯರಿರುವ ಕೆಲವು ಗುಂಪುಗಳಲ್ಲಿ ಕೆಲವರಾದರೂ  ತಮ್ಮ ಅನಿಸಿಕೆಗಳನ್ನು ನೀಡುತ್ತಾರೆ. ಕೃತಿಚೌರ್ಯ ಕ್ಕೆ ಇಲ್ಲಿ ಆಸ್ಪದ ಇರುವುದಿಲ್ಲ. ಸ್ಪರ್ಧಾ ಸಮಯ ಕಳೆದ ನಂತರ ತಮಗೆ ಅನಿಸಿಕೆಗಳನ್ನು ಹಂಚಿಕೊಳ್ಳುವ ಅವಕಾಶವೂ ಇದೆ.

ಇಂತಹ ಸ್ಪರ್ಧೆಗಳು ಲಾಭವೇ ಹೊರತು ನಷ್ಟವಿಲ್ಲ. ಕೆಲಸದ ಒತ್ತಡಗಳ ನಡುವೆ ಪರದಾಡಿದರೂ, ಸಮಯ ಸಿಕ್ಕಾಗೆಲ್ಲ ಇಂತಹ ಸ್ಪರ್ಧೆಗಳನ್ನು ಗೌರವಿಸುವುದು ಒಳಿತು. ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿಲ್ಲ ಎಂದು ಬೇಸರ ಬೇಡ. ಮರಳಿ ಪ್ರಯತ್ನವ ಮಾಡು ಎಂಬಂತೆ ಮುಂದೆ ಸಿಗಬಹುದು ಎಂಬ ನಿರೀಕ್ಷೆ ಇರಲೇಬೇಕು .ತಮ್ಮ ಬರಹಗಳಿಗೆ ಒಂದಲ್ಲ ಒಂದು ದಿನ  ಬಹುಮಾನ ಸಿಕ್ಕೇ ಸಿಗುತ್ತದೆ. ಸ್ಪರ್ಧೆಗಳು ಎಂದರೆ ಮರಳಿ ಪ್ರಯತ್ನ ಮಾಡು ಎಂಬ ನಾಣ್ನುಡಿಯಂತೆ ಇಲ್ಲೂ ಅನ್ವಯವಾಗುತ್ತದೆ. ಹಾಗಾಗಿ ವಾಟ್ಸಪ್ ಗ್ರೂಪ್ ಗಳಂತಹ ಗುಂಪಿನಲ್ಲಿ ಸ್ಪರ್ಧೆಗಳು ನಡೆಸುವುದು ಬಹಳ ಉತ್ತಮ ಎಂದು ನನ್ನ ಅಭಿಪ್ರಾಯ. ವಂದನೆಗಳೊಂದಿಗೆ 

ವೆಂಕಟ್ ಭಟ್ ಎಡನೀರು ಕಾಸರಗೋಡು.

9446296910.

[17/06, 6:41 PM] Nagarathna HM Madam2: ಬತ್ತದ ತೊರೆ ಸ್ನೇಹ ಬಳಗ..

ಸ್ಪರ್ಧೆಗಾಗಿ.  ವಿಷಯ...


 ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಅನೇಕ ಕಲಿಕಾ ಪ್ರಕ್ರಿಯೆಗಳು ನಡೆಯುತ್ತಿವೆ ಉದಾಹರಣೆಗೆ ನಮ್ಮ. " ಬತ್ತದ ತೊರೆ ಸ್ನೇಹ ಬಳಗ"

ಸಾಕ್ಷಿಯಾಗಿದೆ..

ಹಲವಾರು ಪ್ರಜ್ಞಾವಂತರು ಕವಿ ಮನಸ್ಸುಗಳು ಶಿಕ್ಷಕರು ಹಿರಿಯ ಹಾಗೂ ಕಿರಿಯ ಸಾಹಿತಿಗಳು ಎಲ್ಲರಲ್ಲೂ ವೈಚಾರಿಕವಾಗಿ ತಮ್ಮ ಬದುಕಿನ ನಡುವೆ ಒಂದಿಷ್ಟು ಸಮಯ ಬಳಗದಲ್ಲಿ ಭಿನ್ನ ವಿಭಿನ್ನ ಸ್ಪರ್ಧೆಗಳು ಮೇಲಿಂದ ಮೇಲೆ ನಡೆದಾಗ ನಮಗೂ ಕೂಡ ಭಾಗವಹಿಸುವ ಆಸಕ್ತಿ ಅದರ ಜೊತೆಗೆ ನಮಗೆ ತಿಳಿದಿರುವುದನ್ನು ಹಂಚಿಕೊಂಡಾಗ ತಿಳಿಯದೆ ಇರುವುದನ್ನು ಕಲಿಯುವಂತಹ ಸಂದರ್ಭ ಸನ್ನಿವೇಶಗಳು ಒದಗಿ ಇದರಿಂದ ತುಂಬಾ ಕಲಿಯುವ ಪ್ರಮೇಯ ಹೆಚ್ಚಾಗಿದೆ .ಬಹಳ ಹೆಮ್ಮೆಯೂ ಅನಿಸುತ್ತದೆ.ಆದರೆ ಇದನ್ನೇ ಕೆಲವರು ಇಂತಹ ಜಾಲತಾಣಗಳಲ್ಲಿ ದುರುಪಯೋಗವನ್ನು ಪಡಿಸಿಕೊಳ್ಳುವ ಸಂದರ್ಭಗಳು ಒಮ್ಮೊಮ್ಮೆ ಒದಗಿದಾಗ ಒಂದಿಷ್ಟು ಬೇಸರ ಎನಿಸುತ್ತದೆ .ಆದರೆ ಅಂತಹ ಸಮಸ್ಯೆಗಳನ್ನು ನಾವೇ ಒಳ್ಳೆಯ ರೀತಿಯಲ್ಲಿ ಬಗೆಹರಿಸಿಕೊಳ್ಳುವ ಪ್ರಯತ್ನ ನಾವು ಮಾಡಬೇಕಿದೆ. ಹಾಗೆಯೇ ನಮ್ಮ ಕಲೆಯು ಅದೆಷ್ಟೋ ಜನರಿಗೆ ತಿಳಿದಿರುವುದಿಲ್ಲ ಅಂತಹದರಲ್ಲಿ ಕೆಲವು ಜಾಲತಾಣಗಳು ನಮ್ಮನ್ನು ಕಲಾವಿದರನ್ನಾಗಿ ಗುರುತಿಸಿ ಇನ್ನಷ್ಟು ಸಾಧಿಸಿ ಉನ್ನತಮಟ್ಟಕ್ಕೆ ಏರಲು ಅತ್ಯಂತ ಸಹಾಯಕಾರಿ ಯಾದ ಹಾದಿ ಜಾಲತಾಣ ವಾಗಿದೆ ವೈವಿಧ್ಯಮಯ ಕಲಾ ಪ್ರತಿಭೆಗಳನ್ನು ಕಲಿಯುವ ಹಾಗೂ ಹೊರ ಪ್ರಪಂಚಕ್ಕೆ ನಮ್ಮನ್ನು ಪರಿಚಯಮಾಡಿ ನಮ್ಮ ಸಾಧನೆಯ ಬಹುದೊಡ್ಡ ಸಾಧನೆಗೆ ರಾಜಮಾರ್ಗ ಎನಿಸಿದೆ.ಆದರೂ ಆಗಾಗ ಒಂದಿಷ್ಟು ತೊಡಕುಗಳು ಕೂಡ ಆಗುತ್ತದೆ .ಅದೆಷ್ಟೋ  ಒಳ್ಳೆಯ ಜನಗಳ ಮದ್ಯೆ . ಅವರ ದುರುಪಯೋಗಕ್ಕೆ ಇನ್ಯಾರದ್ದೋ ಸಂಕೆ ಗೆ ಕರೆಮಾಡಿ ಒಳ್ಳೆಯವರ ಹಾಗೆ ಇದ್ದು ತಮ್ಮ ಚಪಲಕ್ಕೆ ಇನ್ನೊಬ್ಬರನ್ನು ಬಲಿಪಶು ಮಾಡುವ ದುರುಳರು ಇರುತ್ತಾರೆ .ಅದನ್ನು ಎಚ್ಚರವಹಿಸಿ ನಡೆದರೆ .ಜಾಲತಾಣಗಳು ಅತ್ಯಂತ ಸಹಾಯಕಾರಿಯಾಗಿದೆ. ಉದಾಹರಣೆಗೆ...

ನಮ್ಮದೇ ಆದ ರಕ್ತದಾನದ ಗುಂಪು ""ನಾಗರತ್ನ ರಕ್ತದಾನಿ ಬಳಗ"". ಇದೆ. ಆಸ್ಪತ್ರೆಯಲ್ಲಿ ಒಂದು ಮಗುವಿನ ಜನನದ ಸಂದರ್ಭದಲ್ಲಿ ಆ ಹೆಣ್ಣುಮಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ರಕ್ತ ದಾನ ಬಳಗ ಬಳಗಕ್ಕೆ  ಸಂದೇಶ ಬಂದಾಗ ಕೂಡಲೇ ಎಚ್ಚೆತ್ತುಕೊಂಡ ಒಂದಿಷ್ಟು ಸೇವಾಕರ್ತರು ತಕ್ಷಣ ಆ ಆಸ್ಪತ್ರೆಗೆ ಹೋಗಿ ಹೆಣ್ಣುಮಗಳ ಅವಶ್ಯಕತೆಗೆ ರಕ್ತ ಕೊಟ್ಟು  ಸಹಾಯ ಮಾಡಿ ತಾಯಿ-ಮಗುವಿನ ಪ್ರಾಣವನ್ನು ಉಳಿಸುವಂತಹ ಅಳಿಲು ಸೇವೆ. ಇಂತಹ ಜಾಲತಾಣಗಳಲ್ಲಿ ನಡೆದಿದೆ ಇದರಿಂದ ಅದೆಷ್ಟೋ ಜನರಿಗೆ ಯಾವ ಸಂದರ್ಭಕ್ಕೆ ಯಾರಿಂದ ಸಹಾಯ ಆಗುತ್ತದೆ ಅಂತ ಹೇಳಲಿಕ್ಕಾಗುವುದಿಲ್ಲ ಹಾಗೆಯೇ ಪ್ರತಿಯೊಬ್ಬರು ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಡೆಯಲಿ ಎನ್ನುವ ಆಶಯದೊಂದಿಗೆ.🎄🌲🌱🌴..


ನಾಗರತ್ನ ಹೆಚ್ ಎಂ

ಚಂದಾಪುರ✍🏻💐💐💐💐💐

[17/06, 7:16 PM] Nandini Vivek: ಚಿಂತನ ಮಂಥನ.


*ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಸ್ಪರ್ಧೆಗಳಿಂದ ಆಗುವ ಲಾಭ ನಷ್ಟಗಳು*.


 ನನ್ನ ಪ್ರಕಾರ ಈ ರೀತಿಯಾದ ಸಾಹಿತ್ಯ ಸ್ಪರ್ಧೆಗಳಲ್ಲಿ ನಾನು ಕಲಿತಿದ್ದೇ ಹೆಚ್ಚು, ಪ್ರತಿನಿತ್ಯವೂ ಒಂದಿಲ್ಲೊಂದು ಬಳಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ವಿಚಾರಗಳು ತಿಳಿದುಕೊಳ್ಳುತ್ತಿದ್ದೇನೆ, ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವಂತೆ ಬಳಗ ಗಳಲ್ಲಿ ಕವನಗಳ ಬರೆದು ನೋಡು ಎನ್ನುವ ಹಾಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ... ನೆನ್ನೆಗಿಂತ ಇಂದು, ಇಂದಿಗಿಂತ ನಾಳೆ, ಉತ್ತಮ ಬರವಣಿಗೆಯನ್ನು ಪಡೆಯಲು ಸಹಾಯಕವಾಗುತ್ತದೆ ಈ ಸ್ಪರ್ಧೆಗಳು..



ನನ್ನಂತಹ ಅನೇಕ ಗೃಹಿಣಿಯರಿಗೆ ಬರೆಯಲು ಅವಕಾಶ ಸಿಗುವುದೇ ಕಡಿಮೆ ಆದರೆ ಈ ರೀತಿಯ ಸ್ಪರ್ಧೆಗಳನ್ನು ನಡೆಸುವುದರಿಂದ ನಾವು ಮನೆಯಲ್ಲೇ ಕುಳಿತು ಎಲ್ಲವನ್ನೂ ಕಲಿತು ಬರೆದು ಅವುಗಳಿಗೆ ವಿಮರ್ಶೆಯನ್ನು ಪಡೆಯುತ್ತೇವೆ ತಪ್ಪಿದ್ದರೆ ತಿದ್ದಿಕೊಂಡು ಸರಿ ಇದ್ದರೆ ಪ್ರಶಂಸೆ ಗಳಿಸಿ ಖುಷಿ ಪಡುತ್ತೇವೆ.. ನಮ್ಮ ಜೀವನ ಇಷ್ಟೇ ಎನ್ನುವ ಬದಲು ನಾವು ಜೀವನದಲ್ಲಿ ಎಷ್ಟೆಲ್ಲ ಕಲಿತಿದ್ದೇವೆ ಎನ್ನುವ ಹೆಮ್ಮೆಯ ಭಾವ ಮೂಡುತ್ತದೆ. ನಮ್ಮ ಅಸ್ಥಿತ್ವವನ್ನು ಗುರುತಿಸಿಕೊಳ್ಳಲು ಸಿಗುವ ಅವಕಾಶ ದಂತಾಗುತ್ತದೆ..



 ನಮಗೆ ಅನಿಸಿದ್ದನ್ನು ಅನಿಸಿದ ರೀತಿಯಲ್ಲಿ ಬರೆಯುವುದು ದೊಡ್ಡದೇನಲ್ಲ,ಕಥೆ ರೂಪದಲ್ಲಿ ಲೇಖನಗಳ ರೂಪದಲ್ಲಿ ಬರೆಯಬಹುದು, ಸಮಯ ಹಾಗೂ ಸ್ಥಳವಿದ್ದರೆ ಕಾದಂಬರಿಗಳ ರೂಪದಲ್ಲೂ ಬರೆಯುತ್ತೇವೆ ಆದರೆ ಅವರು ಕೊಟ್ಟ ನಿಯಮಗಳನ್ನು ಪಾಲಿಸಿ ಇಷ್ಟೇ ಲೈನುಗಳನ್ನು ತುಂಬಿಸಿ ಹೀಗೆ ಅಂತ್ಯಪ್ರಾಸ ವನ್ನು ಮಾಡಬೇಕು ಎಂದು ತಿಳಿಸಿದಾಗ ನಮಗೆ ಪ್ರತಿಯೊಂದು ಅಕ್ಷರದ ಮಹತ್ವವು ತಿಳಿಯುತ್ತದೆ ಅನಾವಶ್ಯಕವಾಗಿ ಪದ ಬಳಸುವುದನ್ನು ನಿಲ್ಲಿಸುತ್ತೇವೆ. ಒಂದು ಪೂರ್ಣವಿರಾಮ,ಅಲ್ಪ ವಿರಾಮ, ಒಂದು ಅಕ್ಷರ ಹೆಚ್ಚು ಬಳಸಿದರೆ ಉಂಟಾಗುವ ಅನಾನುಕೂಲ ಹೀಗೆ ಪ್ರತಿಯೊಂದರ ಬೆಲೆಯೂ ಗೊತ್ತಾಗುತ್ತದೆ.


 

 ಹೊಸ ಹೊಸ ಕವನ ರಚನೆಯ ವಿಧಾನಗಳನ್ನು ಕಲಿಯಲು ಪ್ರಯತ್ನಿಸುತ್ತೇವೆ ನಮ್ಮ ತಲೆಗೆ ಕೆಲಸ ಕೊಡುತ್ತೇವೆ ಹೀಗೆ ಅಂತ್ಯಪ್ರಾಸ ಬರಬೇಕು ಎಂದಾಗ ತಲೆ ಓಡಿಸುತ್ತೇವೆ.. ನಿರ್ದಿಷ್ಟ ಸಮಯದಲ್ಲಿ ಬರೆಯುವುದನ್ನು ಕಲಿಯುತ್ತೇವೆ..


 ಸ್ಪರ್ಧೆಗಳಲ್ಲಿ  ಸೋತರೆ ಮುಂದಿನ ಬಾರಿ ಗೆಲ್ಲಬೇಕು ಎನ್ನುವ ಛಲ ಬರುತ್ತದೆ ಮತ್ತೊಮ್ಮೆ ಗೆದ್ದರೆ ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಹಠ ಬರುತ್ತದೆ..

 ಆದರೆ ಚಿಕ್ಕ ಮಕ್ಕಳಿರುವ ನನ್ನಂತ ತಾಯಂದಿರಿಗೆ ಹಾಗೂ ಉದ್ಯೋಗಸ್ಥ ಗಂಡಂದಿರಿಗೆ ಊಟ-ತಿಂಡಿ- ಕಾಫಿಗೆ ಕಳಿಸಲು ಹೋಗುವ ಗೃಹಿಣಿಯರಿಗೆ  ಅನಾನುಕೂಲ ವೇನೆಂದರೆ ಕೆಲವೊಮ್ಮೆ ಸ್ಪರ್ಧೆಗಳನ್ನು 6:00 ಕ್ಕೆ ತಿಳಿಸಿ  ಒಂಬತ್ತುವರೆಗೆ ಕಳಿಸಬೇಕು ಎಂದಾಗ ನಮಗೆ  ಸ್ವಲ್ಪ ಕಷ್ಟವಾಗುತ್ತದೆ  ಆಗ ಮಕ್ಕಳು ಶಾಲೆಯಿಂದ ಬರುವ ಸಮಯ ಅವರಿಗೆ ತಿನ್ನಿಸಿ ಮನೆಯಲ್ಲಿ ಇರುವವರಿಗೆ ಕಾಫಿ ಟೀ ಮಾಡಿಕೊಟ್ಟು ಮಕ್ಕಳಿಗೆ ಹೋಮವರ್ಕ್ ಮಾಡಿಸುವ ಸಮಯ ಶುರುವಾಗುತ್ತದೆ ಆದ್ದರಿಂದ ಬರೆಯಲು ಕಷ್ಟವಾಗುತ್ತದೆ..  ಅದರ ಬದಲು ಬೆಳಗ್ಗೆಯೋ ಮಧ್ಯಾಹ್ನವೋ ತಿಳಿಸಿದರೆ ಬಿಡುವಿನ ಸಮಯದಲ್ಲಿ  ನಾವು ಮಕ್ಕಳು ಬರುವುದರೊಳಗಾಗಿ ಬರೆದು ಮುಗಿಸಿ ಆರು ಗಂಟೆಯ ಮೇಲೆ ಅದನ್ನು ಲಗತ್ತಿಸುತ್ತೆವೆ..

 ಆಗ ಮಕ್ಕಳಿಗೂ, ಪತಿಗೂ, ಬರವಣಿಗೆಗೂ ಗುಣಮಟ್ಟದ ಸಮಯವನ್ನು ಕೊಟ್ಟಂತಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ..

 ಮಕ್ಕಳು ಸ್ವಲ್ಪ ದೊಡ್ಡವರ್ ಇರುವವರಿಗೆ ಇದು ಸಮಸ್ಯೆಯಾಗುವುದಿಲ್ಲ.


 ದೃಷ್ಟಿಯಂತೆ ಸೃಷ್ಟಿ ಎನ್ನುವಂತೆ ಸ್ಪರ್ಧೆಗಳನ್ನು ಹಾಗೂ ಅದರ ನಿಯಮಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ ಅದು ನಮಗೆ  ಲಾಭವಾಗುತ್ತದೆ,, ಅವುಗಳಲ್ಲಿನ  ಸಣ್ಣಪುಟ್ಟ ನಿಯಮಗಳನ್ನು ಲೋಪದೋಷಗಳನ್ನು ಪರಿಗಣಿಸಿದರೆ ಅದು ನಮಗೆ ನಕಾರಾತ್ಮಕವಾಗಿ ಕಂಡು ನಷ್ಟಗಳೇನುಸುತ್ತವೆ..

 ಹಾಗಾಗಿ ಈ ರೀತಿಯ ಸ್ಪರ್ಧೆಗಳಿಂದ ನನಗೆ ಲಾಭವಾಗಿದ್ದೆ ಹೆಚ್ಚು..



 *ನಂದಿನಿ ವಿವೇಕ್*

 ಹೊಸದುರ್ಗ

[17/06, 7:54 PM] Bahubali Mama Jkd: ಬತ್ತದ ತೊರೆ 

ಚಿಂತನ ಮಂಥನ ವಿಭಾಗದಲ್ಲಿ ಕಿರು ಲೇಖನ ಸ್ಪರ್ಧೆಗಾಗಿ 


ವಿಷಯ:-ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಯಿಂದ ಉಂಟಾಗುವ ಲಾಭ-ನಷ್ಟ


       ನಮಸ್ತೆ ಸರ್/ ಮೇಡಂ ಇವತ್ತಿನ ಚಿಂತನ ಮಂಥನ ವಿಷಯವು ನಾನಾಗಿಯೇ ಹೇಳಬೇಕೆಂದಿರುವ ವಿಷಯವಾಗಿದೆ. ಇವತ್ತು ತಾನಾಗಿಯೇ ಅವಕಾಶ ಒದಗಿ ಬಂದಂತಾಗಿದೆ. ಸುಮಾರು 1990 ರಿಂದ ಜೈನ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿ ಜಿನಭಜನಾ ಪದಗಳು ಆರತಿ ಪದಗಳು, ತತ್ವಪದಗಳು, ಒಟ್ಟಿನಲ್ಲಿ ಭಕ್ತಿಗೀತೆಗಳನ್ನು ಬರೆಯಲು ಪ್ರಾರಂಭಿಸಿದವನು. ನನಗೆ ಪರಿಚಯದ ಗಾಯಕರಿಗೆ ಹಾಡುಗಳನ್ನು ಕೊಡುತ್ತಿದ್ದೆ ಅವರು ಎಲ್ಲ ದಾರ್ಮಿಕ ಸಭೆ ಸಮಾರಂಭಗಳಲ್ಲಿ ಹಾಡುತ್ತಿದ್ದರು. ಒಳ್ಳೆಯ ಗಾಯಕರಿಂದ ಸುಮಾರು 10-12 ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. 

ನನ್ನ ಕೃತಿಗಳು

1) ಜಿನಭಕ್ತಿ ಗೀತ ಮಾಲಾ 2) ಚಿಂತಾಮಣಿ 3) ಕಾಲಮಾನ 4) ಜಿನಜಾನಪದ 5) ಜಿನಭಕ್ತಿ ಗೀತಸಾರ, ಇವು ನನ್ನ ಮುದ್ರಣಗೊಂಡ ಕೃತಿಗಳಾಗಿವೆ. ನಾನು ಮೊದಲು ಆಗೊಂದು ಈಗೊಂದು ಕವನಗಳನ್ನು ಬರೆಯುತ್ತಿದ್ದೆ, ಆದರೆ 2-3 ವರ್ಷಗಳಿಂದ ಇಂತಹ ಗ್ರೂಪಿನಲ್ಲಿ ಸೇರಿಕೊಂಡಾಗಿನಿಂದ ಎಲ್ಲ ತರಹದ ಕವನ, ಕವಿತ, ಜಡೆಗವನ, ತ್ರಿಪದಿಗಳು, ಹಾಯ್ಕುಗಳು, ಚಿತ್ರ ಕವನ, ಸಾಲಿಗೊಂದು ಕವನ, ಸುನೀತ, ಚಚೌಕ ಸುನೀತ, ಗಜ‌ಲ್, ನ್ಯಾನೋಕತೆ, ಸಣ್ಣಕತಗಳು, ಚುಟುಕುಗಳು, ಹನಿಗವನಗಳು ಒಂದೇ.. ಎರಡೇ.. ನನಗೆ ಗೊತ್ತೇ ಇರದ ಸಾಹಿತ್ಯಲೋಕಕ್ಕೆ ಈ ಸಾಮಾಜಿಕ ಜಾಲತನವು ಕರೆದುಕೊಂಡು ಹೋಗಿದೆ, ಇದರಲ್ಲಿ ಸಾಕಷ್ಟು ಕಲಿತಿದ್ದೇನೆ, ಇನ್ನೂ ಕಲಿಯುತ್ತಿರುವ ವಿದ್ಯಾರ್ಥಿಯಾಗಿದ್ದೇನೆ. ಪ್ರತಿಯೊಂದು ಸಾಮಾಜಿಕ ಜಾಲತನದ ಸಂಸ್ಥೆಗಳು ವಿವಿಧ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿವೆ, ಬರಹಗಾರರಿಗೆ ಪ್ರೋತ್ಸಾಹವಾಗಿ ಅತ್ಯುತ್ತಮ, ಉತ್ತಮ, ಮೆಚ್ಚುಗೆ ಹೀಗೆ ಹುರಿದುಂಬಿಸಿ ನಮ್ಮನ್ನು ಪ್ರತಿ ದಿನ  ಬರೆಯುವಂತೆ ಮಾಡುತ್ತೀವೆ ಪುಸ್ತಕ ಬಹುಮಾನ ನೀಡಿ ಗೌರವಿಸಿದ್ದಾರೆ, ಪ್ರಮಾಣ ಪತ್ರಗಳು, ಅಭಿನಂದನಾ ಪತ್ರಗಳು ಲಭಿಸಿವೆ, ಸಾಕಷ್ಟು ಹೊಸ ಹೊಸ ಕವಿಗಳ ಪರಿಚಯವಾಯಿತು ನೇರವಾಗಿ ಸಾಹಿತ್ಯ ಗೆಳೆಯರಾದರು. ನಮಗೆ ತಿಳಿಯದ ವಿಷಯ ಅವರಿಂದ, ಅವರಿಗೆ ತಿಳಿಯದ ವಿಷಯ ನಮ್ಮಿಂದ ಕಲಿಯಲು ಅನೂಕೂಲವಾಯಿತು. ನನಗೆ ಅನಿಸಿದಹಾಗೆ ನಷ್ಟ ಅಂತ ಏನೂ ಆಗಿಲ್ಲಿ ಎಲ್ಲವು ಲಾಭವಾಗಿದೆ. ಈ 2-3 ವಷಗಳಲ್ಲಿ ಜಮಖಂಡಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 4 ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ದೊರೆಯಿತು, ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವಕಾಶ ದೊರಕಿತು. ಈಗ ಹಾಲಿಯಾಗಿ ಜಮಖಂಡಿ ತಾಲೂಪಾ ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತಿನ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೂ ಜಮಖಂಡಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು?  ನನಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಲಾಭವನ್ನು ಪಡೆದಿರುವೆ. ಇನ್ನು ನಷ್ಟವೆಂದರೆ ನಾನು ಯಾವಾಗ ಯಾವಾಗ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲವೂ ಅದೇ ನನಗೆ ತುಂಬಲಾರದ ನಷ್ಟವೆಂದು ಅಂದುಕೊಂಡಿರುವೆ ನಮ್ಮ ಬಳಗದ ಎಲ್ಲ ಅಡ್ಮೀನಗಳಿಗೆ ನಿರ್ಣಾಯಕರಿಗೂ ನನ್ನೆಲ್ಲ ಕವಿ ಮಿತ್ರರಿಗೂ ಹೃದಯತುಂಬಿ ನಮಸ್ಕರಿಸಿ ಅಭಿನಂದಿಸುವೆ.


✍️ಬಾಹುಬಲಿ ಬಿರಾದಾರ ಪಾಟೀಲ ಜಮಖಂಡಿ

[17/06, 8:00 PM] Jyotibha Sir:       

ಬತ್ತದ ತೊರೆ ಸ್ನೇಹ ಬಳಗ


ಸ್ಪರ್ಧೆಗಾಗಿ=ಚಿಂತನ ಮಂಥನ


ವಿಷಯ =ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಸ್ಪರ್ಧೆಗಳಿಂದ ಆಗುವ ಲಾಭ ನಷ್ಟ 




   ಕವಿಯಾಗುವ ಮೊದಲು ಕಿವಿಯಾಗು ಎಂಬ ಮಾತು ಎಲ್ಲರಿಗೂ ತಿಳಿದಿರುವುದೇ. ಈಗ ನಾವು ಯಾವುದೇ ಒಂದು ವಿಷಯದ ಬಗ್ಗೆ ಕಥೆ, ಕವಿತೆ, ಲೇಖನ ಅಲ್ಲದೇ ಇನ್ನಾವುದೇ ಸಾಹಿತ್ಯ ಪ್ರಕಾರಗಳನ್ನು ಬರೆಯುತ್ತೇವೆ ಎಂದರೇ,ಜೊತೆಗೆ ಅದು ಪರಿಪೂರ್ಣ ಅನಿಸಬೇಕೆಂದರೇ,ಅದರ ಬಗ್ಗೆ ನಮಗೇ ಒಂದು ಅನುಭವ, ಅಧ್ಯಯನ ಆ ವಿಷಯದ ಬಗ್ಗೆ ಒಂದಿಷ್ಟು ಮಾಹಿತಿ ಬೇಕೇ ಬೇಕು.ಮೊದಲೆಲ್ಲ ಒಂದು ಕೃತಿ ಹೊರ ಬರಬೇಕಾದರೆ ಅದರ ಕರ್ತೃ ಅಂದರೇ ಕವಿ ಸ್ವತಃ ತನ್ನ ಬರಹಕ್ಕೆ ಬೇಕಾದ ವಸ್ತುವನ್ನು ಹುಡುಕಿಕೊಂಡು ಇಲ್ಲವೇ ಆ ಒಂದು ಸ್ಥಿತಿಯಲ್ಲಿ ಒಳಹೊಕ್ಕು ಬರೆಯುತ್ತಿದ್ದನ್ನು. ಜೊತೆಗೆ ಅದಕ್ಕೆ ತಕ್ಕಂತ ಸುಂದರ ಪರಿಸರವನ್ನು ಕೂಡ ಬಯಸುತ್ತಿದ್ದನ್ನು.


  ಇಂದಿನ ದಿನಮಾನದದಲ್ಲಿ ಅನೇಕ ಸಾಮಾಜಿಕ ಜಾಲ ತಾಣಗಳಲ್ಲಿ ಸುಮಾರು ಸಾಹಿತ್ಯ ಬಳಗಗಳು ಹುಟ್ಟಿಕೊಂಡಿವೆ.ಅದರಲ್ಲಿ ಕೈಗೊಳ್ಳುವ ಸ್ಪರ್ಧೆಗಳು ಕೂಡ ಹಲವು ಪ್ರಕಾರಗಳಲ್ಲಿ ಇರುತ್ತವೆ.ಜೊತೆಗೆ ಆ ಸ್ಪರ್ಧೆಗೆ ಕೆಲವು ನಿಭಂದನೆಗಳು ಕೂಡ. ಮೊದಲಿಗೆ ಸಮಯ. ಇಷ್ಟೇ ಸಮಯದಲ್ಲಿ ಬರೆಯಬೇಕು. ಇನ್ನೊಂದು ಇಷ್ಟೇ ಸಾಲು, ಇಷ್ಟೇ ಪದಗಳು, ಇಷ್ಟೇ ವಾಕ್ಯಗಳು ಎಂದು,ಜೊತೆಗೆ ವಿಷಯ, ದತ್ತಪದ, ಪ್ರಕಾರ ಗಳು ಕೂಡ ಇರುತ್ತವೆ.


   ಈ ಒಂದು ಸಾಮಾಜಿಕ ಜಾಲತಾಣದಲ್ಲಿ ಏರ್ಪಡಿಸುವ ಸ್ಪರ್ಧೆಗಳಲ್ಲಿ ಹಲವು ಲಾಭ, ನಷ್ಟ ಉಂಟು, ಸುಮಾರು ದುರುಪಯೋಗಗಳು ಕೂಡ ಉಂಟು.ಮೊಟ್ಟಮೊದಲನೇದಾಗಿ ಕೃತಿ ಚೌರ್ಯ ಇದು ಈಗ ಎಲ್ಲೇಡೆ ಹಬ್ಬಿ ಬಿಟ್ಟಿದೆ, ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುವ ಎಷ್ಟೋ ಜನರ ಕವನ ಕಥೆಗಳನ್ನು ಕದ್ದು ತಮ್ಮ ಹೆಸರು ಹಾಕಿ ಬೇರೊಂದು ಬಳಗದಲ್ಲಿ ತಮ್ಮದೇ ಎಂದು ಪ್ರಕಟಿಸುವುದು.


  ಎರಡನೇದಾಗಿ, ಈ ಸ್ಪರ್ಧೆಗಳಲ್ಲಿ ಕೊಡುವ ವಿಷಯ ಜೊತೆಗೆ ಇಷ್ಟೇ ಪದಗಳು ಎಂಬುದು, ಈ ರೀತಿಯಾದಾಗ ಕವಿಯು ಆ ಒಂದು ವಿಷಯವನ್ನು ಪೂರ್ಣವಾಗಿ ಹೇಳಲಾಗದೆ ಆ ವಿಷಯಕ್ಕೆ ನ್ಯಾಯ ಒದಗಿಸುವುದು ಒಂದು ರೀತಿಯಲ್ಲಿ ಕಡಿಮೆ ಅನಿಸಿದರೆ, ಇನ್ನೊಂದು ಕೋನದಲ್ಲಿ ನೋಡಿದಾಗ ಕವಿಯಾದವನು ಆ ಒಂದು ವಿಷಯವನ್ನು ಅಷ್ಟೇ ಸೀಮಿತ ಅವಧಿ, ಸೀಮಿತ ಪದಗಳಲ್ಲಿ ಎಷ್ಟು ಪರಿಪೂರ್ಣವಾಗಿ ಆ ಒಂದು ವಿಷಯವನ್ನು ಹೇಳುವನು ಎಂಬುದು ಕವಿಯ ಚಾಕಚಖ್ಯತೆಯನ್ನು ಕೂಡ ತೋರಿಸುತ್ತದೆ.


  ಮೂರನೇದಾಗಿ ಕೊಟ್ಟಂತ ಸಮಯದಲ್ಲಿ ವಿಷಯವನ್ನು ಅರ್ಥ ಮಾಡಿಕೊಳ್ಳದೆ ಸಹಿತ ಏನೋ ಒಂದು ಬರೆದು ಕಳುಹಿಸುವ ಅಗತ್ಯ ಕೂಡ ಉಂಟು.


  ಈ ರೀತಿ ಒಂದು ಕಡೆ ಆದರೆ ಇನ್ನೊಂದು ರೀತಿಯಲ್ಲಿ ಈ ಸಾಮಾಜಿಕ ಜಾಲತಾಣದ ಕೆಲವು ಸ್ಪರ್ಧೆಗಳಲ್ಲಿ ಕೊಟ್ಟಂತ ವಿಷಯಗಳು. ಆ ವಿಷಯಗಳಿಗೆ ತಕ್ಕದಾಗಿ ಬರೆಯಬೇಕೆಂದಾಗ ಆ ವಿಷಯದ ಬಗ್ಗೆ ಕೆಲವು ಕಡೆ ಸರ್ಚ್ ಮಾಡಿ, ಆ ವಿಷಯದ ಬಗ್ಗೆ ತಿಳಿದುಕೊಂಡಾಗ ಎಷ್ಟೋ ವಿಷಯದ ಅರಿವು ನಮಗೇ ಮೂಡುತ್ತದೆ.ಜೊತೆಗೆ ಹಲವು ಗೊತ್ತಿಲ್ಲದ ಪ್ರಕಾರಗಳನ್ನು ಕೂಡ ತಿಳಿದುಕೊಳ್ಳುವಂತಾಗುತ್ತದೆ.ಆ ಪ್ರಕಾರಗಳಲ್ಲಿ ಬರಹಗಳನ್ನು ಬರೆದು ಕರಗತ ಮಾಡಿಕೊಳ್ಳುತ್ತಾ ಹೋಗಬಹುದು. ಅದರಂತೆ ಕರಗತ ಮಾಡಿಕೊಂಡು ಕೃತಿಯನ್ನು ಹೊರ ತಂದವರು ಇದ್ದಾರೆ ಕೂಡ.


   ಎಲ್ಲ ರಂಗದಲ್ಲಿ ಇರುವಂತೆ  ಸಾಮಾಜಿಕ ಜಾಲತಾಣದ ಸಾಹಿತ್ಯ ಸ್ಪರ್ಧೆಗಳಲ್ಲಿ ಅನುಕೂಲ, ಅನಾನುಕೂಲ, ಉಪಯೋಗ, ದುರುಪಯೋಗ ಎಲ್ಲವೂ ಉಂಟು. ಅದನ್ನು ಸರಿಯಾದ ಉದ್ದೇಶ, ಸ್ವಚ್ಛ ಮನಸ್ಸು ಇಟ್ಟುಕೊಂಡು ಸಾಹಿತ್ಯದಲ್ಲಿ ನಮನ್ನು ನಾವು ಮನಪೂರ್ವಕವಾಗಿ ಅರ್ಪಿಸಿಕೊಂಡು ಕನ್ನಡ ತಾಯಿಯ ಸೇವೆಯನ್ನು ಮಾಡಿದರೆ, ಆಳವಾದ ಜ್ಞಾನ ದೊರೆಯುತ್ತದೆ.ಜೊತೆಗೆ ಸ್ಪರ್ಧೆ ನಡೆಸುವವರು ಕೂಡ ಹೊಸಬರಿಗೆ ಸರಿಯಾದ ಮಾರ್ಗದರ್ಶನ ಕೊಟ್ಟು, ಹಿರಿಯ ಕವಿಗಳಿಂದ ಸಲಹೆ ಪಡೆದು ಉತ್ತಮ ವೇದಿಕೆಯನ್ನಾಗಿ ಮಾಡಿ, ಸರಿತಪ್ಪುಗಳ ತಿದ್ದಿ ಹೇಳಿ ಬಳಗವನ್ನು ಚಂದವಾಗಿ, ನಂದನವನದಂತೆ ನಡೆಸಿಕೊಂಡು ಹೋದರೆ,ಬೇರೊಂದು ಬಳಗಕ್ಕೆ ಸ್ಫೂರ್ತಿಯು ಆಗುತ್ತದೆ.

 ಧನ್ಯವಾದಗಳು



          ✍️ಪೇಟೆಕವಿ

ಜ್ಯೋತಿಭಾ. ಎನ್. ಚಿಲ್ಲಣ್ಣವರ 


  

[17/06, 8:12 PM] Shankar Kulal Teacher: ಸ್ಪರ್ಧೆಗೆ - ಚಿಂತನ ಮಂಥನ.ಕಿರು ಲೇಖನ


ಶೀರ್ಷಿಕೆ - ಎಲೆ ಮರೆಯ ಕಾಯಿಗಳು


        ಜಾಲತಾಣಗಳಲ್ಲಿನ ಸಾಹಿತ್ಯ ಬಳಗದ ಸ್ಪರ್ಧೆಗಳು ಇಂದಿನ ದಿನಗಳ ಹೊಸ ಟ್ರೆಂಡ್ ಎಂದರೂ ತಪ್ಪಾಗಲಾರದು.ಇಂದು ಜಾಲತಾಣದಲ್ಲಿ ಹತ್ತು ಹಲವು ಸಾಹಿತ್ಯ ಬಳಗಗಳಿವೆ.ಅದಕ್ಕೆ ಸದಸ್ಯರನ್ನು ಸೇರಿಸಿ ಕೊಳ್ಳುತ್ತಾರೆ.ಅಥವಾ ಇನ್ನಾರೋ ಸೇರಿಸುತ್ತಾರೆ.ಆ ಬಳಗದಲ್ಲಿ ಸಾಹಿತ್ಯದ ಬಗ್ಗೆ ಚರ್ಚೆ ಸ್ಪರ್ಧೆಗಳು ನಡೆಯುತ್ತವೆ.ಅದರಲ್ಲಿ ಅತ್ಯುತ್ತಮ, ಉತ್ತಮ, ಮೆಚ್ಚುಗೆ ಎಂಬ ವಿಭಾಗ ಮಾಡಿ ಬರೆದ ಲೇಖನವೋ ಕವನವೋ ಯಾವುದೇ ವಿಭಾಗದಲ್ಲಿ ಪ್ರಶಸ್ತಿ ಬಂದಲ್ಲಿ ಕವಿಗಾಗುವ ಆ ಸಂತೋಷ ಹೇಳ ತೀರವಂತಹುದಲ್ಲ.ಇದು ಆ ಕವಿಗೆ ಇನ್ನೂ ಉತ್ತಮ ಮಟ್ಟದಲ್ಲಿ ಬರೆಯಲು ಪ್ರೇರೇಪಿಸುತ್ತದೆ.ಇದರಿಂದ ಎಲೆ ಮರೆಯ ಕಾಯಿಯಂತಿದ್ದ ಕವಿಯೊಬ್ಬ ಬೆಳಕಿಗೆ ಬಂದಂತಾಗುತ್ತದೆ.ಇದು ಸ್ಪರ್ಧೆಗಳಿಂದಾಗುವ ಬಲು ದೊಡ್ಡ ಲಾಭ.

        ಈ ಸಾಹಿತ್ಯ ಬಳಗದಿಂದ ಭಾವಗೀತೆ, ಗಝಲ್,ಹೈಕು, ಚುಟುಕು,ಹನಿಗವನ ಜಡೆಕವನ,ಮುಕ್ತಕಗಳ ರಚನೆ ಆಸಕ್ತಿ ಯಿದ್ದವರಿಗೆ ವರದಾನವಾಗಿ ಕಲಿತಂತಾಗುತ್ತದೆ.ಕೆಲವು ಕವಿಗಳು ಮುಂದುವರಿದು ಪುಸ್ತಕಗಳ ರಚನೆಯನ್ನೂ ಮಾಡುವಂತಾಯಿತು.ಅಲ್ಲದೆ ಅವರ ಬರೆವಣಿಗೆಯಲ್ಲಿ ಮೇಲ್ಪಟ್ಟದ ವಿಷಯಗಳೂ ಒಳಗೊಳ್ಳುವುದು ಕಂಡು ಬರಲು ಸಾಧ್ಯವಾಯಿತು.ಹೊಸ ಕವಿಗಳ ಉದಯಕ್ಕೊಂದು ವೇದಿಕೆಯಾಯಿತು...

          ಜಾಲತಾಣಗಳ ವೇದಿಕೆಯಲ್ಲಿ ಇದೀಗ ಹಲವಾರು ಸಾಹಿತ್ಯ ಬಳಗಗಳು ಹುಟ್ಟಿ ಕೊಂಡಿವೆ.ಅವರೂ ಕೂಡ ವಿವಿಧ ಆಸೆ ಆಮಿಷಗಳ ಮೂಲಕ ಕವಿಗಳನ್ನು ತಮ್ಮ ಬಳಗಕ್ಕೆ ಸೇರಿಸಿ ಕೊಳ್ಳುತ್ತಾರೆ.ಹೀಗಾಗಿ ಸಾಹಿತ್ಯ ಬಳಗಗಳ ನಡುವೆಯೇ ಸ್ಫರ್ಧೆ ಉಂಟಾಗುತ್ತದೆ.ಅದು ಆರೋಗ್ಯ ಕರವಾಗಿದ್ದರೆ ಒಳ್ಳೆಯದೆ.ಅದರಲ್ಲೂ ಕೆಲವು ಬಳಗದವರ ಒಳಗುಟ್ಟೇನು ಎಂಬುದೇ ಅರಿವಾಗುತಿಲ್ಲ.ಅದೆಲ್ಲ ಕವಿಗಳಿಗೆ ಸಂಬಂಧ ಪಟ್ಟುದಲ್ಲ.

       ಕವಿಗಳು ಬರೆದುದನ್ನು ಉತ್ತೇಜಿಸುವ ನಿಲುವಿಂದ ಕೆಲವರು ವಾರೆ ವಾಹ್ ಎಂದು ಹೊಗಳಿದರೆ ನನ್ನಂತಹ ಕವಿಗಳು ಅಟ್ಟಕ್ಕೇರುವ ಚೆಂದ ನೋಡಬೇಕು.ಕೆಲವೇ ದಿನಗಳಲ್ಲಿ ಅರಿವಾಗಿ ನಿಜ ಕವಿಗಳಾಗುತ್ತಾರೆ.

          ಏನೇ ಆಗಲಿ ಹಲವಾರು ಮರಿ ಕವಿಗಳು ಬೆಳಕಿಗೆ ಬರುವುದರಲ್ಲಿ ಸಂಶಯವಿಲ್ಲ.ಹಿರಿಯರಿಗಂತೂ ಸಮಯದ ಸದುಪಯೋಗ ಕ್ಕೆ ದಾರಿಯಾಗಿದೆ...


ಶಂಕರ ಕುಲಾಲ ಪರ್ಕಳ

ಉಡುಪಿ ತಾಲೂಕು ಮತ್ತು ಜಿಲ್ಲೆ

[17/06, 8:19 PM] ParimaLa NM: ಸ್ಪರ್ಧೆಗಾಗಿ ಕಿರುಲೇಖನ


ವಿಷಯ :ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಸ್ಪರ್ಧೆಗಳಿಂದ ಆಗುವ ಲಾಭಗಳು


ಬರೆದೆ ಪುಟ್ಟ ಪುಟ್ಟ ಕವಿತೆ

ಪ್ರಕಟಿಸಲು ಅವಕಾಶದ ಕೊರತೆ 

ಕೈಬೀಸಿ ಕರೆಯಿತು ಜಾಲತಾಣ

ಕವಿಮನಕೆ ಪ್ರೋತ್ಸಾಹ ತಾಣ

ತಪ್ಪನು ತಿದ್ದಿದ ಮಾರ್ಗದರ್ಶಕ

ನನಗದೇ ಬೆಳೆಯಲು ಪ್ರೇರಕ


            ಸಾಮಾಜಿಕ ಜಾಲತಾಣ  ಬರಹಗಾರರ ಗುರುಕುಲ..ಪ್ರೋತ್ಸಾಹಕ, ಮಾರ್ಗದರ್ಶಕ. ಎಷ್ಟೋ ಲೇಖಕರಿಗೆ, ಸಾಹಿತಿಗಳಿಗೆ ಕವಿಮನಗಳಿಗೆ ಅವರ ಬರಹಗಳಿಗೆ ಪ್ರೋತ್ಸಾಹದ ಕೊರತೆ ಇರುತ್ತದೆ. ಬರೆಯುತ್ತಾರೆ.. ಪ್ರಕಟಿಸಲು ಅವಕಾಶ ಇರುವುದಿಲ್ಲ.. ಅವರ ಬರಹ ಸರಿ ಇದೆಯೇ ಇಲ್ಲವೇ ಎಂದು ನೋಡುವ ಮನಸ್ಸು ಅವರು ವಾಸಿಸುವ ಪರಿಸರದಲ್ಲಿ ಇರುವುದಿಲ್ಲ. ಅಂತಹವರಿಗೆ ಸಾಮಾಜಿಕ ಜಾಲತಾಣ ಬಹುದೊಡ್ಡ ವರಪ್ರಸಾದವಾಗಿದೆ.


            ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಬರಹಗಾರರಿಗೆ ತಮ್ಮ ಬರಹಗಳನ್ನು ಪ್ರಕಟಿಸಲು ಮುಕ್ತ ಅವಕಾಶ ಸಿಗುತ್ತದೆ. ಅದರಲ್ಲಿ ಇರುವ ಸದಸ್ಯರು ಅನುಭವಿ ಕವಿಗಳು, ಲೇಖಕರು, ಸಾಹಿತಿಗಳು ಇತರರ ಬರಹಗಳನ್ನು ಓದಿ ತಪ್ಪುಗಳನ್ನು ತಿದ್ದಿ ಸರಿಪಡಿಸುತ್ತಾರೆ. ಕಿರಿಯ ಬರಹಗಾರರು ಬೆಳೆಯಲು ಪ್ರೋತ್ಸಾಹ ನೀಡುತ್ತಾರೆ. ಎಲೆಮರೆಯ ಕಾಯಿಯಂತಿರುವ ಎಷ್ಟೋ ಬರಹಗಾರರು ಹೊರಬರಲು ಉತ್ತಮ ಅವಕಾಶ ದೊರೆಯುತ್ತದೆ ಇಂತಹ ಸ್ಪರ್ಧೆಗಳಿಂದ ತಮ್ಮ ಬರಹಗಳ ಸ್ವವಿಮರ್ಶೆಗೆ ಸದಾವಕಾಶ ದೊರೆಯುತ್ತದೆ


         ಬರಹಗಾರರು ಸಾಮಾಜಿಕಜಾಲತಾಣಗಳನ್ನು ಸದುಪಯೋಗಪಡಿಸಿಕೊಳ್ಳಬೇಕು... ತಾವೂ ಬೆಳೆಯಬೇಕು.. ಇತರರನ್ನು ಬೆಳೆಸಬೇಕು



ಪರಿಮಳ ಐವರ್ನಾಡು ಸುಳ್ಯ

[17/06, 8:28 PM] Sumangala VK Madm: ಬತ್ತದ ತೊರೆ ಸ್ನೇಹ ಬಳಗ ವತಿಯಿಂದ ಚಿಂತನ ಮಂಥನ ಕಿರು ಲೇಖನ ಸ್ಪರ್ಧೆ


ವಿಷಯ: ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಗಳಿಂದ ಉಂಟಾಗುವ ಲಾಭ -ನಷ್ಟಗಳು



          ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಬಳಗದಲ್ಲಿ ನಡೆಯುವ ಸ್ಪರ್ಧೆಗಳಿಂದ ಲಾಭವೇ ಆಗುತ್ತದೆ. ನಾನು ಮೊದಲು ಚಿಕ್ಕ ಚಿಕ್ಕ ಕವನಗಳನ್ನು ಬರೆಯುತ್ತಿದ್ದೇನು. ಆದರೆ ಎಷ್ಟರ ಮಟ್ಟಿಗೆ ಸರಿ, ಎಷ್ಟರ ತಪ್ಪು ಎಂದು ನನಗೆ ತಿಳಿದಿರಲಿಲ್ಲ. ಸಾಹಿತ್ಯ ಬಳಗಕ್ಕೆ ಸೇರಿದಾಗ ನಾನು ಬರೆದ ಕವನಗಳನ್ನು ಹಾಕುತ್ತಿದ್ದೇನು, ಆಗ ಎಲ್ಲರೂ ಚೆನ್ನಾಗಿ ಬರೆದಿದ್ದೀರಿ ಎನ್ನುತ್ತಿದ್ದರು. ನಂತರ ಬತ್ತದ ತೊರೆ ಸ್ನೇಹ ಬಳಗ ಸೇರಿದೆ ಈ ಬಳಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಅನೇಕ ವಿಷಯಗಳು ತಿಳಿದವು. ಅನೇಕ ಸಾಹಿತ್ಯದ ಪ್ರಕಾರಗಳು ತಿಳಿದವು. ಅದರ ನಿಯಮಗಳು, ಇತಿಮಿತಿಗಳು ತಿಳಿದವು. ಹಾಗೆ ನಾವು ಬರೆಯುವಾಗ ಮಾಡುವ ತಪ್ಪು ತಡೆಗಳು ತಿಳಿತಾ ಬಂತು. ಹಾಗೆ ಅನೇಕ ಗುಂಪುಗಳಿಂದ ನಾವು ಬರೆದಿರುವ ಲೇಖನಗಳನ್ನು ಕವನಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅವಕಾಶ ಸಿಕ್ಕಿತು. ಅದನ್ನು ಓದಿ ಬೇರೆಯವರು ಪ್ರತಿಕ್ರಿಯೆ ನೀಡುವುದರಿಂದ ಸಿಗುವ ಸಂತೋಷ ಇದೆ ಅಲ್ಲಾ ಅದು ಬೇರೆ ಎಲ್ಲೂ ಸಿಗುವುದಿಲ್ಲ. ಈ ಸ್ಪರ್ಧೆಗಳಿಂದ ಬರುವ ಫಲಿತಾಂಶದ ಬಗ್ಗೆ ಕಾತುರತೆ ನಂತರ ಫಲಿತಾಂಶ ತಿಳಿದಾಗ ಆಗುವ ಸಂತೋಷ ಹೇಳತೀರದು. ಒಂದು ವೇಳೆ ಫಲಿತಾಂಶದಲ್ಲಿ ನಮ್ಮ ಹೆಸರು ಬಂದಿರದೇ ಇದ್ದರೆ ಬೇಜಾರಿಲ್ಲ ಏಕೆಂದರೆ ಬರವಣಿಗೆಯನ್ನು ಏಕೆ ಪರಿಗಣಿಸಿಲ್ಲ?, ಎಂಬುದರ ಬಗ್ಗೆ ಫಲಿತಾಂಶದ ನಂತರ ನಿರ್ಣಾಯಕರ ಮಾತು ಎಂದು ಅದರ ಕಾರಣವನ್ನು ತಿಳಿಸುತ್ತಾರೆ. ಇದರಿಂದ ಕಲಿಯುವ ಹಂಬಲ, ಬರೆಯುವ ಬಯಕೆ ಹೆಚ್ಚುತ್ತದೆ ಹೊರತು ಕುಗ್ಗುವುದಿಲ್ಲ. ಹಾಗೆಯೇ ಸ್ಪರ್ಧೆ ಎಂದರೆ ಹಿಂದಿನ ಕಾಲದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ನಿರ್ದಿಷ್ಟ ಸಮಯದಲ್ಲೇ ಮಾಡಬೇಕಿತ್ತು. ಅದರ ಪ್ರಯೋಜನ ತುಂಬಾ ಜನಕ್ಕೆ ಆಗುತ್ತಿರಲಿಲ್ಲ. ಆದರೆ ಈ ಜಾಲತಾಣಗಳಿಂದ ರಾಜ್ಯದ ಮೂಲೆ ಮೂಲೆಗಳಿಂದ, ದೇಶದ ಮೂಲೆ ಮೂಲೆಗಳಿಂದ ಜನರು ಭಾಗವಹಿಸುವ ಅವಕಾಶ ದೊರೆತಿದೆ. ದೊಡ್ಡ ದೊಡ್ಡ ಸಾಹಿತಿಗಳ ಪರಿಚಯ ಆಗುತ್ತಿದೆ. ಹಾಗೆಯೇ ಸ್ಪರ್ಧೆಯಿಂದ ಸುಂದರವಾದ ಪ್ರಶಸ್ತಿಗಳು ದೊರೆಯುತ್ತಿವೆ. 


 *ಕು.ಸುಮಂಗಲಾ.ವಿಕೆ* 

ಧಾರವಾಡ

[17/06, 8:28 PM] Shamachandra Madm: ಸ್ಪರ್ಧೆಗಾಗಿ

ವಿಷಯ: ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗಗಳಲ್ಲಿ ನಡೆಸುವ ಸ್ಪರ್ಧೆಗಳಿಂದ ಉಂಟಾಗುವ ಲಾಭ ನಷ್ಟಗಳು


ಶೀರ್ಷಿಕೆ: *ಇರಲಿ ಬಳಗಗಳಲ್ಲಿ ನಿಷ್ಟೆ* 


ನಮಸ್ತೇ


ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಬಳಗಗಳು ತುಂಬಾ ಹುಟ್ಟಿಕೊಂಡಿವೆ. ಕೆಲವರು ಇನ್ನೊಬ್ಬರ ಮೇಲಿನ ಸ್ಪರ್ಧೆಗಾಗಿಯೋ ಅಥವಾ ಬೇರೆ ಉದ್ದೇಶಕ್ಕಾಗಿಯೋ ಮಾಡುವರು. ಒಂದೊಂದು ಬಳಗಕ್ಕೂ ನಿಯಮಗಳು ಒಂದೊಂದು ರೀತಿ. ನಡೆಸುವ ಸ್ಪರ್ಧೆಗಳಿಂದ ಕೆಲವರಿಗೆ ಹೆಮ್ಮೆ ಎನಿಸುವುದು ಕೆಲವರಿಗೆ ಬೇಸರ ಅನಿಸಬಹುದು. ಆದರೆ ಕಲಿಕೆಯ ಭಾವನೆಯಿಂದ ಬರೆದಾಗ ಅಷ್ಟೇ ಅದಕ್ಕೊಂದು ಅರ್ಥ ಮತ್ತು ಬೆಲೆ ಅನಿಸುತ್ತೆ. ಪ್ರತಿಯೊಬ್ಬ ಸದಸ್ಯರು ವೈಯಕ್ತಿಕವಾಗಿ ಯಾರಿಗೂ ಪರಿಚಯ ಇರುವುದಿಲ್ಲ. ಈ ಸ್ಪರ್ಧೆ ಎಷ್ಟೋ ಜನರನ್ನು ಪರಿಚಯಿಸುತ್ತದೆ, ಆತ್ಮೀಯ ಬಂಧುಗಳಾಗಿ ಮಾರ್ಪಡಿಸುತ್ತದೆ. ಆದರೆ ಸಿಗುವ ಸ್ಥಾನ ಮಾನಗಳು ಕೆಲವರನ್ನು ಜಿದ್ದಾಜಿದ್ದಿ ಯಾಗಿ ಮಾರ್ಪಾಡು ಮಾಡುತ್ತದೆ. ಇದು ಬರಹಕ್ಕೆ ಹಾಗು ಸಾಹಿತ್ಯಕ್ಕೆ ಮಾಡುವ ಅವಮಾನ ಎನಿಸುತ್ತದೆ. 

ಎಷ್ಟೋ ಜನರಿಗೆ ಬರೆಯ ಬೇಕೆಂಬ ಹಂಬಲ,ತುಡಿತ ಇರುವುದು. ಅದಕ್ಕೆ ಸರಿಯಾದ ವೇದಿಕೆ, ಧೈರ್ಯ, ಪ್ರೋತ್ಸಾಹ ಎಲ್ಲವೂ ಈ ತರ ಬಳಗಗಳಲ್ಲಿ ದೊರೆಯುತ್ತದೆ. ಕಲಿಸುವ ಮನಸುಗಳು ಇರುವಾಗ ಕಲಿಯುವ ಮನಸಿಗೆ ಒಂದು ಏಣಿ ಸಿಗುವಂತಾಗುವುದು. ಆದರೆ ಕೆಲವೊಮ್ಮೆ ಕೆಲವರು ಎಲ್ಲಾ ಬಳಗಗಳಲ್ಲಿ ಇರುವವರು      ಅಳೆಯಲು ಶುರುಮಾಡುತ್ತಾರೆ. ಅಲ್ಲಿಂದಿಲ್ಲಿಗೆ ಲಾಭ ನಷ್ಟ ಯೋಚಿಸುತ್ತಾರೆ. ಎಲ್ಲಾ ಕಡೆಗೂ ಮೇಲಿನ ಸ್ಥಾನದಲ್ಲಿ ಇರಬೇಕು ಎಂದು ಯೋಚಿಸಿ ಕೆಳಗಿನ ಸ್ಥಾನ ಬಂದಾಗ ಎಲ್ಲಿ ತಪ್ಪಾಗಿದೆ ಎಂದು ಯೋಚಿಸದೆ ಬಳಗವೇ ಸರಿ ಇಲ್ಲ ಎನ್ನುವ ಮನಸ್ಥಿತಿಗೆ ಬರುತ್ತಾರೆ. ಇದು ಸರಿಯಲ್ಲ. ಎಲ್ಲರ ಯೋಚನಾ ಲಹರಿ ಒಂದೇ ಇರುವುದಿಲ್ಲ. ಹಾಗಾಗಿ ಸ್ಥಾನ ಮುಖ್ಯವಲ್ಲ ಕಲಿಕೆ ಮುಖ್ಯ ಎನ್ನುವಂತಿರಬೇಕು. ಜೊತೆಗೆ ಬಳಗಗಳು ಸೌಹಾರ್ದ ವೇದಿಕೆಯಾಗಬೇಕು. 

ಎಷ್ಟೋ ಜನರು ಈ ಬಳಗಗಳನ್ನು ಬೇರೆ ರೀತಿಯಲ್ಲಿ ಬಳಸಿಕೊಂಡಾಗ ಎಲ್ಲವೂ ನಷ್ಟವೇ ಆಗುವುದು. ಬಳಗ ಎಂದರೆ ಒಂದು ಕುಟುಂಬ ಇದ್ದಂತೆ. ಇಲ್ಲಿ ಆಗು ಹೋಗುಗಳು ಅಲ್ಲಿಂದಿಲ್ಲಿಗೆ ಮರೆತು ನಾಡು ನುಡಿಯನು ಬೆಳೆಸುವ ನಿಟ್ಟಿನಲ್ಲಿ ಸಾಗಬೇಕು. ಸ್ಪರ್ಧೆಗಳು ಸ್ಪರ್ಧೆಯಾಗಿಯೇ ಇರಬೇಕು ಅದರ ಹೊರತಾಗಿ ವೈಯಕ್ತಿಕ ಬದುಕಿನಲ್ಲಿ ಪ್ರವೇಶ ಮಾಡಬಾರದು. . ಇರುವ ಚೆಂದದ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಸಾಹಿತ್ಯ ಸೇವೆ ಮಾಡಬೇಕು. ಬಳಗಗಳ ನಡುವೆ ಕಿಚ್ಚು ಹಚ್ಚುವಂತೆ ಇರಬಾರದು. ನಡೆಸುವ ಸ್ಪರ್ಧೆಗಳಿಂದ ಪ್ರೋತ್ಸಾಹಿತರಾಗಿ ಬರೆಯಬೇಕು, ಬೆರೆಯಬೇಕು. ಇರುವ ಬಳಗಕ್ಕೆ ನಿಷ್ಟೆ ಇರಬೇಕು.  ಬತ್ತದ ತೊರೆಯಂತೆ ನಿರಂತರ ಸಾಗಬೇಕು. 


ಧನ್ಯವಾದಗಳು


*ಶಮಾಚಂದ್ರ*

*ಸಾಗರ*

[17/06, 8:34 PM] Vijaya G. Madam Wrtr: *ಬತ್ತದ ತೊರೆ ಸ್ನೇಹ ಬಳಗ,*

ದಿನಾಂಕ-17-06-2022

ಚಿಂತನ ಮಂಥನ ವಿಭಾಗದಲ್ಲಿ ಕಿರುಲೇಖನ ಸ್ಪರ್ಧೆ

     ವಿಷಯ: ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಗಳಿಂದ ಉಂಟಾಗುವ ಲಾಭ ನಷ್ಟಗಳು.

****************************

 ಸಾಹಿತ್ಯ ಪ್ರೇಮಿಗಳಿಗೆ  ಪ್ರೋತ್ಸಾಹ ನೀಡುತ್ತ, ವರವಾದ ವೇದಿಕೆಗಳು

****************************

ಜಗತ್ತಿನಲ್ಲಿ ಎಲ್ಲೆಡೆಗೂ ಕರೊನಾ ತನ್ನ ಕಬಂಧ ಬಾಹುಗಳನ್ನು ಚಾಚಿ ಜನಜೀವನವೆಲ್ಲ ಅಸ್ತವ್ಯಸ್ತಗೊಂಡಿತ್ತು. ಎಲ್ಲ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡವು. ಎಲ್ಲೆಡೆ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯದೇ ಇದ್ದಾಗ, ವರವಾಗಿ , ಜಾಲತಾಣದಲ್ಲಿ ಕಾಣಿಸಿಕೊಂಡ ವೇದಿಕೆಗಳಿಂದ, ಮಂಕಾದ ಬುದ್ಧಿಗೆ ಚಾಲನೆ ದೊರೆಯಿತು. ಬರೆಯುವ, ಬರೆಯುವದಕ್ಕಾಗಿ ಓದುವ ಹವ್ಯಾಸಗಳು ಹೆಚ್ಚಿದವು. ಬರೀ ಕವನಕ್ಕೋ, ಕತೆ ಬರೆಯುವದಕ್ಕೋ ಸೀಮಿತವಾದ ಬರವಣಿಗೆಯ ರೂಪ ವಿಸ್ತಾರಗೊಂಡಿತು. ರುಬಾಯಿ, ಟಂಕಾ, ಅಬಾಬಿ, ನ್ಯಾನೊಕತೆ, ಹಾಯ್ಕು, ಮುಕ್ತಕ, ಚುಟುಕು, ಛಂದಸ್ಸು, ಜಾನಪದ ತ್ರಿಪದಿ, ಲಲಿತ ಪ್ರಬಂಧ, ನೀತಿಕತೆ, ಶಿಶುಗೀತೆ ಮುಂತಾದ ಹತ್ತು ಹಲವು ಬಗೆಯ ಕಾವ್ಯ ರೂಪಗಳ ಪರಿಚಯವಾಗಿದ್ದು ವೇದಿಕೆಗಳಿಂದ. ಅಲ್ಲದೇ ದಿನಕ್ಕೊಂದೋ, ವಾರಕ್ಕೊಂದೋ ಸ್ಪರ್ಧೆಯಿಟ್ಟು, ಅತ್ಯುತ್ತಮ, ಉತ್ತಮ, ಮೆಚ್ಚುಗೆಯ ಸ್ಥಾನ ಕೊಟ್ಟು, ಪ್ರೋತ್ಸಾಹಿಸುವ ರೀತಿಯಿಂದ, ಬರೆಯುವ ತುಮುಲ ಹೆಚ್ಚಿತು. ಗೆದ್ದಾಗ ಕೊಡುವ ಅಮೂಲ್ಯ ಪುಸ್ತಕಗಳು, ಅಭಿನಂದನಾ ಪತ್ರಗಳು, ಕಳೆದ ಬಾಲ್ಯದ ನೆನಪುಗಳನ್ನು, ಸಂತಸವನ್ನು ಮರುಕಳಿಸಿದವು. ಇನ್ನು ಇಷ್ಟು ಸಾಲು ಬರೆಯಿರಿ ಎಂದಾಗ, ಕೆಲವೊಮ್ಮೆ ಸಮಯದ ಅಭಾವವಿದ್ದಾಗ, ಕೆಲಸದ ಒತ್ತಡವಿದ್ದಾಗ, "ಅಯ್ಯೋ, ಇಷ್ಟು ಪದಗಳನ್ನು ಬರೆಯುವದು, ನನ್ನಿಂದ ಸಾಧ್ಯವೇ?" ಅನ್ನಿಸಿದರೂ, ಬರೆಯುವದಕ್ಕೆ, ಬರವಣಿಗೆಯಲ್ಲಿ ತಪ್ಪಾಗದಿರುವದಕ್ಕೆ , ಸಹಕಾರಿಯಾಗಿದ್ದು ಈ ನಿಯಮಗಳೆ. ಸ್ಪರ್ಧೆ ಅಂದಾಗ ನಿಯಮಕ್ಕೆ ಬದ್ಧರಾಗಿ ಬರೆದಾಗ ಮಾತ್ರ ಅದು ಸ್ಪರ್ಧೆ ಅನ್ನಿಸಿಕೊಳ್ಳುತ್ತದೆ ಅಲ್ಲವೇ? ಹಾಗಿರುವಾಗ ನಿಯಮಗಳು ಕಠಿಣ ಇರಬಹುದು ಅಥವಾ ಸುಲಭವೇ ಇರಬಹುದು. ಅದಕ್ಕೆ ಬದ್ಧರಾಗಿ ಸ್ಪರ್ಧಾಳುಗಳು ಇರಬೇಕು. ಅಲ್ಲದೇ ಭಾಗವಹಿಸದಿದ್ದರೆ ನಷ್ಟ ನಮಗೆ. ನಿಜ ಹೇಳಬೇಕೆಂದರೆ, ಜಂಗಮವಾಣಿಯಲ್ಲಿ, ಸುಲಲಿತವಾಗಿ ಪದಗಳನ್ನು ತಪ್ಪಿಲ್ಲದಂತೆ ಬರೆಯಲು ಕಳಿಸಿರುವದೇ ಈ ವೇದಿಕೆಯ ಸ್ಪರ್ಧೆಗಳು. ದಿನವೂ ಸ್ಪರ್ಧೆಯ ವಿಷಯ ಏನಿರಬಹುದು ಎಂಬ ಕುತೂಹಲ, ನಾನು ಹಿಂದಿನಬಾರಿಗಿಂತ ಈ ಬಾರಿ ಚೆನ್ನಾಗಿ ಬರೆಯಬೇಕು ಎಂಬ ಆಸಕ್ತಿ, ಪರಸ್ಪರ ಬರೆಯುವ ಸಾಹಿತ್ಯಗಳನ್ನು ಓದಿ ಕಲಿಯುವಿಕೆ ಇವೆಲ್ಲಾ ಸಾಧ್ಯವಾಗಿದ್ದು ವೇದಿಕೆಯಿಂದ. ನನಗಂತೂ ಸ್ಪರ್ಧೆಗಳಿಂದ ನಷ್ಟ ಎಂಬುದು ಇಲ್ಲವೇ ಇಲ್ಲ. ಕಂಡು ಕೇಳಿ ಸರಿಯಾದ ಬಾಂಧವ್ಯ ಬೆಸೆದಿದೆ ಇಲ್ಲಿ. ದೂರದೂರಿನ ಸಾಹಿತ್ಯ ದಿಗ್ಗಜರ ಪರಿಚಯವಾಗಿದ್ದು ವೇದಿಕೆಗಳಿಂದ. ನೋಡಿ, ಹರಿನರಸಿಂಹ ಸರ್, ತುಳಸಿ ಮೇಡಂ, ಚಂದ್ರಿಕಾ ಮೇಡಂ ಯಾರು  ಗೊತ್ತಿರಲಿಲ್ಲ. ಹಾಗೆಯೇ ನಮ್ಮ ಪರಿಚಯ ಯಾರಿಗೂ ಇರಲಿಲ್ಲ. ವೇದಿಕೆಯಲ್ಲಿ ಬರೆಯುವ ಸ್ಪರ್ಧಿಗ ಳು ಯಾರೂ ಗೊತ್ತಿರಲಿಲ್ಲ. ಆದರೆ ಈಗ ವೇದಿಕೆಗಳಿಂದ ನಮ್ಮ ಕುಟುಂಬ ವಸುದೈವ ಕುಟುಂಬವಾಗಿದೆ. ಇದಕ್ಕಿಂತ ಲಾಭ ಮತ್ತೆ ಬೇರೆ ಏನಿದೆ ಹೇಳಿ ??


ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ(ಉತ್ತರ ಕನ್ನಡ )

[17/06, 8:41 PM] Nagveni Hiremath: ಇಂದಿನ ಸ್ಪರ್ಧೆಗಾಗಿ.

ವಿಷಯ ....ಸಾಮಾಜಿಕ ಜಾಲ ತಾಣಗಳಲ್ಲಿ ನಡೆಯುವ ಸಾಹಿತ್ಯ ಸ್ಪರ್ಧೆಗಳಿಂದ ಆಗುವ ಲಾಭ   ನಸ್ಟ.


ಇಂದು  ಜಾಲತಾಣಗಳಲ್ಲಿ ನಡೆಯುವ ಸಾಹಿತ್ಯ ಸ್ಪರ್ಧೆಗಳ ಟ್ರೆಂಡ್ ಶುರುವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.


ಎಲ್ಲಿ ನೋಡಿದರೂ ಇಂಥ ಹಲವಾರು  ಸಾಹಿತ್ಯ ಗುಂಪುಗಳು ಹುಟ್ಟಿವೆ.ಇದರಿಂದ ಹಲವಾರು ಅನುಕೂಲಗಳು ಇವೆ .


 ಬಹಳಷ್ಟು ಇಂತಹ ಗುಂಪುಗಳಿದ್ದು ಇದರಲ್ಲಿ ಬರಹಗಾರರು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಅವಕಾಶವನ್ನು ಕಲ್ಪಿಸಿಕೊಡುತ್ತಿವೆ. ಹೊಸ ಹೊಸ ಪ್ರತಿಭೆಗಳ ಪರಿಚಯ ಸಾಹಿತ್ಯಲೋಕಕ್ಕೆ ಆಗುತ್ತಿದೆ.


ಅದೆಷ್ಟೋ  ಗೃಹಣಿಯರು ವಿದ್ಯಾರ್ಥಿಗಳು, ಶಿಕ್ಷಣ ಕ್ಷೇತ್ರ,ಹಾಗೂ ಇತರ ಕೆಲಸಗಳಲ್ಲು ತೊಡಗಿದ ಜನರು  ತಮ್ಮ ಬಿಡುವಿನ ಸಮಯದಲ್ಲಿ ತಮಗಿಷ್ಟವಾದ  ಸಾಹಿತ್ಯ ಪ್ರಕಾರವನ್ನು ರಚಿಸಲು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ  ಮುಖಾಂತರ ಅವರ ಬರವಣಿಗೆಗೆ ಸ್ಫೂರ್ತಿ ದೊರೆಯುತ್ತಿದೆ.


 ಸ್ಪರ್ಧೆಗಳಲ್ಲಿ  ಭಾಗವಹಿಸುವುದರ ಮುಖಾಂತರ ಅವರ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಹಾಗೂ ಅವರಿಗೆ ಪ್ರೋತ್ಸಾಹ ದೊರೆಯುತ್ತಿದ್ದು ಅವರು ತಮ್ಮ ಸಾಹಿತ್ಯ ಸೇವೆಯನ್ನು ಮುಂದುವರೆಸಲು ಸಹಾಯವಾಗುತ್ತಿದೆ.ಅದೆಷ್ಟೋ  ಎಲೆಮರೆಯ ಕಾಯಿಯಂತೆ ಇದ್ದ  ಬರಹಗಾರರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಾದರ  ಮುಖಾಂತರ ತಮ್ಮನ್ನು ಗುರುತಿಸಿಕೊಳ್ಳಲು ಕೂಡ ತುಂಬಾ ಸಹಾಯಕವಾಗಿದೆ. ಆದ್ದರಿಂದ ಜಾಲತಾಣಗಳಲ್ಲಿ ನಡೆಯುವಂತಹ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹಳಷ್ಟು ಪ್ರತಿಭೆಗಳು ಸಾಹಿತ್ಯದ ಬಗ್ಗೆ ಅರಿಯಲು ಹಾಗೂ ಹಿರಿಯ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯಲು ಅನುಕೂಲ ಮಾಡಿಕೊಟ್ಟಿದೆ.



 ನಾನು ಕೂಡ ಕೇವಲ ಹವ್ಯಾಸಕ್ಕಾಗಿ ಬರೆಯುತ್ತಿದ್ದೆ ಆದರೆ ಇಂದು ನಾನು ಕೂಡ ಕೆಲವೊಂದು ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಹೊಸ ವಿಷಯಗಳನ್ನು ಕಲಿಯುವುದಕ್ಕೆ ಸಾಧ್ಯವಾಗಿದೆ. ನನಗೆ ಸುಮ್ಮನೆ ಮನಸ್ಸಿಗೆ ತೋಚಿದ್ದನ್ನು ಮಾತ್ರ ಒಂದು ನಾಲ್ಕು ಸಾಲು ಬರೆಯುತ್ತಿದ್ದೆ ಆದರೆ ಇನ್ನು ಸ್ಪರ್ಧೆಯಲ್ಲಿ ಹಾಕುವ ನಿಯಮಗಳನ್ನು ನೋಡಿಕೊಂಡು.ಕವಿತೆಗಳ ರಚನೆ,ಸಾನೆಟ್,ಮುಕ್ತಕ, ಹೈಕುಗಳು ಇವೆಲ್ಲವುಗಳ ಬಗ್ಗೆ ತಿಳಿದುಕೊಳ್ಳಲು ತುಂಬಾ ಸಹಾಯಕವಾಗಿದೆ. ಇವುಗಳ ಬಗ್ಗೆ ಮೊದಲು ನನಗೆ ಅಷ್ಟೊಂದು ತಿಳುವಳಿಕೆ ಇರಲಿಲ್ಲ ಆದರೆ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ನಾನು ಕೂಡ ಇಂದು ಸ್ವಲ್ಪಮಟ್ಟಿಗೆ ಇವುಗಳೆಲ್ಲವನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ ಆದ್ದರಿಂದ ಜಾಲತಾಣಗಳಿಂದ ಬಹಳಷ್ಟು ಹೊಸ ಬರಹಗಾರರಿಗೆ ಪ್ರೋತ್ಸಾಹ ದೇರೆಯುತ್ತಿದ್ದು  ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿರಿಯರ ಮಾರ್ಗದರ್ಶನ ಅವರು ಕೊಡುವ ಸಲಹೆ , ಅವರು ಕೊಡುವ ಪ್ರೋತ್ಸಾಹವೇ ಇಂದಿನ ಬರವಣಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.


ಆದರೆ ಇನ್ನೊಂದು ಕಡೆ ಈ ಜಾಲತಾಣಗಳಿಂದ ಕೆಲವೊಂದು ನಷ್ಟಗಳು ಕೂಡ ಆಗುತ್ತಿವೆ ಎಂದರೆ ತಪ್ಪಾಗಲಾರದು ಏಕೆಂದರೆ ಇಂದಿನ ಜಾಲತಾಣಗಳಲ್ಲಿ ನಡೆಯುವ ಸ್ಪರ್ಧೆಗಳು ಕೇವಲ ತೋರಿಕೆಗಾಗಿ ಮಾತ್ರ ಅನ್ನಿಸುತ್ತದೆ. ಇಲ್ಲಿ ಕೂಡ ಕೆಲವೊಮ್ಮೆ ಪಕ್ಷಪಾತಗಳು ನಡೆಯುತ್ತವೆ ಎನಿಸುತ್ತದೆ ತಮಗೆ ಬೇಕಾದ ಅಥವಾ ತಮಗೆ ಪರಿಚಯವಿರುವ ಅಂತಹ ಸಾಹಿತಿಗಳಿಗೆ ಮಾತ್ರ ಪ್ರೋತ್ಸಾಹಕೊಟ್ಟು ಉಳಿದವರನ್ನು  ಕಡೆಗಣಿಸುವುದು ಕೂಡ ಕೆಲವೊಮ್ಮೆ ನಡೆಯುತ್ತದೆ ನಿಷ್ಪಕ್ಷಪಾತವಾಗಿ ಆಗಬೇಕು ಬೇಕಾದ ಬರಹಗಾರಿಗೆ ಮಾತ್ರ ಪ್ರೋತ್ಸಾಹ ನೀಡುವುದು ಅವರಿಗೆ ಮಾತ್ರ ಆದ್ಯತೆ ನೀಡುವುದು ತಪ್ಪಾಗುತ್ತದೆ ನಿಜವಾದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಬೆನ್ನುತಟ್ಟುವ ಕಾರ್ಯ ನಡೆಯಬೇಕು.ಅಲ್ಲದೆ ಜಾಲತಾಣಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಕೃತಿಚೌರ್ಯ ಕೂಡ ಇತ್ತೀಚೆಗೆ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ.ಒಂದು ಗುಂಪಿನಲ್ಲಿ ಇರುವ ಕವಿಗಳ ಸಾಹಿತ್ಯ ಕದ್ದು  ಮತ್ತೊಂದು ಬಳಗದಲ್ಲಿ ಅದನ್ನು ತಮ್ಮ ಹೆಸರಿನಲ್ಲಿ ಉಪಯೋಗ  ಮಾಡಿಕೊಳ್ಳುವುದು ಇಂತಹ ಕಾರ್ಯಗಳು ನಡೆಯುತ್ತಿದೆ.ಇದನ್ನು  ನೋಡಿದಾಗ ಮನಸ್ಸಿಗೆ ತುಂಬಾ ಬೇಜಾರು ಆಗುತ್ತದೆ. ವಿಧ್ಯೆ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ .ಯಾವುದು ತಮಗೆ ಬರುತ್ತದೆಯೋ ಅದನ್ನು ಸರಿಯಾದ ರೀತಿಯಲ್ಲಿ ಬರವಣಿಗೆ ರೂಪದಲ್ಲಿ ತರುಲು  ಪ್ರಯತ್ನಿಸಬೇಕೇ ಹೊರತು ಇನ್ನೊಬ್ಬರ ಸಾಹಿತ್ಯ ಕದಿಯುವುದು ಖಂಡಿತ ಸಲ್ಲದು..ಬರವಣಿಗೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಒಂದು ವೇದಿಕೆ .ಅದನ್ನು ಸರಿಯಾದ ರೂಪದಲ್ಲಿ ಬಳಸಿಕೊಂಡು ತಮ್ಮ ಪ್ರತಿಭೆ ತೀರಬೇಕು. ಯಾವುದೇ ಬರಹಗಾರರು ತಮಗೆ ಅನಿಸಿದ್ದನ್ನು ನಿಷ್ಪಕ್ಷಪಾತವಾಗಿ ತಮಗೆ ಬಂದಷ್ಟು ಬರವಣಿಗೆ ರೂಪದಲ್ಲಿತ ರಬೇಕು. ಖಂಡಿತ ಒಂದಿಲ್ಲ ಒಂದು ದಿನ ಅವರಿಗೂ ಕೂಡ  ವಿದ್ಯೆ ಒಲಿಯುತ್ತದೆ.


ಸಾಹಿತ್ಯ ಅನ್ನೋದು ಒಂದು ವಿಶೇಷ ವಿಶಿಷ್ಟ ಜ್ಞಾನ ಅದನ್ನು ಪಡೆಯಲು ನಿರಂತರ ಪರಿಶ್ರಮ. ಪ್ರಯತ್ನ ಬೇಕು ಖಂಡಿತ ನಾವು ಸ್ವಲ್ಪ ಮಟ್ಟಿಗಾದರೂ ನಮ್ಮ ಸಾಹಿತ್ಯ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.


ನಾಗವೇಣಿ ಹೀರೆಮಠ

ಕಲಬುರ್ಗಿ.

[17/06, 8:41 PM] Rupa2: ಚಿಂತನ‌ ಮಂಥನ ವಿಭಾಗದ ಶುಕ್ರವಾರದ ಸ್ಪರ್ಧೆಗಾಗಿ..


ವಿಷಯ:ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಗಳಿಂದ ಉಂಟಾಗುವ ಲಾಭ ನಷ್ಟಗಳು


ಶೀರ್ಷಿಕೆ: ಇತಿಮಿತಿಯನ್ನರಿತು...



ಸಾಮಾಜಿಕ ಜಾಲತಾಣಗಳು ಇಂದು ಎಲ್ಲರಿಗೂ ಸುಲಭದಲ್ಲಿ ಎಟುಕುವ ಮಾಧ್ಯಮಗಳು. ಸುದ್ದಿಬಿತ್ತರದ ಜೊತೆಗೆ ಅನೇಕ ಮಾಹಿತಿಗಳು ಲಭ್ಯ.ಮನೋರಂಜನೆಯನ್ನೂ ನೀಡುತ್ತವೆ...ಇತ್ತೀಚೆಗೆ ಜಾಲತಾಣಗಳಲ್ಲಿ ಅದರಲ್ಲೂ ವಿಶೇಷವಾಗಿ ಮುಖಪುಸ್ತಕ, ಚರವಾಣಿಗಳಲ್ಲಿ  ಸಾಹಿತ್ಯ ಬಳಗಗಳು ವಿವಿಧ ಸ್ಪರ್ಧೆಗಳನ್ನು ನಡೆಸಿ ಸದಸ್ಯರ ಬರಹಗಳಿಗೊಂದು ವೇದಿಕೆಯ ಜೊತೆಗೆ ಸಾಹಿತ್ಯಆಸಕ್ತಿಯನ್ನು ಹೆಚ್ಚಿಸುವಲ್ಲಿ ಸಫಲಗೊಂಡಿವೆ.


ಇದರಿಂದ

ನನ್ನ ಪ್ರಕಾರ ಲಾಭ,ನಷ್ಟ ಎರಡೂ ಇದೆ..


ಮೊದಲು *ಲಾಭಗಳನ್ನು* ತಿಳಿಯೋಣ..


ವಿರಾಮದ ವೇಳೆಯ ಸದುಪಯೋಗ, ಬರಹದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಿಕೆ,ಯಾಂತ್ರಿಕ ಬದುಕಿನಿಂದ ಹೊರಬರಲು ಸಹಕಾರಿ ಅದರಲ್ಲೂ ಮನೆಯಲ್ಲಿರುವ ಮಹಿಳೆಯರಿಗೆ ಏಕತಾನತೆಯಿಂದ ಹೊರಬರಲು, ತಮ್ಮ ಬರಹದ ಕೌಶಲ್ಯದ ವರ್ಧನೆಗೆ,ಮನಸ್ಸಿನ ದುಗುಡವನ್ನು ಕಡಿಮೆಗೊಳಿಸಲು,ಚಿಂತೆ ಮರೆಸಲು,ಹೊಸ ಹೊಸ ಸಾಹಿತ್ಯ ಪ್ರಕಾರಗಳನ್ನು ಕಲಿಯಲು, ಹೊಸ ಚಿಂತನೆಗಳನ್ನು ಅಳವಡಿಸಲು, ಉತ್ಸಾಹ ಕಂಡುಕೊಳ್ಳಲು,ಸಾಹಿತ್ಯ ಆಸಕ್ತಿ ಬೆಳೆಸಲು,ಸರಿ,ತಪ್ಪುಗಳ ವಿವೇಚನೆ, ದಿನನಿತ್ಯದ ಆಗುಹೋಗುಗಳ ಅರಿವಿಗೆ, ನೋವು ಮರೆಯಲು,ನಗು ಪಡೆಯಲು,ಓದುವ ಹವ್ಯಾಸ ಹೆಚ್ಚಿಸಲು...ಹೀಗೆ ಅನೇಕ ಉಪಯೋಗಗಳಿವೆ..


ನಷ್ಟಗಳು..


ದೈನಿಕ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ವಿಷಾದನೀಯ.ಸ್ಪರ್ಧೆಗಳಲ್ಲಿ ಪೈಪೋಟಿಯಿದ್ದಾಗ ದ್ವೇಷ ಬೆಳೆಸಿಕೊಳ್ಳುವ ಭೀತಿ. ಸಾಯಂಕಾಲದ ಸಮಯ ಸ್ಪರ್ಧೆಯಿದ್ದಲ್ಲಿ ಮಹಿಳೆಯರು ದೇವರ ನಾಮ ಸ್ಮರಣೆ,ಭಜನೆ ಮೊಟಕುಗೊಳಿಸಿ ಬರಹಗಳಲ್ಲಿ ತೊಡಗಿಸಿಕೊಳ್ಳುವಿಕೆ, ಅಡುಗೆ ಗಳಲ್ಲೂ ವೈವಿಧ್ಯತೆ ಇಲ್ಲದೆ ಏನೋ ಒಂದು ಮಾಡಿಟ್ಟು ಬರಹದಲ್ಲಿ ತೊಡಗಿಸಿಕೊಳ್ಳುವುದು,ಮಕ್ಕಳ ಬಗ್ಗೆ ಗಮನ ಕಡಿಮೆಯಾಗುವಿಕೆ, ಕೂತಲ್ಲೇ ಕೂತು ಮೊಬೈಲ್ ನೋಡುವುದರಿಂದ ಬೊಜ್ಜಿನ ಸಮಸ್ಯೆ ಅಂದರೆ ವ್ಯಾಯಾಮ‌ ಕಡಿಮೆಯಾಗುವುದು, ಬಳಗಗಳಲ್ಲಿ ಹೊಸಬರ ಪರಿಚಯ,ಮಾತುಕತೆ..ಕೆಲವೊಮ್ಮೆ ಪ್ರೇಮಪ್ರಸಂಗಗಳು ಮನೆ ಕೆಡಿಸುವ ಮಟ್ಟಕ್ಕಿಳಿಯಲೂಬಹುದು...ಒಲೆಯಲ್ಲಿ ಅಡುಗೆಯನ್ನಿಟ್ಟು ವಾಟ್ಸಪ್ ನೋಡಲುತೊಡಗಿದಲ್ಲಿ ತಳಹತ್ತಿ ಸೀದ ವಾಸನೆ ಬಂದಾಗಲೇ ಅರಿವಾಗುವುದು...ಔದಾಸ್ಯ ಮನೋಭಾವ,ಕೆಲಸಗಳಲ್ಲಿ ಆಸಕ್ತಿ ಕಳೆದುಕೊಳ್ಳುವಿಕೆ, ಹೆಚ್ಚು ಹೆಚ್ಚು ಬಳಗಗಳಲ್ಲಿ ಸೇರಿಕೊಂಡು ಬರೆಯುವ ಗೀಳು ಹೆಚ್ಚಿಸಿಕೊಂಡು ಕೆಲವೊಮ್ಮೆ ಮಾನಸಿಕ ಖಾಯಿಲೆಗಳಿಗೂ ತುತ್ತಾಗುವ ಸಾಧ್ಯತೆ,ಗಂಡಹೆಂಡಿರು,ಮಕ್ಕಳೊಡನೆ ಜಗಳ,ಸ್ಪರ್ಧೆ ಯಲ್ಲಿ ಬಹುಮಾನ ಬಾರದಿದ್ದಾಗ ನಿರ್ವಾಹಕರಲ್ಲಿ ಜಗಳ,ಬೇಸರ ಮಾಡಿಕೊಳ್ಳುವುದು,ತಾರತಮ್ಯ ಮಾಡಿದರೆಂಬ ಆರೋಪ , ಕೆಲವರು ಬರಹಗಳನ್ನು ಕದಿದು :ಅಲ್ಪಸ್ವಲ್ಪ ಮಾರ್ಪಾಡು ಮಾಡಿಕೊಂಡು ತಮ್ಮ ಹೆಸರುಗಳನ್ನು ಹಾಕಿಕೊಂಡು ಬಹುಮಾನ ಪಡೆಯುವುದೋ...ಹೀಗೆ ಇನ್ನೂ ಅನೇಕ ತೊಂದರೆಗಳಿವೆ..


ಒಟ್ಟಿನಲ್ಲಿ ಗುಣ,ಅವಗುಣ ಎಲ್ಲಾ ವಿಷಯಗಳಲ್ಲೂ ಇದ್ದದ್ದೇ...ನಾವು ಅವುಗಳನ್ನು ಅರಿತುಕೊಂಡು ಧನಾತ್ಮಕವಾಗಿ ತೆಗೆದುಕೊಂಡು ಭಾಗವಹಿಸುವ ಚಾಕಚಕ್ಯತೆಯನ್ನು ರೂಢಿಸಿಕೊಂಡಲ್ಲಿ ಯಾವುದೇ ಸಮಸ್ಯೆಯಾಗದು..ನಮ್ಮ ಬರಹ,ಭಾಗವಹಿಸುವಿಕೆಯಿಂದ ಮನೆಯವರಿಗೆ ತೊಂದರೆಯಾಗದಂತೆ ಇದ್ದಲ್ಲಿ ಅದರಿಂದ ಉತ್ತಮ ಫಲವನ್ನು ನಿರೀಕ್ಷಿಸಬಹುದು..ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಮುಖ್ಯವಲ್ಲ ಎಂಬ ಸೂಕ್ಷ್ಮ ಅರಿವನ್ನು ಬೆಳೆಸಿಕೊಂಡು,ಬರಹಗಳಲ್ಲಿ ತೊಡಗಿಕೊಂಡರೆ  ನಮ್ಮ ಬರಹವನ್ನು ಉತ್ತಮಗೊಳುಸುವಿಕೆಯ ಜೊತೆಗೆ ಸಮಯದ ಸದುಪಯೋಗವೂ ಆಗುತ್ತದೆ,ಏಕತಾನತೆಯಿಂದ ಹೊರಬರಲೂ ಅನುಕೂಲ..ಒಟ್ಟಿನಲ್ಲಿ ಎಲ್ಲವೂ ಇತಿಮಿತಿಯಲ್ಲಿದ್ದರೆ ಚೆಂದ ಎಂಬುದು ನನ್ನ ಅನಿಸಿಕೆ..


ರೂಪಾಪ್ರಸಾದ ಕೋಡಿಂಬಳ

[17/06, 8:48 PM] Sujata Mannikeri: ಬತ್ತದ ತೊರೆ ಸ್ನೇಹ ಬಳಗ ಸ್ಪರ್ಧೆಗಾಗಿ;

ವಿಷಯ: ಸಾಮಾಜಿಕ ಜಾಲತಾಣದಲ್ಲಿ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಗಳಿಂದ ಉಂಟಾಗುವ ಲಾಭ - ನಷ್ಟಗಳು


ಸಾಮಾಜಿಕ ಜಾಲತಾಣಗಳು ನಾವು ಉಪಯೋಗಿಸುವ ರೀತಿಯ ಮೇಲೆ ಲಾಭ ನಷ್ಟಗಳನ್ನು ಅನುಭವಿಸುತ್ತೆವೆ.

ನಾನು ಲೇಖನಿ,ಬಿಳಿ ಹಾಳೆಯೊಂದಿಗೆ ಬರಹದ ಬಾಗಿಲಿಗೆ ಕಾಲಿಟ್ಟು ಒಂದು ವರ್ಷವಾಯಿತು. ನಷ್ಟಕ್ಕಿಂತ ಲಾಭವನ್ನೇ ಹೆಚ್ಚಾಗಿ ಅನುಭವಿಸಿದೆ. ಬುದ್ಧಿ ಉಪಯೋಗಿಸುವ ಮುನ್ನ ನನ್ನ ಕಣ್ಣುಗಳನ್ನು ಹೆಚ್ಚಾಗಿ ಬಳಸಿಕೊಂಡೆ,ಸತತವಾಗಿ ಓದಿ ಅರಿವನ್ನು ಮೂಡಿಸಿಕೊಂಡೆ. ದಿನವೆಲ್ಲಾ ಸಮಯ ವ್ಯರ್ಥ ಮಾಡಿಕೊಂಡು ಬರೀ ಮನೆಗೆಲಸದಲ್ಲಿ ಮುಳುಗಿದ ಹೆಣ್ಣು ಮಕ್ಕಳಿಗೆ ತೋರುವುದು ಜಾಲತಾಣದಲ್ಲಿರು ಸಾಹಿತ್ಯ ಬಳಗ ಬೆಳಕಿನ ದಾರಿ ತೋರುವುದೆಂದರೆ ತಪ್ಪಾಗಲಾರದು. ಮೌನವಾದಲ್ಲಿ ಹುದುಗಿರುವ ಎಷ್ಟೋ ಭಾವನೆಗಳಿಗೆ ಬಣ್ಣ ತುಂಬಿ ಜೀವ ನೀಡಬಹುದು. ಬರೆಯುವ ಉತ್ತಮ ಹವ್ಯಾಸದಿಂದ ನೊಂದ ಮನಗಳಿಗೆ ಭರವಸೆಯ ಲೇಖನಗಳಿಂದ ಜೀವನೋತ್ಸಾಹ ತುಂಬುವ ಪುಣ್ಯದ ಕೆಲಸ ಮಾಡಬಹುದು.

ಓದುಗರು ನಮ್ಮ ಬರಹಗಳಿಗೆ ಮೆಚ್ಚುಗೆ ನೀಡಿದಾಗ ಸಿಗುವ ಆನಂದ ಎಲ್ಲೂ ಪಡೆಯಲಾಗದು.

ದೂರದಲ್ಲೇ ಕುಳಿತು ಬರಹಗಾರರು ಒಬ್ಬರಿಗೊಬ್ಬರ ಮುಖ ಪರಿಚಯವಿಲ್ಲದೇ ಜಾಲತಾಣದಲ್ಲಿ ಬರೆದ ಬರಹಗಳ ಓದಿ ಭಾವನೆಗಳಲ್ಲಿ ಸ್ನೇಹದ ಕೊಂಡಿಯನ್ನು ಬೆಸೆದುಕೊಳ್ಳುತ್ತಾರೆ. ಒಂದು ದಿನ ಬರೆಯದಿದ್ದರೆ ಗಂಟಲಿಗೆ ಆಗುವ ನೀರಿನ ದಾಹದಂತೆ ಮನಸು ಒಣಗಿಬಿಡುವುದು. ಸ್ಪರ್ಧೆಯಿಂದ ‌ಸ್ಪರ್ಧಾತ್ಮಕ ಬಾಲ್ಯದ ಜೀವನವನ್ನು ಮರುಕಳಿಸಿ ಸವಿಯುವ ಅವಕಾಶ ಕಲ್ಪಿಸುವ ಸಾಹಿತ್ಯ ಬಳಗಕ್ಕೆ ನಾ ವಂದಿಸುವೆ. ಪ್ರತಿ ಲೇಖಕರು ತಮ್ಮದೇಯಾದ ರೀತಿಯಲ್ಲಿ ಅನುಭವಿಸಿದ ಕಷ್ಟ ಸುಖದ ಅನುಭವಗಳನ್ನು ಪದಗಳಲ್ಲಿ ವರ್ಣಿಸುವ ರೀತಿ ಓದುಗರಿಗೆ ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯ.

ಕಲಿಕೆಗೆ ವಯಸ್ಸಿನ ಮೀತಿಯಿಲ್ಲ ಎಂಬುದು ಸಾಹಿತ್ಯ ಬಳಗದಲ್ಲಿ ಸೇರಿಕೊಂಡ ಮೇಲೆ ಪ್ರಾಯೋಗಿಕವಾಗಿ ಅರಿತುಕೊಂಡೆ. ಬದುಕಿನ ಎಷ್ಟೋ ನೋವುಗಳನ್ನು ಬರೆಯುತ್ತಾ ಮರೆತು ಹೋದೆ.

ಬರೀ ಭೂತಕಾಲದಲ್ಲಿ ಕಳೆದ ಕಷ್ಟದ ನೆನಪುಗಳಿಂದ ಹೋರಬರದೆ ಮನಸನ್ನು ಕಲ್ಲಾಗಿಸಿಕೊಂಡ ಎಷ್ಟೋ ಮನಗಳು ಸಾಹಿತ್ಯ ಬಳಗದಿಂದ ಸುಂದರ ಶಿಲೆಯಾಗಿವೆ. ಲೇಖನಿಯಿಂದ ನೊಂದ ಮನಸುಗಳಲ್ಲಿ ಮೂಕವಾದ ಮಾತುಗಳಿಗೆ ಧ್ವನಿ ಬಂದಂತಿದೆ.

ಪ್ರತಿಯೊಂದು ಸಜೀವ, ನಿರ್ಜೀವ ವಸ್ತುಗಳಲ್ಲಿ ಭಾವ ತುಂಬುವ ಬರಹಗಾರಿಗೆ ಜಾಲತಾಣದಳು ಹೆಚ್ಚು ಲಾಭವನ್ನೇ ತಂದು ಕೊಟ್ಟ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಬಹುಮಾನ, ಪುರಸ್ಕಾರಗಳ ಹಿಂದೆ ಬಿದ್ದ ಬರಹಗಾರರು ನಷ್ಟವನ್ನು ಕೈಗೆತ್ತಿಕೊಂಡು ನರಳುವುದು ಖಂಡಿತ!

"ರವಿ ಕಾಣದ್ದು ಕವಿ ಕಂಡ" ಎನ್ನುವ ಹಾಗೆ ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ಹುಡುಕಿದರೆ ಒಳ್ಳೆಯದೇ ಕೈಗೆಟುಕುವುದು ನಿಜ ಸಂಗತಿ.....


✍🏻 ಸುಜಾತಾ ಮಣ್ಣಿಕೇರಿ

[17/06, 8:48 PM] Ramitha2 Madam: ಬತ್ತದ ತೊರೆ ಸ್ನೇಹಬಳಗದ

ಚಿಂತನ-ಮಂಥನ ವಿಭಾಗದಲ್ಲಿ

ಪ್ರಕಾರ :ಕಿರುಲೇಖನ

ವಿಷಯ: ಸಾಮಾಜಿಕ ಜಾಲತಾಣದಲ್ಲಿನ ಸಾಹಿತ್ಯ ಸ್ಪರ್ಧೆಗಳ ಲಾಭ-ನಷ್ಟಗಳು


ಶೀರ್ಷಿಕೆ: ಸಾಮಾಜಿಕ ಜಾಲತಾಣದಲ್ಲಿನ ಸಾಹಿತ್ಯ ಸ್ಪರ್ಧೆಗಳ ಲಾಭ-ನಷ್ಟ ವಿಶ್ಲೇಷಣೆ


ಮಾನವ ಬುದ್ಧಿಜೀವಿ ಸಂಘಜೀವಿಯೂ ಕೂಡ.

ಅದಕ್ಕಾಗಿ ಮಾನವ ಹಲವಾರು ಅವಿಷ್ಕಾರಗಳನ್ನು ಮಾಡುತ್ತಾ ಬಂದಿದ್ದಾನೆ. 

 ಸಂಪರ್ಕ ಮಾಧ್ಯಮಗಳು ಜನರ ಒಳಿತಿಗಾಗಿ ಮಾಹಿತಿ  ತಿಳಿಯಲು, ಜನರು ಜನರೊಂದಿಗೆ ಸಂಪರ್ಕ ಸಹಾಯಕವಾಗಿದೆ. ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ತಿಳಿಯಬಹುದು ಆದರೆ ಅನುಭವ ಪಡೆಯುವುದು ಕಡಿಮೆ. ಸಾಮಾಜಿಕ ಜಾಲತಾಣಗಳಲ್ಲಿನ ಸಾಹಿತ್ಯದ ಸ್ಪರ್ಧೆಗಳು ಸಾಹಿತಿಗೆ ಅದರಿಂದ ಲಾಭವು ಕೂಡ ಇದೆ

ಅಂತೆಯೇ ನಷ್ಟಗಳು ಕೂಡ ಇದೆ


ಮೊದಲು ಸಾಮಾಜಿಕ ಜಾಲತಾಣದಲ್ಲಿ ನ ಸಾಹಿತ್ಯಿಕ ಸ ಸ್ಪರ್ಧೆಗಳಿಂದ ಆಗುವ ಲಾಭಗಳು:

🌼 ಇಂತಹ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಾಗದ ಪೆನ್ನು ಬೇಕಾಗಿಲ್ಲ.

🌼 ಸಾಹಿತ್ಯಕ್ಷೇತ್ರಕ್ಕೆ ಮೊದಲು ಕಾಲಿಡುವ ಕಿರಿಯ ಸಾಹಿತಿಗಳಿಗೆ ವಿವಿಧ ಹಿರಿಯ ಸಾಹಿತಿಗಳ ಪರಿಚಯ

🌼 ಮುಖ್ಯವಾಗಿ ವಿವಿಧ ಸಾಹಿತ್ಯ ಪ್ರಕಾರಗಳ ಪರಿಚಯವಾಗಿದೆ.

🌼 ನಮ್ಮಂತಹ ಗ್ರಹಿಣೆಯರು ಸಾಹಿತ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ.

🌼 ಪೈಸೆ ಖರ್ಚಿಲ್ಲದೆ ಬೇರೆ ಸಾಹಿತಿಗಳ ಸಾಹಿತ್ಯವನ್ನು ಓದಲು ಸಹಾಯಕವಾಗಿದೆ.

🌼 ಉಗುಳಿ ಉಗುಳಿ ರೋಗ ಬೊಗಳಿ ಬೊಗಳಿ ರಾಗ ಎನ್ನುವ ಜನರಾಡುವ ನುಡಿಯಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತಿ ತೊಡಗಿಕೊಳ್ಳುತ್ತಾನೆ. ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಉತ್ತಮ ಸಾಹಿತಿಯಾಗಿ ಹೊರಹೊಮ್ಮಲು ಸಹಾಯಕವಾಗಿದೆ.

🌼ಸಾಹಿತಿಗಳು ಅಥವಾ ಕವಿಗಳು ಬೇರೆ ಕೆಲಸ ಮಾಡುತ್ತಾ ಓಡಾಡುತ್ತಾ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

🌼 ಪತ್ರಿಕೆ ಅಥವಾ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಬಹುಮಾನ ಪಡೆದವರಿಗೆ ಮಾತ್ರ ಖುಷಿ ಸಿಗುವುದು. ಇಲ್ಲಿ ನಮ್ಮ ಸಾಹಿತ್ಯದ ಗುಣಮಟ್ಟವನ್ನು ತಿಳಿಯಲು ಸುಧಾರಿಸಿಕೊಳ್ಳಲು ಅವಕಾಶವಿದೆ.

🌼 ಸ್ಪರ್ಧಾತ್ಮಕವಾಗಿ ದಿನದಿಂದ ದಿನಕ್ಕೆ ಸಾಹಿತ್ಯಕವಾಗಿ ಅಭಿವೃದ್ಧಿ ಹೊಂದಲು ಸಹಾಯಕವಾಗಿದೆ.

🌼ಬೇರೆಬೇರೆ ಸಾಹಿತ್ಯ ಪ್ರಕಾರಗಳ ನಿಯಮಗಳನ್ನು ತಿಳಿಯಬಹುದಾಗಿದೆ.

ಉದಾಹರಣೆಗೆ: ಕೆಲವೊಂದು ಸಾಹಿತ್ಯ ಪ್ರಕಾರಗಳ ಬಗ್ಗೆ ಈ ಬತ್ತದ ತೊರೆ ಬಳಗದಿಂದ ತಿಳಿದುಕೊಂಡಿದ್ದೇನೆ



ಸಾಮಾಜಿಕ ಜಾಲತಾಣದ ಸಾಹಿತ್ಯಿಕ ಸ್ಪರ್ಧೆಯಿಂದ ಆಗುವ ನಷ್ಟಗಳು

#######

🌼 ಸಾಹಿತಿಗಳು ಅಥವಾ ಕವಿಗಳು ಓದುಗರು ಹೌದು .ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಸಾಹಿತ್ಯ ಸ್ಪರ್ಧಿಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಜಾಸ್ತಿ.



🌼ಅನುಭವದಿಂದ ಅಂತರಾಳದಿಂದ ಒಂದು ಸಾಹಿತ್ಯ ಹುಟ್ಟಿದಾಗ ನೈಜತೆ ಇರುತ್ತದೆ. ಇಂತಹ ಸ್ಪರ್ಧೆಗಳಿಂದ ನೈಜತೆ ಹೊರಹೊಮ್ಮುವುದು ಕಡಿಮೆ

🌼ಸಾಮಾಜಿಕ ಜಾಲತಾಣಗಳಿಗೆ ಒಗ್ಗಿಕೊಳ್ಳುವುದರಿಂದ ಅನುಭವ ಕಡಿಮೆಯಾಗುತ್ತದೆ.

🌼ಸಾಹಿತಿಗಳು ಚಿಂತಕರು ಹೌದು. ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ಕಡಿಮೆಯಾಗಬಹುದು. ಜ್ಞಾನಿಯಾಗಲು ದೇಶ ಸುತ್ತ ಬೇಕು ಕೋಶ ಓದಬೇಕು ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಮತ್ತು ಇದು ಸಾಮಾಜಿಕ ಜಾಲತಾಣ ಜನರನ್ನು ಅನುಭವದಿಂದ ವಂಚಿತ ಹಾಗೂ ಸೋಮಾರಿಗಳನ್ನಾಗಿ ಮಾಡಿದೆ.

🌼 ಸಾಹಿತಿಯೊಬ್ಬ ವಿಶ್ಲೇಷಕನು ಕೂಡ ಸಮಾಜದ ಜ್ವಲಂತ ಸಮಸ್ಯೆಗಳ ವಿಶ್ಲೇಷಣೆಗೆ ಅವಕಾಶಗಳು ಕಡಿಮೆಯಾಗುವುದು.

🌼ಸಾಹಿತಿಯೊಬ್ಬ ಸ್ರಜನಶೀಲ ಕೂಡ. ಸೃಜನಶೀಲತೆ ತನ್ನಿಂದ ತಾನೆ ಹುಟ್ಟಿದರೆ ಅದು ಸೊಗಸಾಗಿರುತ್ತದೆ.

ಕವಿಗಳು ಪ್ರಕೃತಿ ಪ್ರಿಯನು ಹೌದು. ಸ್ಪರ್ಧೆಗಳಿಗಾಗಿ ಸಾಮಾಜಿಕ ಜಾಲತಾಣಗಳಿಗೆ ಒಗ್ಗಿಕೊಳ್ಳು ವುದರಿಂದ ಪ್ರಕೃತಿಯ ಸವಿಯನ್ನು ಸವಿಯುವಲ್ಲಿ ಹಿಂದೆ ಬೀಳುತ್ತಾನೆ

.         ಈ ಮೇಲಿನ ಅಭಿಪ್ರಾಯಗಳು ನನ್ನ ಮನದಾಳದಿಂದ ಹೊರಬಂದ ಅಭಿಪ್ರಾಯಗಳು ಆಗಿರುತ್ತವೆ.

ಎಂ ರಮಿತಾ ಎ ಶೆಟ್ಟಿ

ಬೈಂದೂರು ಪಡುವರಿ

[17/06, 9:12 PM] ಮಾಲತಿ ರಮೇಶ್:  ಸ್ಪರ್ಧೆಗಾಗಿ:- ಕಿರು ಲೇಖನ

ವಿಷಯ:- ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಯುವ ಸ್ಪರ್ಧೆಗಳಿಂದ ಉಂಟಾಗುವ ಲಾಭ-ನಷ್ಟಗಳು

ಶೀರ್ಷಿಕೆ:- ಪ್ರತಿಭೆಗಳಿಗೆ ಪ್ರೋತ್ಸಾಹ


ಈಗ ಸಮಾಜದಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಅನೇಕ ಜಾಲತಾಣಗಳು ಬೆಳೆಯುತ್ತಿದೆ. ಅನೇಕ ಸಾಮಾಜಿಕ ಜಾಲತಾಣಗಳು ಇಂದು ನಮ್ಮ ವಿಚಾರಗಳನ್ನು, ಕವನಗಳನ್ನು ಮಂಡಿಸಲು ಒಂದು ಉತ್ತಮ ವೇದಿಕೆಯನ್ನು ಒದಗಿಸಿಕೊಡುತ್ತಿವೆ. ಇದರಿಂದಾಗಿ ಪರದೆಯ ಹಿಂದೆ ಇರುವ ಪ್ರತಿಬೆಗಳು ಇಂದು ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಸಾರುತ್ತಿದ್ದಾರೆ. ಇಂದು ಅದೆಷ್ಟೋ ಸಾಧಕರು, ಸಾಮಾಜಿಕ ಜಾಲತಾಣ ಇಲ್ಲದಿದ್ದರೆ ಹೊರಜಗತ್ತಿಗೆ ಗೊತ್ತಾಗಲು ಸಾಧ್ಯವಿರುತ್ತಿರಲಿಲ್ಲ. ವಾಟ್ಸಫ್ ನಲ್ಲಿ, ಪೇಸ್ ಬುಕ್ ನಲ್ಲಿ ಹಲವು ಕತೆ-ಕವನಗಳ ಸಂಕಲನ ಗುಂಪಿನಲ್ಲಿ ಬರೆಯುವರ ಕತೆ, ಕವನಗಳನ್ನೂ ಓದಿದಾಗ ತುಂಬಾ ಸಂತೋಷವಾಗುತ್ತದೆ.ಅವರು ಬರೆಯುವ ಶೈಲಿ ನೋಡಿದಾಗ, ನಾವು ಬರೆಯುವ ಎಂದು ಮನಸ್ಸಾಗುತ್ತದೆ. ಪ್ರತಿಬೆಗಳ ಸಂಗಮ. ಎಲ್ಲಿ ಇದ್ರು ಇವರೆಲ್ಲ ಇಶ್ಟು ದಿನ ಅಂತ ಯೋಚಿಸುವಂತೆ ಬರೆಯುತ್ತಾರೆ.ಇದರಿಂದ ಅನೇಕ ಕವಿ-ಕವಯತ್ರಿಯರು ಹುಟ್ಟಿಕೊಳ್ಳುತ್ತಾರೆ.ಅಲ್ಲದೆ ಈ ಜಾಲತಾಣದಿಂದ ಅನೇಕ ಜನರ ಪರಿಚಯ ಆಗುತ್ತದೆ. ಅನುಭವಿ ಕವಿಗಳ ಕತೆ-ಕವನವು ಹೊಸ ಹೊಸ ಕವಿಗಳಿಗೆ ಸ್ಫೂರ್ತಿ ಬರುತ್ತದೆ. ಹಾಗೆಯೇ ಪ್ರೋತ್ಸಾಹವು ಸಿಗುತ್ತದೆ ಮತ್ತು ಬರೆಯುವ ಹುಮ್ಮನಸ್ಸು ಬರುತ್ತದೆ.ಕವನ ಎಂದರೆ ಮನದಾಳದಿಂದ ಬರುವಂತಹ ಒಂದು ಲೇಖನ. ಏನೋ ಬರೆಯಬೇಕು ಎಂದು ಮನದಲ್ಲಿ ಬಂದಾಗ ಅದನ್ನು ಆಗಲೇ ಗೀಚಿದರೆ ಅದೆ ಕವನ.ಸ್ಪರ್ಧೆಯಲ್ಲಿ ನಾವು ಬರೆಯುವ ಕತೆ-ಕವನಗಳಿಗೆ ಒಳ್ಳೆಯ ಅಭಿಪ್ರಾಯ (ಅತ್ಯುತ್ತಮ-ಉತ್ತಮ) ಬಂದರೆ ಇನ್ನೂ ಬರೆಯಬೇಕೆಂಬ ಹಂಬಲ ಆಗುತ್ತದೆ. ನಮ್ಮಂತಹ ಗೃಹಿಣಿಯರಿಗೆ ದೂರ ದೂರ ಭಾಗವಹಿಸಲು ಸಾಧ್ಯವಾಗುವುದಿಲ್ಲ. ತಮ್ಮ ಕೆಲಸಗಳನ್ನು ಪೂರೈಸಿ,ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಉತ್ತಮ ವೇದಿಕೆ ಎನ್ನುವುದು ನನ್ನ ಅನಿಸಿಕೆ.


ಆದರೆ ಇದನ್ನು ಕೆಲವರು ದುರುಪಯೋಗಪಡಿಸಿ ಕೊಳ್ಳುತ್ತಾರೆ.ಅಂದರೆ ಒಂದು ಬಳಗದಲ್ಲಿ ಬೇರೆಬೇರೆ ಊರಿನವರೂ,ದೂರದೂರದವರು ಸೇರಿಕೊಳ್ಳುತ್ತಾರೆ. ಅವರ ಫೋನ್ ನಂಬರ್ ಗಳು ಅಲ್ಲಿರುತ್ತದೆ. ಕೆಲವರು ಪರ್ಸನಲ್ ಆಗಿ ಮೆಸೇಜ್ ಹಾಕುತ್ತಾರೆ. ತಮ್ಮ ಕವನಗಳ ಲಿಂಕ್ ನ್ನು ಹಾಕಿ ಲೈಕ್ ಮಾಡಿ, ನಿಮ್ಮ ಪರಿಚಯದವರಿಗೆ ಕಳುಹಿಸಿ ಎಂದು ಹೇಳುತ್ತಿರುತ್ತಾರೆ.ಇದರಿಂದ ಅವರಿಗೆ ತೊಂದರೆ ಆಗುತ್ತದೆ. ಅಲ್ಲದೆ ಕೆಲವರು ಅವರೇ ಮತ್ತೊಂದು ಬಳಗ ಮಾಡಿಕೊಂಡು ಕತೆ-ಕವನದ ಸ್ಪರ್ಧೆಗಳನ್ನು ಆರಂಭಿಸಿ ಒಂದು ಕವನಕ್ಕೆ ಇಷ್ಟು ಹಣ ಕಳುಹಿಸಿ ಎಂದು ಹೇಳುತ್ತಾರೆ.ಕೆಲವರು ಇದನ್ನು ಒಂದು ವ್ಯವಹಾರದಂತೆ ಬಳಸಿಕೊಳ್ಳುತ್ತಾರೆ.ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ತುಂಬಾ ಬಳಗಗಳು ಇದೆ.


*ಬತ್ತದ ತೊರೆ ಸ್ನೇಹ ಬಳಗ* ವು

ನನಗೆ ಒಂದು ಉತ್ತಮ ವೇದಿಕೆಯಾಗಿದೆ.ನಾನೂ ಒಬ್ಬಳು ಚಿಕ್ಕ ಕವಯತ್ರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗೊತ್ತಾಗಿದ್ದೇ ಈ ಬಳಗದಿಂದ.ಈಗ ವಾಟ್ಸಫ್, ಫೇಸ್ ಬುಕ್ ಗಳಲ್ಲಿ ನನ್ನ ಫ್ರೆಂಡ್ಸ್ ನವರೆಲ್ಲಾ,ನಿನ್ನಲ್ಲಿ ಈ ಪ್ರತಿಭೆ ಇಲ್ಲಿಯವರೆಗೂ ಎಲ್ಲಿತ್ತು ಎಂದು ಕೇಳುತ್ತಿದ್ದಾರೆ.ಕಾಲೇಜ್ ಜೀವನದಲ್ಲಿ  ಸ್ವಲ್ಪ ಸ್ವಲ್ಪ ಬರೆಯುತ್ತಿದೆ.ಆದರೆ ಅದು ಇಷ್ಟೊಂದು ಪ್ರಚಾರವಾಗುತ್ತಿರಲಿಲ್ಲ.ಏಕೆಂದರೆ ಆಗ ಎಲ್ಲೂ ಮೊಬೈಲ್ ಇಲ್ಲ. ಈ ಬಳಗದ ಪ್ರೋತ್ಸಾಹದಿಂದಲೇ ಮೊನ್ನೆ ಉಡುಪಿಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸೌಭಾಗ್ಯ ದೊರಕಿತು.ನನ್ನ ಪ್ರತಿಭೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಮಾಡಲು ಅವಕಾಶ ಮಾಡಿಕೊಟ್ಟ ಈ ವೇದಿಕೆಗೆ ಹೃದಯಸ್ಪರ್ಶಿ ಧನ್ಯವಾದಗಳು 🙏🙏🙏😍


✍️ ಮಾಲತಿ ರಮೇಶ್ ಕೆಮ್ಮಣ್ಣು

[17/06, 9:14 PM] Sandhyashyama Bhat: ಬತ್ತದ ತೊರೆ ಸ್ನೇಹ ಬಳಗ

ಕಾರಂತಜ್ಜನ ನೆರಳಿನಡಿಯಲ್ಲಿ

ಕಲೆ ಮತ್ತು ಸಾಹಿತ್ಯ ವೇದಿಕೆ


ಕಿರು ಲೇಖನ ಸ್ಪರ್ಧೆ


ವಿಷಯ; ಸಾಮಾಜಿಕ ಜಾಲತಾಣದಲ್ಲಿನ ಅನೇಕ ಸಾಹಿತ್ಯ ಬಳಗದಲ್ಲಿ ನಡೆಸುವ ಸ್ಪರ್ಧೆಗಳಿಂದ ಆಗುವ ಲಾಭ ನಷ್ಟಗಳು


ಇಂದಿನ ಕಂಪ್ಯೂಟರ್  ಯುಗದಲ್ಲಿ ಚರವಾಣಿ ಬಂದು ಮನುಷ್ಯನ ವ್ಯಕ್ತಿತ್ವವನ್ನೇ ಬದಲಾಯಿಸಿದೆ ಎಂದರೆ ತಪ್ಪಾಗಲಾರದು.ಸಾಮಾಜಿಕ ಜಾಲತಾಣಗಳಲ್ಲಿ  ಅನೇಕ  ಸಾಹಿತ್ಯ ಬಳಗಗಳಿವೆ.ಅವುಗಳಿಗೆ ಅವರದೇ ಆದ ನಿಯಮವಿದೆ.ನಾವು ಯಾವ ಬಳಗಕ್ಕೆ ಸೇರುತ್ತೇವೆಯೋ ಈ ಬಳಗದ ನೀತಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.  


ಲಾಭಗಳು: ಸಾಹಿತ್ಯ ಬಳಗದಲ್ಲಿ ನಡೆಯುವ ಸ್ಪರ್ಧೆಯಿಂದ  ನಮಗೆ ಉತ್ತಮ ಪ್ರಯೋಜನ ಆಗುತ್ತದೆ.ಆಯಾಯಾ ದಿನ ಬೇರೆ ಬೇರೆ ರೀತಿಯ ಸ್ಪರ್ಧೆಗಳನ್ನು ನಡೆಸುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ.

ನಿತ್ಯ ಜೀವನದ ಏಕತಾನತೆಯಿಂದ ಹೊರಬಂದು ಮನಸ್ಸು  ನಿರಾಳವಾಗುತ್ತದೆ.ಬಳಗದಲ್ಲಿ ನುರಿತ ಲೇಖಕರಿಂದ ನಮಗೆ ಇನ್ನಷ್ಟು ಹೊಸ ಸಾಹಿತ್ಯ ಪ್ರಕಾರಗಳನ್ನು ಕಲಿಯಬಹುದು.ಅನೇಕ ಕವಿ,ಕವಯಿತ್ರಿಯವರ ಪರಿಚಯ ಆಗಿ ಉತ್ತಮ ಬಾಂಧವ್ಯ ಏರ್ಪಡಲು ಕಾರಣವಾಗುತ್ತದೆ.ಸ್ಪರ್ಧೆಗಳಿಂದ  

ನಮಗೆ ಜೀವನೋತ್ಸಾಹ ಹೆಚ್ಚುತ್ತದೆ.ಫಲಿತಾಂಶದ  ಬಗ್ಗೆ ಕಾತುರ ಇರುತ್ತದೆ.ಫಲಿತಾಂಶ ಬಂದಾಗ ನಮ್ಮ ಹೆಸರು ಅತ್ಯುತ್ತಮ, ಉತ್ತಮ ಸ್ಥಾನ ದಲ್ಲಿ ಇರುವುದನ್ನು ನೋಡಿ ಸ್ವರ್ಗವೇ ಧರೆಗಿಳಿದು ಬಂದ ಹಾಗೆ ಭಾಸವಾಗುತ್ತದೆ.ಆರೋಗ್ಯಕರ ಪೈಪೋಟಿ ಮೂಡಿಸಲು ದಾರಿ ಮಾಡಿಕೊಟ್ಟಂತಾಗಿದೆ.ಗೃಹಿಣಿಯರಿಗಂತೂ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದರೆ ಬರೆಯುತ್ತಾ ಮನೆಯ ನಾಲ್ಕು ಗೋಡೆಗಳ ನಡುವಿನಿಂದ ಹೊರಪ್ರಪಂಚಕ್ಕೆ ಕಾಲಿಟ್ಟಂತಾಗುತ್ತದೆ.ನಾವು ಸಮಯವನ್ನು ಇಲ್ಲದ ಕಾಡುಹರಟೆಯಲ್ಲಿ ಮುಳುಗಿ ಹಾಳು ಮಾಡದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡರೆ,ಇನ್ನಷ್ಟು ಕಲಿಯುವಂತೆ ಪ್ರೇರಣೆ ನೀಡಿದಂತಾಗುತ್ತದೆ.


ನಷ್ಟಗಳು: ಸಾಹಿತ್ಯ ಬಳಗದ ಸ್ಪರ್ಧೆಗಳಲ್ಲಿ ಕೆಲವೊಮ್ಮೆ ನಿರ್ವಾಹಕರ ತೀರ್ಪಿನಿಂದ ಕೆಲವರಿಗೆ ಅಸಮಾಧಾನವಾಗಿ ಕೇಳಿ ಒಳಗೊಳಗೇ  ಬೇಸರ ಉಂಟಾಗಬಹುದು.ಗೃಹಿಣಿಯರಿಗೂ ಮತ್ತು ಉದ್ಯೋಗಸ್ಥರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳಿರುತ್ತವೆ.ಅವುಗಳಿಗೆ ಧಕ್ಕೆ ಆಗುವ ಸಂಭವ ಬರಬಹುದು.ಕೆಲವು ಬಳಗಗಳಲ್ಲಿ ಇನ್ನೊಬ್ಬರ ಬರಹಗಳನ್ನು ವಿಮರ್ಶೆ ಮಾಡಲು ಹೇಳುತ್ತಾರೆ.ಕವಿಭಾವ ಎಲ್ಲರಿಗೂ ಒಂದೇ ತರಹ ಇರುವುದಿಲ್ಲ.ವಿಮರ್ಶೆಯನ್ನು ಋಣಾತ್ಮಕವಾಗಿ ತೆಗೆದುಕೊಂಡು ಕಲಹ ಬರಬಹುದು.ಮತ್ತೆ ಇತರರ ಬರಹಗಳಿಗೆ ಸ್ಪಂದನೆ ಕೊಡಲು ಸಾಧ್ಯ ಆಗದಿದ್ದರೂ ಕಷ್ಟ.ಸಕ್ರಿಯವಾಗಿಲ್ಲ ಅಂತ ಭಾವಿಸುತ್ತಾರೆ.ಆರೋಗ್ಯ ಸಮಸ್ಯೆ ಕಾಡಿದಾಗ ಬರೆಯಲಾಗದೆ ಕಳವಳ ಆಗುತ್ತದೆ.ಎಲ್ಲವನ್ನು ಬಳಗದಲ್ಲಿ ಹೇಳಿಕೊಳ್ಳಲಾಗುವುದಿಲ್ಲ

ನೆಟ್ ವರ್ಕ್ ಕೈ ಕೊಟ್ಟರೆ ನಿರ್ದಿಷ್ಟ ಸಮಯಕ್ಕೆ ಬರಹ ಪೋಸ್ಟ್ ಮಾಡಲಾಗುವುದಿಲ್ಲ


. ಕೆಲವು  ಬಳಗಗಳ ಸ್ಪರ್ಧೆಗಳಲ್ಲಿ ಇಂತಿಷ್ಟೇ ಸಾಲುಗಳಿರಬೇಕು‌.ಮತ್ತೆ ಇಷ್ಟೇ ಸಮಯಕ್ಕೆ ಪೋಸ್ಟ್ ಮಾಡಬೇಕು.ವಿಮರ್ಶೆ ಮಾಡದಿದ್ದರೆ ಫಲಿತಾಂಶ ತಡೆಹಿಡಿಯುತ್ತೇವೆ ಎನ್ನುತ್ತಾರೆ.

ನಿಮಗೂ ವೈಯಕ್ತಿಕ ಕೆಲಸಗಳಿರುತ್ತವೆ.ಮನೆಯಲ್ಲಿ ಮಕ್ಕಳು,ಪ್ರಾಯಸ್ಥರು ಇದ್ದರೆ‌ ಅವರು ಬಗ್ಗೆ ಗಮನ ಹರಿಸದೆ ಕರ್ತವ್ಯ ವಿಮುಖರಾಗಲು ಸಾಧ್ಯವಾಗುವುದಿಲ್ಲ.ಇದು ಮನೆಯಿಂದ ಮನೆಗೆ ಭಿನ್ನತೆ ಹೊಂದಿರಬಹುದು.ಮನೆಯಲ್ಲಿ ಬರೆಯಲು ಅನುಕೂಲ ವಾತಾವರಣ ಇರಬೇಕು.ಮನೆಯವರ ಪ್ರೋತ್ಸಾಹ ಖಂಡಿತ ಬೇಕು.ಸಮಯವೂ ಬೇಕು.ಎಲ್ಲವನ್ನೂ ಸರಿದೂಗಿಸಲು ಕಷ್ಟ.ಬಳಗ,ಬಳಗಗಳ ನಡುವೆ ಕಲಹ, ಕೃತಿಚೌರ್ಯ ಮಾಡಿದ್ದಾರೆ.ಆ ಬಳಗಕ್ಕೆ ಬರೆದಿದ್ದಾರೆ.ನಮ್ಮ ಬಳಗಕ್ಕೆ ಬರೆಯಲಿಲ್ಲ ಅಂತ ಆಪಾದನೆಗಳು ಕೇಳಿಬರುತ್ತವೆ.

ನಿರ್ವಹಣೆ ಇದ್ದರಂತೂ ಕಷ್ಟ.ಎಲ್ಲರ ಬರಹಗಳನ್ನು ಓದಿ  ಸೂಕ್ತ ಫಲಿತಾಂಶ ಕೊಡುವುದು ಸುಲಭದ ಮಾತಲ್ಲ.


ಕೆಲವು ಕುಹಕಿಗಳು  ಮಹಿಳಾ ಸದಸ್ಯರಿಗೆ ಅನಗತ್ಯ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಉಪದ್ರ ಕೊಡುತ್ತಾರೆ.ನನ್ನ ಅನುಭವಕ್ಕೆ ಬರಲಿಲ್ಲ.ಅಲ್ಲಿ ಇಲ್ಲಿ ಕೇಳಿದ ಮಾತು.ಸತ್ಯಾಸತ್ಯತೆಗಳನ್ನು ಪರೀಕ್ಷೆ ಮಾಡಲು ಸಾಧ್ಯವಿಲ್ಲ.ನಮ್ಮ ಕೈಗಳ ಎಲ್ಲಾ ಬೆರಳುಗಳು ಸಮನಾಗಿವೆಯೇ? ಇಲ್ಲ ತಾನೇ? ಹಾಗೆ ವಿವಿಧ ಮನೋಭಾವದ ಜನರಿರುತ್ತಾರೆ.ನಾವು ಅವರನ್ನು ನೋಡಿರುವುದಿಲ್ಲ.ಜಾಗ್ರತೆ ಬೇಕು.ಕೆಲವರು ಮಗ್ಗ ನೇಯುವವರೂ, ಗಾಳಿಮಾತು ಗಳನ್ನು ಸೃಷ್ಟಿ ಮಾಡುವವರೂ ಇದ್ದಾರೆ.


ಕೊನೆಯದಾಗಿ ನಾವು ಒಳ್ಳೆಯವರಾಗಿ ಆತ್ಮಸಾಕ್ಷಿ  ಹೇಳಿದಂತೆ ಮಾಡುವ.ನಾವು ಒಳ್ಳೆಯವರಾದರೆ ಇಡೀ ಜಗತ್ತೇ ಒಳ್ಳೆಯದು ಅಂತ ಧನಾತ್ಮಕವಾಗಿ ಯೋಚಿಸಿ ಜೀವನೋತ್ಸಾಹ ತುಂಬಿ ಬರೆಯೋಣ.ಕಲಿತು,ಕಲಿಸಿ,ಕಲಿಸಿದವರ ಸ್ಮರಿಸಿ ಬಳಗಗಳನ್ನು ಬೆಳಗೋಣ.


ಶುಭವಾಗಲಿ ಎಂದು ಹಾರೈಸುವೆ.


ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ

[17/06, 9:16 PM] Shreekala Madam Wrtr: ಸ್ಪರ್ಧೆಗಾಗಿ…….

***************

ಭಾವಗಳನ್ನು ಚೌಕಟ್ಟಿನೊಳಗೆ ಹೊಂದಿಸುವ ಸವಾಲು….

***************

ಸಾಹಿತ್ಯದ ಬೆಳವಣಿಗೆಯು ಭರವಸೆ ಕಳೆದುಕೊಳ್ಳುತ್ತಿದ್ದ ಕಾಲದಲ್ಲಿ ಸಾಮಾಜಿಕ ಜಾಲತಾಣಗಳನು ಬಹುಶಃ ಅವಕ್ಕೆ ಮರು ಜೀವ ನೀಡಿವೆ ಎಂದರೆ ತಪ್ಪಾಗಲಾರದು. ಸಾಹಿತ್ಯ ರಚನೆಗೆ ವಿಪುಲ ಅವಕಾಶ ಒದಗಿಸಿದ್ದು ಮಾತ್ರವಲ್ಲ ವಿಶಾಲ ವ್ಯಾಪ್ತಿಯ ಓದುಗರನ್ನೂ ಸೃಷ್ಟಿಸಿ ಕೊಟ್ಟಿದೆ. ಕೈಬೆರಳ ತುದಿಯಲ್ಲೇ ಎಲ್ಲವನ್ನೂ ನಿರೀಕ್ಷಿಸುವ ಆಧುನಿಕ ಸಮಾಜದ ಮನಸ್ಸುಗಳಿಗೆ ಸಾಹಿತ್ಯದ ಮೇವನ್ನು ಒದಗಿಸಿದ್ದು ಸಾಮಾಜಿಕ ಜಾಲತಾಣಗಳೇ.



ಸಾಮಾಜಿಕ ಜಾಲತಾಣದಲ್ಲಿ ವಾಟ್ಸಪ್ ಕೂಡ ಒಂದು. ಇಲ್ಲಿಯೂ ಸಮಾನ ಮನಸ್ಕ ವ್ಯಕ್ತಿಗಳು ಗುಂಪುಗಳನ್ನು ರಚಿಸಿಕೊಂಡು ಸಾಹಿತ್ಯದ ರಚನೆ ಮತ್ತು ಪ್ರಸರಣದಲ್ಲಿ ತೊಡಗಿದ್ದು, ಕೊರೊನಾವೆಂಬ ಮಹಾಮಾರಿ ಮನೆಯೊಳಗೇ ಬಂಧಿಯಾಗಿಸಿದ ಸಂದರ್ಭದಲ್ಲಿ ಹೊಸ ಹೊಸ ಲೇಖಕರು, ಕವಿಗಳು ಹುಟ್ಟಿಕೊಂಡದ್ದು, ಅವರಿಗಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ಬಳಗಗಳ ಸಂಖ್ಯೆ, ಬರಹಗಾರರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿರುವುದು … ಇವೆಲ್ಲವೂ ಈಗ ಸುಂದರ ಇತಿಹಾಸ.



ಒಳಿತು-ಕೆಡುಕುಗಳು ವಿಶ್ವವ್ಯಾಪಿಯಾದ ಸಂಗತಿಗಳು…. ಎಲ್ಲರಲ್ಲೂ ಮತ್ತು ಎಲ್ಲದರಲ್ಲೂ. ಉಪಯೋಗಿಸುವ ವ್ಯಕ್ತಿಯ ಮನಸ್ಸತ್ವದ ಮೇಲೆ ಎಲ್ಲವೂ ಅವಲಂಬಿತ. ಸಾಮಾಜಿಕ ಜಾಲತಾಣದಿಂದ ಯುವ ಬರಹಗಾರರು ಹುಟ್ಟಿಕೊಂಡದ್ದು ಮತ್ತು ಬರವಣಿಗೆಯ ಪ್ರಮಾಣ ಹೆಚ್ಚಾದದ್ದು ಧನಾತ್ಮಕ ಸತ್ಯ. ಇಲ್ಲಿ ಸ್ಪರ್ಧೆಗಳಿಗೆ ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಟ್ಟು ಅವರೊಳಗೆ ಹುದುಗಿರುವ ಪ್ರತಿಭೆಯನ್ನು ಹೊರತೆಗೆಯುವುದು ನಿಜಕ್ಕೂ ಶ್ಲಾಘನೀಯ. ಬರವಣಿಗೆ ಒಂದು ಕಲೆ. ಇದು ಸ್ಪರ್ಧೆಗಳಿಗಾಗಲೀ, ಯಾವುದೇ ಬಳಗಕ್ಕಾಗಲೀ ಸೀಮಿತವಾಗಿರಬೇಕಾಗಿಲ್ಲ.  ಅವರಿಗಿಷ್ಟದ ಭಾವಗಳನ್ನು ಇಷ್ಟ ಬಂದ ಚೌಕಟ್ಟಿನೊಳಗೆ ಕೂರಿಸಿ ಯಾವುದೇ ಮಾಧ್ಯಮದ ಮೂಲಕ ಪ್ರಕಟಿಸಬಹುದು. ಆದರೆ ಇತರರು ನಿರ್ಮಿಸಿದ ಚೌಕಟ್ಟಿನೊಳಗೆ ನಮ್ಮ ಭಾವಗಳನ್ನು ಹೊಂದಿಸಿ ಕೂರಿಸುವುದು ನಿಜಕ್ಕೂ ಒಂದು ಸವಾಲು. ಆ ಸವಾಲನ್ನು ಸಮರ್ಥವಾಗಿ ಎದುರಿಸಿ ನಿಭಾಯಿಸಬಲ್ಲವನ ಶಬ್ದ ಭಂಡಾರ ಹೆಚ್ಚುತ್ತದೆ, ಮೆದುಳಿಗೆ ಕಸರತ್ತು ಸಿಗುತ್ತದೆ, ಯೋಚನಾ ಶಕ್ತಿ ಅಗಾಧವಾಗುತ್ತದೆ. ಈ ನಿಟ್ಟಿನಲ್ಲಿ ವಿವಿಧ ಬಳಗಗಳಲ್ಲಿ ನೀಡುವ ಸ್ಪರ್ಧೆಗಳು ಯೋಗ್ಯವಾದದ್ದೇ. 



ಅಲ್ಲದೆ, ಬರವಣಿಗೆಗೆ ವಿಷಯ ಹುಡುಕುವವರು, ಕಾರಣ ಹುಡುಕುವವರು, ಸವಾಲು ಅರಸುವವರು, ಚೌಕಟ್ಟನ್ನು ಬಯಸುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹವರ ಪಾಲಿಗೆ ಈ ಸ್ಪರ್ಧೆಗಳು ನಿಜಕ್ಕೂ ವರದಾನ. ಇತರ ಸಹ ಸ್ಪರ್ಧಿಗಳ ಬರವಣಿಗೆಯನ್ನು ಓದುವ ಅವಕಾಶವೂ ಇಲ್ಲಿ ಸಿಗುತ್ತದೆ. ಫಲಿತಾಂಶವು ಆಗಾಗ ಹೊಸ ಕುತೂಹಲಗಳನ್ನು ತೆರೆದಿಡುವುದಲ್ಲದೆ, ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ, ಉತ್ಸಾಹ ತುಂಬುತ್ತದೆ. ಸ್ಪರ್ಧೆಗಳು ಪಾರದರ್ಶಕವಾಗಿ ನಡೆಯುವುದರಿಂದ ವಿಶ್ವಾಸಾರ್ಹವಾಗಿದೆ. ಅಲ್ಲದೆ ವಿದ್ಯಾಭ್ಯಾಸ, ಉದ್ಯೋಗ, ಅಂತಸ್ತುಗಳ ಅಂತರವಿಲ್ಲದೆ, ಎಲ್ಲಾ ವರ್ಗದವರೂ ಇದರಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ. ಯಾರದೇ ಒತ್ತಾಯವಿಲ್ಲದೆ, ಯಾವುದೇ ಒತ್ತಡಗಳಿಲ್ಲದೆ, ಒಂದಷ್ಟು ಸಮಯ ಹೊಂದಿಸಿಕೊಂಡು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊಸದೊಂದು ಹವ್ಯಾಸವನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. 



ಆದರೆ ಇಲ್ಲಿನ ರಚನೆಗಳ ಕರ್ತೃ ಅದರ ವಾರೀಸುದಾರನಾಗಿ ಉಳಿಯುವುದಿಲ್ಲ. ಅದು ಕೆಲವೇ ನಿಮಿಷಗಳಲ್ಲಿ ಪ್ರಪಂಚದ ಯಾವ ಮೂಲೆಯನ್ನು ಬೇಕಾದರೂ ಸೇರಬಹುದು. ಇನ್ಯಾರದೋ ಹೆಸರಲ್ಲಿ ಪ್ರಕಟಗೊಳ್ಳಲೂ ಬಹುದು. ಅದು ಕೊನೆಯವರೆಗೆ ನಿಜವಾದ ಕವಿಗೆ ತಿಳಿಯದೆಯೂ ಉಳಿಯಬಹುದು. ಅಥವಾ ತಿಳಿದರೂ ಅವನದನ್ನು ತನ್ನದೆಂದು ಸಾಧಿಸುವ ಅವಕಾಶ ಬಾರದೇ ಹೋಗಬಹುದು. ಹೋರಾಡುವ ಪರಿಸ್ಥಿತಿಯಲ್ಲಿಲ್ಲದೇ ಇರಬಹುದು. ಅಲ್ಲದೆ ಸಂಕುಚಿತ ಮನಸ್ಥಿತಿಯವರು ಬಳಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಇತರರೊಂದಿಗೆ ತನ್ನನ್ನು ಹೋಲಿಸಿಕೊಂಡು ತನ್ನ ಬರವಣಿಗೆಗಳ ಬಗ್ಗೆ ನಿರಾಸೆ ತಳೆಯಬಹುದು. ಬರೆಯುವ ಪ್ರಯತ್ನವನ್ನೇ ನಿಲ್ಲಿಸಬಹುದು. ಯಾವತ್ತೂ ಉತ್ತಮ ಸ್ಥಾನ ಸಿಗುವವರು ತಮ್ಮ ಸಾಹಿತ್ಯ ಸಾಕಷ್ಟು ಪ್ರಬುದ್ಧವಾಗಿದೆ ಎಂಬ ನಿರ್ಧಾರಕ್ಕೆ ಬಂದು ಇತರರ ಕೃತಿಗಳನ್ನು ಓದುವುದನ್ನೇ ನಿಲ್ಲಿಸಿಬಿಡಬಹುದು. 



ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬೇರೆಯೇ ಆಯಾಮ ಪಡೆದು ಬೆಳೆಯುತ್ತಿರುವ ಸಾಹಿತ್ಯ ರಚನೆಗಳಿಂದ ಒಳಿತು-ಕೆಡುಕುಗಳೆರಡೂ ಇವೆ. ಆದರೆ ಏನೂ ಬರೆಯದೇ, ಏನನ್ನೂ ಓದದೇ ತಟಸ್ಥವಾಗಿರುವ ಬದಲು ಎಲ್ಲಾ ವರ್ಗದವರೂ ಸಮಾನ ಆಸಕ್ತಿಯಿಂದ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಅನಿಸುತ್ತಿದೆ. ಆದರೆ ಬರವಣಿಗೆ ಎಂಬುದು ವಿಕಸನ ಹೊಂದಬೇಕಾದರೆ ಸಾಹಿತ್ಯದ ಓದು ಸಹ ಅಷ್ಟೇ ಮುಖ್ಯವಾಗುತ್ತದೆ. ಅಂತಹ ಅವಕಾಶಗಳು ಇಲ್ಲಿ ಸಿಗುವುದು ಕಡಿಮೆ. ಸ್ಪರ್ಧೆಯೆಂಬ ಗುರಿಯಿಟ್ಟು ಹಿರಿಯ ಸಾಹಿತಿಗಳ ಸಾಹಿತ್ಯವನ್ನು ಓದುವ ಅವಕಾಶವನ್ನೂ ಇಲ್ಲಿ ಕಲ್ಪಿಸಿದರೆ, ನಾವೆಷ್ಟು ಅಲ್ಪರು ಎಂಬ ಅರಿವಾಗಿ ಮತ್ತಷ್ಟು ಬೆಳೆಯುವ ಛಲ ಮೂಡಬಹುದು. 

****************

ಶ್ರೀಕಲಾ ಬಿ. ಕಾರಂತ್,

ಅಳಿಕೆ, ಬಂಟ್ವಾಳ ತಾಲೂಕು

Thursday, June 23, 2022

ಮಕ್ಕಳ ಸಾಹಿತ್ಯ ನೀತಿಕತೆ ಹುಂಬತನ ಒಳ್ಳೆಯದಲ್ಲ



ಬತ್ತದ ತೊರೆ ಸ್ನೇಹ ಬಳಗ,

 ಕಾರಂತಜ್ಜನ ನೆರಳಿನಡಿಯಲ್ಲಿ..

( ಕಲೆ ಹಾಗೂ ಸಾಹಿತ್ಯ ವೇದಿಕೆ )

➖➖➖➖➖➖➖➖➖➖➖

ದಿನಾಂಕ ೨೨/೦೬/೨೦೨೨ ಬುಧವಾರ ಮಕ್ಕಳ ಸಾಹಿತ್ಯ ವಿಭಾಗದಲ್ಲಿ ಮಕ್ಕಳ ನೀತಿಕತೆ  ಸ್ಪರ್ಧೆಗಾಗಿ

ವಿಷಯ: ಹುಂಬತನ ಒಳ್ಳೆಯದಲ್ಲ ಎಂಬ ವಿಷಯದ ಕುರಿತಾದ ನೀತಿಕತೆಗಳ ಸಂಗ್ರಹ

(೧)

ಶೀರ್ಷಿಕೆ: ಅವಿವೇಕದ ಫಲ

ಮಕ್ಕಳೇ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ನಮ್ಮಲ್ಲಿ ಬುದ್ಧಿವಂತಿಕೆ ಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇರಲೇಬೇಕು. ಬೇರೆಯವರಿಗೆ ನಾವು ಕೆಲಸ ಮಾಡಿಕೊಡುವಾಗ ಅಥವಾ ಸಹಾಯ ಮಾಡುವಾಗ ಏನೂ ಗೊತ್ತಿಲ್ಲದಂತೆ ಅಥವಾ ಅವಿವೇಕತನದಿಂದ ಕೆಲಸವನ್ನು ಮಾಡಬಾರದು. ಮುದ್ದು ಮಕ್ಕಳೇ ನಿಮಗಾಗಿ ಒಂದು ಪುಟ್ಟ ನೀತಿ ಕತೆಯನ್ನು ಹೇಳಲು ಬಯಸುತ್ತೇನೆ.

ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಪ್ರಾಣಿಗಳೆಂದರೆ ತುಂಬಾ ತುಂಬಾ ಪ್ರೀತಿ. ಅವನು ಎಲ್ಲರಿಗೂ ಸಹಾಯ ಮಾಡುವ ಗುಣದವನಾಗಿದ್ದ.ಆ ಊರಿನವರಿಗೆ ರಾಜನೆಂದರೆ ತುಂಬಾ ಪ್ರೀತಿ. ಅವನ ಮನೆಗೆ ಬಂದವರಿಗೆ ಅವನು ಖಾಲಿ ಕೈಯಲ್ಲಿ ಕಳಿಸಿ ಕೊಡುತ್ತಿರಲಿಲ್ಲ. ಬಂದವರಿಗೆ ಹೊಟ್ಟೆ ತುಂಬಾ ಊಟ, ಬಟ್ಟೆ-ಬರೆಗಳನ್ನು ದಾನ ಕೊಡುತ್ತಿದ್ದ. ಅವನ ಮನೆಯಲ್ಲಿ ನಾಯಿ ಮತ್ತು ಬೆಕ್ಕನ್ನು ಸಾಕುತ್ತಿದ್ದ. ಅವುಗಳ ಜೊತೆಗೆ ಒಂದು ಕೋತಿಯನ್ನು ಸಾಕಿದ್ದನು. ನಾಯಿ ಮತ್ತು ಬೆಕ್ಕಿಗಿಂತ ಅವನಿಗೆ ಕೋತಿಯ ಮೇಲೆ ಬಹಳಷ್ಟು ಪ್ರೀತಿ.ಆ ಕೋತಿಯೂ  ಕೂಡ ಅವನೆಂದರೆ ತುಂಬಾ ಇಷ್ಟ ಪಡುತ್ತಿತ್ತು. ಅವನ ಜೊತೆಯೇ ಇರುತ್ತಿತ್ತು. ಅವನ ಜೊತೆ ಅವನ ಆಪ್ತ ಸೇವಕನಂತೆ ಇರುತ್ತಿತ್ತು. ಹೊರಗಡೆ ವಿಶ್ರಾಂತಿ ತೆಗೆದುಕೊಳ್ಳಲು ಹೊರಟಾಗ ಅವನ ಜೊತೆಯಲ್ಲಿ ಹೋಗುತ್ತಿತ್ತು. ಬೃಂದಾವನದಲ್ಲಿ ತಂಪಾದ ಗಾಳಿ ತೆಗೆದುಕೊಂಡು ಬಹಳ ಆರಾಮ ನಿದ್ದೆ ಮಾಡಿ ಬರುತ್ತಿದ್ದನು. ಯಾವಾಗಲೂ ಒಂದು ಗದೆಯೂ ಅವನ ಬಳಿ ಇರುತ್ತಿತ್ತು. ಅವನಿಗೆ ಕೋತಿ ಎಂದರೆ ತುಂಬಾ ಪ್ರೀತಿ. ಹಾಗೆ ಗದೆಯನ್ನು ಯಾವಾಗಲೂ ಹೊರಗಡೆ ಹೋಗುವಾಗ ತನ್ನ ಬಳಿಯೇ ಕೊಂಡು ಹೋಗುತ್ತಿದ್ದ. ಎಂದಿನಂತೆ ವಿಶ್ರಾಂತಿಗಾಗಿ ಹೊರಗಡೆ ಹೋದನು. ಅಲ್ಲಿ ಬೀಸುವ ತಂಪಾದ ಗಾಳಿಗೆ ರಾಜನಿಗೆ ಹಿತವಾದ ನಿದ್ದೆ ಬಂತು. ಅವನ ಪಕ್ಕದಲ್ಲಿ ಕೋತಿಯು ಕುಳಿತಿತ್ತು. ರಾಜನ ಮೇಲೆ ನೊಣವೊಂದು ಕುಳಿತುಕೊಂಡಿತ್ತು. ಕೋತಿ ಒಂದೆರಡು ಬಾರಿ ಅದನ್ನು ಹೊಡೆದೋಡಿಸಿತು. ಆದರೆ ನೊಣವು ಪುನಃ ಪುನಃ ರಾಜನ ಮೈಮೇಲೆ ಬಂದು ಕೂತುಕೊಳ್ಳಲು ಪ್ರಾರಂಭಿಸಿತು. ಇದನ್ನು ಕಂಡ ಕೋತಿಯು ರಾಜನ ಮೇಲಿರುವ ಅತಿಯಾದ ಮಮತೆಗೆ ತನ್ನ ಒಡೆಯನ ನಿದ್ದೆಯನ್ನು ಹಾಳು ಮಾಡುತ್ತಿದೆಯಲ್ವಾ, ಎಂದು ವಿಪರೀತ ಸಿಟ್ಟು ಬಂದು ಕೋತಿಯ ಕೋಪ ನೆತ್ತಿಗೇರಿತು. ಇದಕ್ಕೆ ಬುದ್ಧಿ ಕಲಿಸಲೇಬೇಕೆಂದು ಆಚೀಚೆ ಹುಡುಕಲು ಆರಂಭಿಸಿತು. ಆವಾಗ ರಾಜನ ಪಕ್ಕದಲ್ಲಿದ್ದ ಗದೆಯು ಕೋತಿಯ ಕಣ್ಣಿಗೆ ಬಿತ್ತು. ಅದನ್ನು ನೋಡಿದ ತಕ್ಷಣ ಕೋತಿಗೆ ಎಲ್ಲಿಲ್ಲದ ಧೈರ್ಯ ಬಂದೇಬಿಟ್ಟಿತು. ಗದೆಯನ್ನು ಎತ್ತಿಕೊಂಡು ಸಾಯಿಸುವ ನಿರ್ಧಾರ ಮಾಡಿತು.

 ನೊಣವು ಹಾರಿ ಬಂದು ರಾಜನ ಮೂಗಿನ ಮೇಲೆ ಕುಳಿತುಕೊಂಡಾಗ ಕೋತಿ ಸಿಟ್ಟಿನಿಂದ "ನಿನಗೆ ನನ್ನ ಭಯವಿಲ್ಲವೇ? ನಿನ್ನ ಹಠವೇ ನಿನಗೆ ಮೇಲಾದರೆ ಈಗೋ ನನ್ನ ಶಕ್ತಿ ಏನೆಂದು ನೋಡು"ಇಂದು ಗದೆಯನ್ನು ಎತ್ತಿ ಅದರ ಮೇಲೆ ಬೀಸಿತು.ಆ ಗದೆಯ ಹೊಡೆತಕ್ಕೆ ರಾಜನ ತಲೆ ಜಜ್ಜಿ ಹೋಯಿತು. ನೊಣವು ತಪ್ಪಿಸಿ ಹಾರಿತು. ಅತೀ ಬುದ್ಧಿವಂತಿಕೆ ಹಾಗೂ ಕರ್ತವ್ಯನಿಷ್ಠೆಯಿಂದ ಮಾಡಿದ ಕೆಲಸದ ಅವಿವೇಕತನದಿಂದ ಕೋತಿ ತನ್ನ ಒಡೆಯನ ಜೀವವನ್ನೇ ಬಲಿ ತೆಗೆದುಕೊಂಡಿತು. ತಿಳಿಯಿತಾ ಮಕ್ಕಳೇ ನಾವು ಎಷ್ಟೇ ಬುದ್ಧಿವಂತರಾದರೂ ಕೆಲವೊಮ್ಮೆ ನಾವು ಇನ್ನೊಬ್ಬರ ಮೇಲೆ ಇಟ್ಟಿರುವ ಪ್ರೀತಿ ನಂಬಿಕೆ ಕಾರ್ಯತತ್ಪರ್ಯತೆಯ ಫಲವಾಗಿ ನಮ್ಮನ್ನೇ ನಾವು ಹುಂಬತನರನ್ನಾಗಿ ಅಥವಾ ಅವಿವೇಕಿಗಳನ್ನಾಗಿ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಪರಾಮರ್ಶಿಸಿ ಕೆಲಸವನ್ನು ಮಾಡಬೇಕು ಇಲ್ಲದಿದ್ದರೆ ಕೋತಿಯಂತ ಪರಿಸ್ಥಿತಿಯು ನಮಗೂ ಬಂದೇ ಬರುತ್ತದೆ. ಈ ನೀತಿ ಕತೆಯಿಂದ ವಿವೇಚನೆ ಇಲ್ಲದೆ ಮಾಡುವ ಕೆಲಸಕ್ಕೆ ಯಾವತ್ತು ಜಯ ಸಿಗುವುದಿಲ್ಲ. ಜೀವನದಲ್ಲಿ ಯಾವತ್ತೂ ಹುಂಬತನ ಒಳ್ಳೆಯದಲ್ಲ. ಎಂಬುದು ಮನದಟ್ಟಾಯಿತು.

ಮಕ್ಕಳೇ ಎಲ್ಲಾ ಗೊತ್ತಿದ್ದೂ ಅವಿವೇಕದಿಂದ ವರ್ತಿಸದಿರಿ.ಜೀವನದಲ್ಲಿ ಸಮಸ್ಯೆಗಳ ಪರಿಹಾರಿಸಿಕೊಳ್ಳಿರಿ ಹೊರತು ನಿಮ್ಮಿಂದ ಬೇರೆಯವರಿಗೆ ಸಮಸ್ಯೆ ಆಗದಿರಲಿ ಮಕ್ಕಳೇ ಇಲ್ಲಿಗೆ ನೀತಿ ಕತೆಯನ್ನು ಮುಗಿಸುತ್ತೇನೆ.


ಸವಿತಾ ಸತೀಶ್ ಶೆಟ್ಟಿ ಗೃಹಿಣಿ (ಬೆಳ್ತಂಗಡಿ)


 (೨)

ಹಿರಿಯರ ಮಾತಲ್ಲಿ ಗೌರವವಿರಲಿ

ಮಕ್ಕಳೇ, ಹುಂಬತನ ಅಂದರೆ ಕೆಟ್ಟ ಧೈರ್ಯ. ನಿಮ್ಮಲ್ಲಿ ಕೆಲವರು ಆಳದ ನೀರಲ್ಲಿ ಈಜಬೇಡಿ, ಅಪಾಯ ಇದೆ ಎಂಬ ಹಿರಿಯರ ಮಾತು ಕೇಳದೇ,ಈಜಲು ಹೋಗಿ ಅಪಾಯಕ್ಕೆ ಸಿಲುಕುತ್ತೀರಿ ನೋಡಿ. ಜೀವನದಲ್ಲಿ ಯಾವ ಕೆಲಸಕ್ಕೂ ಹುಂಬತನ ಮಾಡಲೇ ಬಾರದು. ಒಳ್ಳೆಯ ರೀತಿಯ ಜೀವನ ನಡೆಸಲು ಎಚ್ಚರಿಕೆಯ ಮಾರ್ಗ ಅನುಸರಿಸಬೇಕು. ಇದಕ್ಕಾಗಿ ಒಂದು ಕತೆ ಹೇಳುವೆ ಕೇಳಿ ಮಕ್ಕಳೇ.

ಸಿರಿಯೂರು ಒಂದು ಸುಂದರವಾದ ಹಳ್ಳಿ. ಅಲ್ಲಿ ಶಂಕರ ಮತ್ತು ಸೀತಾ ದಂಪತಿಗಳು, ರಘು ಮತ್ತು ರಾಜು ಎಂಬ ಎರಡು ಮಕ್ಕಳೊಡನೆ ವಾಸವಾಗಿದ್ದರು. ಇದ್ದ ಸ್ವಲ್ಪ ಹೊಲದಲ್ಲಿ ಬೇಸಾಯ ಮಾಡುತ್ತಾ, ಜೀವನ ಮಾಡುತ್ತಿದ್ದರು. ರಘುಗೆ ಹಿರಿಯರಲ್ಲಿ ಬಹಳ ಭಯಭಕ್ತಿ. ದಿನಾ ಸೂರ್ಯ ಹುಟ್ಟುವ ಮೊದಲೇ ಏಳುತ್ತಿದ್ದ. ಶಾಲೆಯಲ್ಲಿ ಗುರುಗಳು ಆ ದಿನ ಕಲಿಸಿದ ಪಾಠಗಳನ್ನು ಅದೇ ದಿನ ಓದಿ, ಬರೆದು ಕಲಿತು ಬಿಡುತ್ತಿದ್ದ. ಅಪ್ಪನಿಗೂ, ಅಮ್ಮನಿಗೂ  ಬಿಡುವಿನ ವೇಳೆಯಲ್ಲಿ ಕೆಲಸದಲ್ಲೂ ಕೈಲಾದ ಸಹಾಯ ಮಾಡುತ್ತಿದ್ದ. ಅಕ್ಕ ಪಕ್ಕದಲ್ಲೆಲ್ಲ ರಘು ತುಂಬಾ ಒಳ್ಳೆಯ ಹುಡುಗನೆಂದೇ ಚಿರಪರಿಚಿತನಾಗಿದ್ದ. ರಾಜು ತದ್ವಿರುದ್ಧ. ದಿನಾ ಬೆಳಿಗ್ಗೆ ಅವನು ಸೂರ್ಯ ಬಂದ ಮೇಲೆ ಏಳುತ್ತಿದ್ದ. ಓದು ಬರಹದಲ್ಲೂ ಹಿಂದು. ಹೇಳಿದ ಮಾತು ಕೇಳುತ್ತಿರಲಿಲ್ಲ. ಗುರು ಹಿರಿಯರಲ್ಲೂ ಗೌರವವಿಲ್ಲ. ಕೆಟ್ಟ ಹುಂಬ ಬೇರೆ. ಯಾರು ಏನೇ ಹೇಳಿದರೂ ಅವನು ಕೇಳುತ್ತಿರಲಿಲ್ಲ. ನಂಬುತ್ತಿರಲಿಲ್ಲ.  ಎಲ್ಲವನ್ನು ತಾನೇ ಪರೀಕ್ಷಿಸಲು ಹೋಗುತ್ತಿದ್ದ. ಒಮ್ಮೆ ಏನಾಯಿತು ಅಂದರೆ , ಯಾರೋ ಆಗಸ ತಾನು ಸಾಕಿದ ಕತ್ತೆಯಿಂದ ಸರಿಯಾಗಿ ಕೆಲಸ ತೆಗೆದುಕೊಂಡು, ಮುದಿಯಾಯಿತೆಂದು ಹೊಡೆದು ಹೊರ ಹಾಕಿದ್ದ. ಆ ಕತ್ತೆ. ತಿರುಗಾಡುತ್ತ ಆಹಾರ ಅರಸಿ, ಸಿರಿಯೂರಿಗೆ ಬಂತು. ರಾಜುಗೆ ಇದನ್ನು ನೋಡಿ ತಮಾಷೆಯಾಗಿ ಕಂಡಿತೇನೋ ? ಕತ್ತೆಯ ಹಿಂದಿಂದೆ ಓಡಾಡ ತೊಡಗಿದ. ಹಿರಿಯರೆಲ್ಲ "ಏ ರಾಜು, ಕತ್ತೆ ಹಿಂದೆ ಹೋಗಬೇಡೋ. ಹಿಂದೆ ಹೋದರೆ ಕತ್ತೆ ಒದೆಯುತ್ತದೆ. ಹೋಗಬೇಡಪ್ಪಾ " ಅಂತ ಬುದ್ಧಿ ಹೇಳಿದರು. ರಾಜು ಮಾತು ಕೇಳೋ ಹುಡುಗನಾ ? ಮುದ್ದಾಮ್ ಕತ್ತೆ ಹಿಂದೆ ಹೋದ. ಕತ್ತೆ ತನ್ನ ಗುಣ ತೋರಿಸಿಯೇ ಬಿಟ್ಟಿತು. ಹಿಂದಿನ ಕಾಲೆತ್ತಿ ಬಲವಾಗಿ ರಾಜುನ ಮುಖಕ್ಕೆ ಒದೆಯಿತು. ಆ ಹೊಡೆತಕ್ಕೆ ರಾಜು  ನಾಲ್ಕು ಮಾರು ಹಿಂದೆ ಹೋಗಿ ಬಿದ್ದ.  ಮುಖಕ್ಕೆ ಏಟು ಬಿದ್ದು , ಆಗಲೇ ಎರಡು ಹಲ್ಲು ಬಿದ್ದು ಹೊಯ್ತು. ಬಾಯಿಂದ ರಕ್ತ ಬಳಬಳನೆ ಸುರಿಯಲಾರಂಭಿಸಿತು. ರಾಜು ಬಿದ್ದಿದ್ದು ಹುಲ್ಲಿನ ಮೂಟೆ ಮೇಲೆ. ಆದ್ದರಿಂದ, ತಲೆಗೆ  ಏಟುಬಿದ್ದು ಆಗುವ ದೊಡ್ಡ ಅನಾಹುತ ತಪ್ಪಿತು. ಎಲ್ಲರೂ ಓಡೋಡಿ ಬಂದು ರಾಜುವನ್ನು ಎತ್ತಿದರು. 

ಅಪ್ಪ, ಅಮ್ಮ ಓಡಿಬಂದು ಅಲ್ಲಿಯೇ ಹತ್ತಿರದಲ್ಲಿ ಇದ್ದ ಆಸ್ಪತ್ರೆಗೆ ಕರೆದೊಯ್ದರು. ರಾಜು ಈ ಹಿಂದೆಯೂ ತನ್ನ ಹುಂಬತನದಿಂದ ಸಾಕಷ್ಟು ನೋವು ತಿಂದಿದ್ದ. ಆದರೆ ಈ ಬಾರಿ ಹಲ್ಲು ಮುರಿಸಿಕೊಂಡು ಸರಿಯಾಗಿ  ಬುದ್ಧಿ ಕಲಿತ. ಅಕಸ್ಮಾತ್ ರಾಜು ಬಿದ್ದಲ್ಲಿ ಹುಲ್ಲಿನ ಮೂಟೆ ಇಲ್ಲವಾಗಿದ್ದರೆ, ರಾಜು ಬದುಕಿರುತ್ತಿರಲಿಲ್ಲ ಅಲ್ಲವೇ ?

ನೋಡಿದ್ರಾ ಮಕ್ಕಳೇ, ದೊಡ್ಡವರು ಹೇಳುವ ಅನುಭವದ ನುಡಿಗಳನ್ನು ಕೇಳಿದರೆ, ಯಾವ ಆಪತ್ತು ಬರುವದಿಲ್ಲ. ನೀವೆಲ್ಲಾ ಹಿರಿಯರು ಹೇಳುವ, ನೀತಿಮಾತುಗಳನ್ನು ಕೇಳಿ, ಅನುಸರಿಸಿ, ಜಾಣರಾಗಿ ಬಾಳಿರಿ.


ತಾತ್ಪರ್ಯ-  ಹುಂಬತನ ಪ್ರಾಣಕ್ಕೆ ತರುವುದು ಕುತ್ತು.

ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ (ಉತ್ತರ ಕನ್ನಡ )


(೩)

ಶೀರ್ಷಿಕೆ-ಹುಂಬತನ ತರವಲ್ಲ

ಕವಿತಾ ರವಿ ದಂಪತಿಗಳಿಗೆ ಬಹಳ ದಿನಗಳ ಮೇಲೆ ಮಕ್ಕಳಾಯಿತು. ಒಂದು ಗಂಡು ಒಂದು ಹೆಣ್ಣು. ಇಬ್ಬರನ್ನು ಮುದ್ದಿನಿಂದ ಬೆಳೆಸಿದ್ದರು. ಮಗಳು ದೀಪು ಸೌಮ್ಯ ವಾಗಿಯೇ ಇದ್ದಳು. ಮಗ ಭಾಸ್ಕರನು ಬಹಳ ಹುಂಬುತನವನ್ನು ಮಾಡುತ್ತಿದ್ದನು. ಸ್ವಲ್ಪ ಹೆಚ್ಚಾಗಿಯೇ ಭಾಸ್ಕರ ನನ್ನು ಗಂಡುಮಗು ಎಂದು ಪ್ರೀತಿಸಿದ್ದರು ಇದಕ್ಕೆ ಕಾರಣವಿರಬಹುದು. ಮನೆಯಲ್ಲಿ ತಂಟೆ ಮಾಡಿದಲ್ಲದೇ ಶಾಲೆಯಲ್ಲೂ ಸಹ ಬಹಳಷ್ಟು ಗಲಾಟೆ ಮಾಡುತ್ತಿದ್ದಾನು. ಶಾಲೆಯಿಂದ ದಿನವೂ ಅಧ್ಯಾಪಕರಿಂದ ದೂರು ಬರುತ್ತಿತ್ತು. ಮನೆಗೆ ಬಂದ ನಂತರ ಇದೇ ತುಂಟುತನ ಅಕ್ಕಪಕ್ಕದ ಮನೆಯವರಿಂದ ದೂರ ಬರುತ್ತಿತ್ತು.

ಒಂದುದಿನ ಪಕ್ಕದ ಮನೆಯ ಕಿಟಕಿಗೆ ಕಲ್ಲು ಎಸೆದು ಕಿಟಕಿಯ ಗಾಜನ್ನು ಮುರಿದಿದ್ದನು. ಪಕ್ಕದ ಮನೆಯವರು ಬಂದು ರವಿಯೊಂದಿಗೆ ಜಗಳ ಆಡಿ ಅದರ ರಿಪೇರಿಗೆ ಹಣವನ್ನು ತೆಗೆದುಕೊಂಡು ಹೋದರು. ಇದನ್ನೆಲ್ಲಾ ಗಮನಿಸಿದರು ಭಾಸ್ಕರನು ತನ್ನ ತುಂಟಾಟವನ್ನು ಮಾತ್ರ ಬಿಡಲಿಲ್ಲ. ಮತ್ತೊಂದು ದಿನ ಸ್ನೇಹಿತರೊಂದಿಗೆ ಸೇರಿ ಒಬ್ಬರ ಮನೆಯಲ್ಲಿ ಹಣ್ಣು ಹೂಗಳನ್ನು ಕಿತ್ತು ಗಿಡದಿಂದ ಎಲ್ಲವನ್ನು ಹಾಳು ಮಾಡಿದನು. ಅವರಿಂದಲೂ ರವಿಗೆ ದೂರು ಬಂದಿತ್ತು. ಇದರಿಂದ ದಂಪತಿಗಳಿಬ್ಬರಿಗೂ ಭಾಸ್ಕರನ ಮೇಲೆ ಚಿಂತೆ ಮೂಡಿತ್ತು. ತಂದೆ ತಾಯಿಯ ಮಾತಿಗೆ ಬೆಲೆಕೊಡದೆ ಹೋಗಿದ್ದನ್ನು ಭಾಸ್ಕರ.

ಭಾಸ್ಕರನಿಗೆ ತನ್ನ ಅಪ್ಪನ ಕಾರು ಎಂದರೆ ತುಂಬಾ ಪ್ರೀತಿಯಿತ್ತು. ಒಂದು ದಿನ ರವಿಯ ಮನೆಗೆ ಬಂಧು ಗಳು ಬಂದಿದ್ದರು. ಆಗಷ್ಟೇ ಬಂದ ರವಿಯು ಕಾರಿನ ಕೀಯನ್ನು ಅವರೊಂದಿಗೆ ಮಾತನಾಡುತ್ತ ಟಿಪಾಯಿ ಯು ಮೇಲೆ ಇಟ್ಟು ಮಾತಿಗೆ ಕುಳಿತಿದ್ದನು. ಅಷ್ಟರಲ್ಲಿ ಭಾಸ್ಕರನು ಒಳಗಿನಿಂದ ಬಂದು ಮೆಲ್ಲಗೆ  ಕಾರಿನ ಕೀಯನ್ನು ತೆಗೆದುಕೊಂಡು ಕಾರಿನತ್ತ ಹೊರಗೆ ಓಡಿದನು. ಮಾತಿನ ಭರದಲ್ಲಿ ಯಾರು ಇದನ್ನು ಗಮನಿಸಲಿಲ್ಲ. ಕಾರನ್ನು ಸ್ಟಾರ್ಟ್ ಮಾಡಿದನು. ಅವನಿಗೆ ಸರಿಯಾಗಿ ಕಾರು ನಡೆಸಲು ಬರುತ್ತಿರಲಿಲ್ಲ. ಇದನ್ನು ಮನೆಯಲ್ಲಿ ಯಾರೂ ಗಮನಿಸಿರಲಿಲ್ಲ. ಸ್ವಲ್ಪ ದೂರ ಹೋದಮೇಲೆ ಒಂದು ಮರಕ್ಕೆ ಡಿಕ್ಕಿ ಹೊಡೆದನು. ಕಾರಿನ ಮುಂದಿನ ಭಾಗ ಜಕ್ಕಂ ಆಗಿತ್ತು. ಅವನು ಪ್ರಜ್ಞೆತಪ್ಪಿ ಕಾರಿನಲ್ಲಿ ಬಿದ್ದುಬಿಟ್ಟಿದ್ದನು. ಪಕ್ಕದಲ್ಲೇ ಇದ್ದ ಕೆಲವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಸೇರಿಸಿದರು. ನಂತರ ರವಿಯ ನಂಬರ್ ಅನ್ನು ಹುಡುಕಿ ನಡೆದ ವಿಷಯವನ್ನು ಫೋನಿನಲ್ಲಿ ಹೇಳಿದರು. ಎಲ್ಲರೂ ಆಸ್ಪತ್ರೆಯತ್ತ ಓಡಿದರು. ಆತನ ಹುಂಬತನಕ್ಕೆ ತಾವೇ ಕಾರಣ ಎಂಬುದು ತಂದೆ ತಾಯಿ ಅನಿಸಿತು. ಮಾರನೇ ದಿನ ಭಾಸ್ಕರನಿಗೆ ಎಚ್ಚರ ಬಂದಾಗ ತನ್ನ ತಪ್ಪಿನ ಅರಿವು ಆತನಿಗೆ ಆಯಿತು. ತನ್ನ ನೆಚ್ಚಿನ ಕಾರು ಸ್ಥಿತಿ ನೋಡಿ ಮನ ನೊಂದುಕೊಂಡನು.

ನೋಡಿ ಮಕ್ಕಳೆ ನಮ್ಮ ಹುಂಬತನದಿಂದ ಎಷ್ಟೊಂದು ನಷ್ಟಗಳು ಉಂಟಾಗುತ್ತದೆ ಎಂದು. ಮಕ್ಕಳು ಮಕ್ಕಳ ತರ ಇದ್ದರೆ ಚೆನ್ನ. ಅಲ್ಲವೇ ?


ಕೆ. ಆರ್ .ಉಷಾ ದಿದ್ದಿಗಿ, ಹೈದರಾಬಾದ್.


(೪)

ಶೀರ್ಷಿಕೆ: ಹುಂಬತನದ ಅವಾಂತರ


ಹಿಂದೆ ವಿದರ್ಭ ದೇಶವನ್ನು ಮಧುವರ್ಮ ಎಂಬ ರಾಜನು  ರಾಜ್ಯಭಾರ ಮಾಡುತ್ತಿದ್ದ.ತನ್ನ ಪ್ರಜೆಗಳನ್ನು ಮಕ್ಕಳಂತೆಯೇ‌ ನೋಡಿಕೊಳ್ಳುತ್ತಿದ್ದ."ಯಥಾ ರಾಜಾ ತಥಾ ಪ್ರಜಾ " ಅಂದರೆ ಹೇಗೆ ರಾಜನೋ,ಹಾಗೆಯೇ‌ ಪ್ರಜೆಗಳಿದ್ದರು.ರಾಜನಿಗೆ ಇಂದುಲೇಖಾ ಅಂತ ಒಬ್ಬಳು ಮುದ್ದಾದ ರಾಜಕುಮಾರಿಯಿದ್ದಳು.ಅವಳಿಗೆ ಮದುವೆ ಮಾಡುವ ವಯಸ್ಸಾಗಿತ್ತು.ರಾಜನಿಗೂ ಪ್ರಾಯವಾಗುತ್ತಾ ಬಂದಿತ್ತು.ಮಗಳಿಗೆ ಸೂಕ್ತನಾದ ವರನನ್ನು ಹುಡುಕಿ  ಆದಷ್ಟು ಬೇಗ ಮಗಳಿಗೆ ಮದುವೆ ಮಾಡಿ ರಾಜ್ಯಭಾರವನ್ನು ಅಳಿಯನಿಗೆ ಬಿಟ್ಟು ಕೊಡಬೇಕು ಅಂತ ಯೋಚಿಸಿದ. ಹಾಗೆ ನಾಲ್ಕೂ ದಿಕ್ಕುಗಳಲ್ಲಿ ವರಾನ್ವೇಷಣೆಗೆ‌ ತೊಡಗಿದ.ಮತ್ತೆ "ನನ್ನ ಮಗಳನ್ನು ವರಿಸಲು ಬಂದ ರಾಜಕುಮಾರರು ನಾನು ಹೇಳಿದ ಷರತ್ತಿಗೆ ಬದ್ಧರಾಗಿರಬೇಕು.ನಾನು ಮಾಡುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನನ್ನ ಮಗಳು ಇಂದುಲೇಖಾಳನ್ನು ಕೊಟ್ಟು ಮದುವೆ ಮಾಡುವೆನಲ್ಲದೆ ನನ್ನ ಇಡೀ ರಾಜ್ಯವನ್ನು ಅವನಿಗೆ ವಹಿಸುವೆ" ಎಂದು ಸುತ್ತೋಲೆಯನ್ನು ಹೊರಡಿಸಿದ. ಒಂದು ನಿರ್ದಿಷ್ಟ ದಿನವನ್ನು ನಿರ್ಧಾರ ಮಾಡಿ "ಮದುವೆ ಆಗಬಯಸುವ ಎಲ್ಲಾ ರಾಜಕುಮಾರರು ಬಂದು ನನ್ನನ್ನು ಭೇಟಿಯಾಗಿ" ಎಂದ. ಆ ದಿನ  ಸುತ್ತ ಮುತ್ತ ಎಲ್ಲಾ ದೇಶದ ಯುವ ರಾಜಕುಮಾರರು ವಿದರ್ಭ ದೇಶಕ್ಕೆ ಬಂದು ಸರದಿಯ ಸಾಲಿನಲ್ಲಿ ನಿಂತರು.

ಮಧುವರ್ಮ ರಾಜನು ಒಬ್ಬೊಬ್ಬರನ್ನೇ  ಒಳಗೆ ಕರೆಸಿ ಅನೇಕ ಪ್ರಶ್ನೆಗಳನ್ನು ಕೇಳಿದನು.ಅವರೆಲ್ಲಾ ಅವರಿಗೆ ‌ತಿಳಿದಂತೆ ಉತ್ತರಿಸಿದರು.ಕೆಲವರಂತೂ ಉದ್ಧಟತನವನ್ನು ತೋರಿದರು. ರಾಜನು ಎಲ್ಲರನ್ನೂ ವಿಚಾರಿಸಿ ಆದ ಮೇಲೆ ಅವರಲ್ಲಿ ಮೂವರು ರಾಜಕುಮಾರರನ್ನು ಆಯ್ಕೆ ಮಾಡಿದನು. ಅವರೇ ಸುಭದ್ರ ದೇಶದ ನಂದವರ್ಮ,ಮದ್ರ ದೇಶದ ಮಾಧವವರ್ಮ ಮತ್ತೆ ಸಾರಂಗ ದೇಶದ  ಶುಭವರ್ಮ. ಆಯ್ಕೆ ಮಾಡಿದ ಈ ಮೂವರನ್ನು ಪುನಃ ಒಂದು ದಿನ  ತನ್ನ ದೇಶಕ್ಕೆ ಕರೆಯಿಸಿಕೊಂಡ  ಮಧುವರ್ಮ ರಾಜ. ಧುವರ್ಮ ರಾಜನು ಆ ಮೂವರು ರಾಜಕುಮಾರರಿಗೂ ಒಂದೊಂದು ಕೋಣೆಯನ್ನು ಕೊಟ್ಟು "ಈ ಕೋಣೆಯನ್ನು ಹೇಗಾದರೂ ಯಾವ ವಸ್ತುವಿನಿಂದ ಆದರೂ ಸರಿ ಭರ್ತಿ ಮಾಡಬೇಕು ಎಂದ.ಇದಕ್ಕೆ ಕಾಲಾವಧಿ ಅರ್ಧ ಗಂಟೆ ಮಾತ್ರ.ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನನ್ನ ಮಗಳು ಇಂದುಲೇಖಾ ಮತ್ತು ನನ್ನ ವಿದರ್ಭ ದೇಶವನ್ನೂ  ಕೊಡುವೆ" ಎಂದು ವಾಗ್ದಾನವಿತ್ತನು. ಸುಭದ್ರ ದೇಶದ ರಾಜಕುಮಾರ ,ನಂದವರ್ಮನು ಹಗುರವಾದ ಹತ್ತಿಯನ್ನು ಹೊತ್ತು ‌ತರಲು ಸುಲಭ.ಅದನ್ನೇ‌ ತಂದು ಕೋಣೆಯನ್ನು ಭರ್ತಿ ಮಾಡಬೇಕು ಅಂತ  ಬೇಗ  ಹೋಗಿ ಹತ್ತಿಯನ್ನು ಮಾರುವವನ ಬಳಿ ಹೋಗಿ ಹತ್ತಿ ಗೋಣಿಗಳನ್ನು ಖರೀದಿಸಿ  ತನ್ನ ಕೋಣೆಗೆ ಬಂದು ಸುರುವಿದ.ಅರ್ಧಗಂಟೆ ಆಗುವಾಗ ಮಧುವರ್ಮ ರಾಜನ ಭಂಟನು ಆ ಕೋಣೆಗೆ ಬೀಗ ಹಾಕಿದ.

ಮದ್ರ ದೇಶದ ಮಾಧವ ವರ್ಮ ರಾಜಕುಮಾರನು ಬೇಗ  ಹೋಗಿ ಸುಲಭವಾಗಿ ಸಿಗುವ ಕಟ್ಟಿಗೆಗಳನ್ನು ‌ತಂದು ತನ್ನ ಕೋಣೆಗೆ ತುಂಬಿಸಿದ.ಅರ್ಧ ಗಂಟೆ  ಆದಾಗ ಆ ಭಂಟನು ಅವನ ಕೋಣೆಗೆ ಬೀಗ ಹಾಕಿದ.ಸಾರಂಗ ದೇಶದ ರಾಜಕುಮಾರ ಶುಭವರ್ಮನು ಏನು ಮಾಡಿದೆನೋ ಗೊತ್ತಿಲ್ಲ.ಭಂಟನ ಬಳಿ ಬಂದು ನನ್ನ ಕೋಣೆಗೆ ಬೀಗ ಹಾಕಬಹುದು ಎಂದ.ಅವನು ಬೀಗ ಹಾಕಿದ. ರಾಜ ಮಧುವರ್ಮನು ನಂದವರ್ಮನ ಕೋಣೆಯ ಬೀಗ ತೆರೆಸಿದ.ಹತ್ತಿ ತುಂಬಿತ್ತು. ಆದರೆ ಇನ್ನಷ್ಟು ಹತ್ತಿ ತುಂಬಲು ಜಾಗ ಉಳಿದಿತ್ತು. ಮತ್ತೆ ಮಾಧವ ವರ್ಮ ರಾಜಕುಮಾರನ ಕೋಣೆ ಬೀಗ ತೆರೆಸಿ ನೋಡಿದ.ಅಲ್ಲಿ ಕಟ್ಟಿಗೆಯ ರಾಶಿ ತುಂಬಿತ್ತು.ಆದರೆ ಇನ್ನಷ್ಟು ಕಟ್ಟಿಗೆ ತುಂಬಿಸಲು ಸ್ಥಳವಿತ್ತು. ಕೊನೆಗೆ ಶುಭವರ್ಮನ ಕೋಣೆಯ ಬೀಗ ತೆರೆಸಿ ನೋಡಿದಾಗ ಅಲ್ಲಿ ದೀಪ ಒಂದು ಪ್ರಕಾಶಮಾನವಾಗಿ ಉರಿಯುತ್ತಿತ್ತು.ಕೋಣೆಯ ತುಂಬಾ ಬೆಳಕು ತುಂಬಿತ್ತು. ರಾಜ ಮಧುವರ್ಮನು ಶುಭವರ್ಮನ ಜಾಣತನವನ್ನು ಮೆಚ್ಚಿ ತನ್ನ ಮಗಳು ಇಂದುಲೇಖಾಳನ್ನು ಶುಭವರ್ಮನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿ ಅವನಿಗೆ ಪಟ್ಟಾಭಿಷೇಕವನ್ನೂ ಮಾಡಿದನು. ಕ್ಕಳೇ... ಹುಂಬತನ ಒಳ್ಳೆಯದಲ್ಲ. ಜಾಣ್ಮೆಯಿಂದ ಸವಾಲನ್ನು ಗೆಲ್ಲಬೇಕು. ಏನೂ ಕಷ್ಟ  ಪಡದೆ ದೀಪ ಉರಿಸಿ ಬೆಳಕನ್ನು ಇಡೀ ಕೋಣೆಗೆ ತುಂಬಿಸಿದ ಶುಭವರ್ಮನಂತೆ ನೀವು ಜಾಣರಾಗಬೇಕು.

ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ 

(೫)

ಶೀರ್ಷಿಕೆ:-ಅಹಂಕಾರಕ್ಕೆ ಮದ್ದಿಲ್ಲ


ಮಕ್ಕಳೇ, ನೀವು ಹಿರಿಯರು ಹೇಳಿದ ಹಾಗೆ ಕೇಳಬೇಕು, ಹಿರಿಯರಿಗೆ ಗೌರವ ಕೊಡಬೇಕು ಮತ್ತು ಅಶಕ್ರರಿಗೆ ಸಹಾಯ ಮಾಡಬೇಕು. ತಮ್ಮಲ್ಲಿ ಬುದ್ದಿವಂತಿಕೆ ಇದೆ ಎಂದು ಅಹಂಕಾರ ಮಾಡಿದರೆ ಅದು ನಿಮ್ಮ ಮೂರ್ಖತನವಾಗಬಹುದು.ಅದು ಹೇಗೆ ಎಂಬುದನ್ನು ಈ ಕಥೆಯ ಮೂಲಕ ತಿಳಿಯೋಣ.

ಒಂದು ಊರಿನಲ್ಲಿ ಸದಾನಂದ ಮತ್ತು ಸುಕನ್ಯಾ ದಂಪತಿಗಳು ಇದ್ದರು.ಅವರಿಗೆ ಮದುವೆಯಾಗಿ ಆರು ವರ್ಷದ ನಂತರ ಒಬ್ಬ ಮಗನು ಹುಟ್ಟಿದ. ಅವನಿಗೆ ಸನತ್ ಎಂದು ನಾಮಕರಣ ಮಾಡಿದರು. ತಂದೆ -ತಾಯಿ ಮಗುವನ್ನು ಅತೀ ಪ್ರೀತಿಯಿಂದ ಸಾಕುತ್ತಿದ್ದರು. ತಾಯಿಯ ಪ್ರೀತಿ ಸುಖವಾದದ್ದು, ತಂದೆ ಪ್ರೀತಿ ಮಧುರವಾದದ್ದು ಎನ್ನುವಂತೆ. ಮಗುವನ್ನು ನೆಲದಲ್ಲಿ  ಇಟ್ಟರೆ ಇರುವೆ ಕೊಂಡೊಯ್ಯಾ ಬಹುದು,ಎತ್ತಿಕೊಂಡರೆ ಗಿಡುಗ ಕೊಂಡೊಯ್ಯಬಹುದು ಎಂಬಂತೆ 

ನೋಡಿಕೊಳ್ಳುತ್ತಿದ್ದರು.

ಹೀಗೆ ಸನತ್ ಬೆಳೆದು ದೊಡ್ಡವನಾಗುತ್ತಾ ಬಂದ.ತಂದೆ-ತಾಯಿಯರ ಅತಿಯಾದ ಪ್ರೀತಿಯಿಂದ ಅವನಲ್ಲಿ ಹಠಮಾರಿತನವೂ ಬೆಳೆಯಿತು. ತಾನು ನೋಡಿದ್ದನ್ನು, ಕೇಳಿದ್ದನ್ನು ಕೊಡಿಸುವಂತೆ ರಚ್ಚೆ ಹಿಡಿಯುತ್ತಿದ್ದ. ಪಕ್ಕದ ಮನೆಯವರಿಗೆ ತುಂಬಾ ಕೀಟಲೆ ಕೊಡುತ್ತಿದ್ದ. ಅವನನ್ನು ಮನೆಯ ಹತ್ತಿರದಲ್ಲಿ ಇರುವ ಶಾಲೆಗೆ ಸೇರಿಸಿದರು. ಸುಕನ್ಯಾಳು ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದಳು.ಆದರೆ ತಾಯಿಯನ್ನು ಬಿಟ್ಟು ಅವನು ಅಲ್ಲಿರಲು ಕೇಳುತ್ತಿರಲಿಲ್ಲ.ಹಾಗಾಗಿ ತರಗತಿ ಮುಗಿಯುವವರೆಗೂ ತಾಯಿ ಅಲ್ಲಿಯೇ ಇರಬೇಕು ಎಂದು ಹಠ ಹಿಡಿಯುತ್ತಿದ್ದ. ತನ್ನ ತರಗತಿಯ ಮಕ್ಕಳಿಗೆಲ್ಲಾ ಕೀಟಲೆ ಮಾಡುತ್ತಿದ್ದ. ಇದರಿಂದ ಟೀಚರ್ ರೋಸಿ ಹೋಗುತ್ತಿದ್ದರು. ಅವನ ತಂದೆಯನ್ನು ಕರೆದು,ಅವನನ್ನು ಬೇರೆ ಶಾಲೆಗೆ ಕಳಿಸುವಂತೆ ಹೇಳಿದರು.ಅವರಿಬ್ಬರಿಗೂ ಮಗನ ಬಗ್ಗೆ ತುಂಬಾ ಬೇಸರವಾಯಿತು. ನಮ್ಮ ಅತಿಯಾದ ಪ್ರೀತಿಯಿಂದ ನಮ್ಮ ಮಗನಿಗೆ ಈ ರೀತಿಯಾಗಿ ಬೆಳೆದ ಎಂದು ಪಶ್ಚಾತ್ತಾಪ ಪಟ್ಟರು.


ಸನತ್ ಯಾವ ಚಿಂತೆಯಿಲ್ಲದೆ ಬೆಳೆಯತೊಡಗಿದ.ಮಗನಿಗೆ ಅಪ್ಪ-ಅಮ್ಮ ಆ ಊರು ಬಿಟ್ಟು ಬೇರೆ ಊರಿಗೆ ಹೋಗುತ್ತಾರೆ. ಮಗನಿಗೆ ತುಂಬಾ ಬುದ್ದಿ ಹೇಳುತ್ತಾರೆ. ಅಲ್ಲಿ ಅವನನ್ನು ಒಂದು ಒಳ್ಳೆಯ ಶಾಲೆಗೆ ಸೇರಿಸುತ್ತಾರೆ. ಸ್ವಲ್ಪ ಹಠ ಕಡಿಮೆ ಆದರೂ, ಒಮ್ಮೊಮ್ಮೆ ಹುಂಬನಂತೆ ವರ್ತಿಸುತ್ತಿದ್ದ.ಹೈಸ್ಕೂಲ್ ಸೇರಿದ ಸನತ್ ತಾನೊಬ್ಬ ಕಾಲೇಜ್ ಹುಡುಗನಂತೆ ವರ್ತಿಸುತ್ತಿದ್ದ. ಒಮ್ಮೆ ತರಗತಿಯಲ್ಲಿ ವಿಜ್ಞಾನ ಕ್ಲಾಸ್ ನಡೆಯುತ್ತಿತ್ತು. ವಿಜ್ಞಾನದ ಅಧ್ಯಾಪಕರು ಪ್ರಯೋಗ ಮಾಡುತ್ತಿದ್ದರು. ಅಧ್ಯಾಪಕರು ಒಂದು ಪ್ರಯೋಗ ಮಾಡಿ ಮಕ್ಕಳಿಗೆ ತೋರಿಸಿದರು. ಸೋಡಿಯಂ ಮೆಟಲ್ ನೀರಿನಲ್ಲಿ ಹಾಕಿದಾಗ ಹೇಗೆ ಸ್ಪೋಟವಾಗುತ್ತದೆ ಎಂದು ತೋರಿಸುತ್ತಿದ್ದರು.ಇದರ ಬಗ್ಗೆ ತುಂಬಾ ಜಾಗ್ರತೆಯಿಂದ ಇರಬೇಕು ಎಂದು ಅಧ್ಯಾಪಕರು ತಿಳಿಸುತ್ತಿದ್ದರು.ಆಗ ಸನತ್ ಅವರಿಗೆ ಸವಾಲು ಹಾಕಿ,ತಾನೂ ಈ ಬಗ್ಗೆ ಮಾಡುವುದಾಗಿ ಮುಂದೆ ಬಂದ.ಅಧ್ಯಾಪಕರು ಬೇಡ ಬೇಡ ಎಂದರೂ ಆ ಪ್ರಯೋಗವನ್ನು ತಾನು ಮಾಡಿದ. ಅದು ಅಲ್ಲಿಯೇ ಸ್ಪೋಟಗೊಂಡು, ಸನತ್ ಮುಖ,ಕೈ ಗೆ ತಾಗಿತು.ಒಮ್ಮೆಗೆ ಉರಿ ಬಂದು ಜೋರಾಗಿ ಕಿರುಚಿ ಕೆಳಗೆ ಬಿದ್ದ. ಕೂಡಲೇ ಅಲ್ಲಿದ್ದವರು ಅವನನ್ನು ಆಸ್ಪತ್ರೆಗೆ ಸೇರಿಸಿ,ಅವನ ಮನೆಗೆ ವಿಷಯ ತಿಳಿಸಿದರು. ವಿಷಯ ತಿಳಿದ ಅವನ ತಂದೆ ತಾಯಿ ಗಾಬರಿಯಿಂದ ಆಸ್ಪತ್ರೆಗೆ ಬಂದರು. ಆವಾಗಲೇ ಡಾಕ್ಟರ್ ರವರು ಅವನಿಗೆ ಬ್ಯಾಂಡೆಜ್ ಹಾಕಿ ಮಲಗಿಸಿದ್ದರು.ಅಧ್ಯಾಪಕರು ವಿಷಯ ತಿಳಿಸಿದಾಗ ತನ್ನ ಮಗನ ಹುಂಬತನಕ್ಕೆ ಅವರಿಬ್ಬರೂ ನಾಚಿಕೆಪಟ್ಟರು.ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಿಂದ ಹೆಚ್ಚಿನ ಅನಾಹುತ ಆಗದ ಬಗ್ಗೆ ಡಾಕ್ಟರ್ ಹೇಳಿದರು. ಸನತ್ ನು ತನ್ನ ಅಧ್ಯಾಪಕರಲ್ಲಿ ತನ್ನ ತಪ್ಪಿನ ಬಗ್ಗೆ ಕ್ಷಮೆ ಕೇಳಿದ. ಸನತ್ ನ ತಂದೆ ತಾಯಿ ಯರು ತನ್ನ ಮಗನ ಜೀವ ಉಳಿಸಿದ ಬಗ್ಗೆ ಅಧ್ಯಾಪಕರಿಗೆ ಧನ್ಯವಾದ ಹೇಳಿದರು. ಇನ್ನಾದರೂ ಅವನಿಗೆ ಬುದ್ದಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.


✍️ ಮಾಲತಿ ರಮೇಶ್ ಕೆಮ್ಮಣ್ಣು.

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...