Tuesday, March 22, 2022

ನಮ್ಮೂರ ಹೋಳಿ ಹಬ್ಬದ ಆಚರಣೆ ಹಾಗೂ ಬಾಲ್ಯದ ನೆನಪುಗಳು

ಬತ್ತದ ತೊರೆ ಸ್ನೇಹ ಬಳಗ



ವಿಷಯ :ಹೋಳಿ ಹಬ್ಬದ ಆಚರಣೆ ಮತ್ತು ಬಾಲ್ಯದ ನೆನಪು      


   ಹಬ್ಬಗಳ ಹಬ್ಬ ಹೋಳಿ ಹಬ್ಬ ಎಂದರೇ ತಪ್ಪಾಗಲಾರದು. ಯಾವುದೇ ಬೇಧವಿಲ್ಲದೇ ತುಂಬಾ ಆತ್ಮೀಯದಿಂದ ಆಚರಿಸುವ ಹಬ್ಬ ಹೋಳಿ ಹಬ್ಬ.


  ನಾವು ಚಿಕ್ಕವರಿದ್ದಾಗ ಆಚರಿಸಿದ ಹೋಳಿ ಹಬ್ಬವೇ ಬೇರೆ. ಈಗ ಆಚರಿಸುವ ಹಬ್ಬವೇ ಬೇರೆ. ಈಗೀಗ ಬಣ್ಣ ಎರಚುವುದು ಮಾತ್ರ ಹೋಳಿ ಹಬ್ಬ ಎಂದು ಕೆಲವರು ತಿಳಿದುಬಿಟ್ಟಿದ್ದಾರೆ. ಅದರ ಹಿಂದಿನ ಕಾಮನ ಪ್ರತಿಷ್ಠಾಪನೆ ಮತ್ತು ಅದರ ತಯಾರಿ ಬಗ್ಗೆ ಯಾರಿಗೂ ತಿಳಿದಿಲ್ಲ ಅಂತ ಅನಿಸುತ್ತೆ. ಈಗೀಗಲಂತೂ ಧ್ವನಿವರ್ಧಕಗಳ ಜೊತೆಗೆ ಕೆಲವು ಹೋಳಿ ಹಾಡುಗಳು ಹಾಕಿಕೊಂಡು ನೀರನ್ನು ಎರಚುವುದೇ ಹೋಳಿ ಹಬ್ಬ ಎಂದು ತಿಳಿದುಕೊಂಡುಬಿಟ್ಟಿದ್ದಾರೆ.ಜೊತೆಗೆ ಒಂದೇ ದಿನದಲ್ಲಿ ಹಬ್ಬ ಮುಗಿಸಿಬಿಡುತ್ತಾರೆ ಕೂಡ.


  ನಾವು ಚಿಕ್ಕವರಿದ್ದಾಗ ಈ ಹೋಳಿ ಹಬ್ಬ ಬರುವ ಸುಮಾರು 15 ದಿನಗಳ ಮುಂಚಿತವಾಗಿ ಸಿದ್ಧತೆಗಳು ಶುರುವಾಗುತ್ತಿದ್ದವು.ಮೊದಲನೇಯದಾಗಿ ವರ್ಷದಿಂದ ಅಟ್ಟದ ಮೇಲೆ ಇದ್ದಂತ ಹಲಿಗೆಯನ್ನು ತೆಗೆದು ಜೊತೆಗೆ ಅದು ಎಮ್ಮೆ ಇಲ್ಲ ಎತ್ತಿನ ಚರ್ಮದಿಂದ ತಯಾರು ಮಾಡಿದ ಹಲಗೆ ಆದ್ದರಿಂದ ಅದನ್ನು ಮೊದಲು ಬಿಸಿಲಿಗೆ ಕಾಯಿಸ ಬೇಕಿತ್ತು. ಆಗ ಮಾತ್ರ ಅದರ ಇಂಪಾದ ಸ್ವರ ಬರುತ್ತಿತ್ತು.ಶಾಲೆಯಿಂದ ಬಂದ ತಕ್ಷಣ ಓಣಿಯ ಎಲ್ಲ ಹುಡುಗರು ತಮ್ಮ ತಮ್ಮ ಹಲಗೆ ತೆಗೆದುಕೊಂಡು ಬಂದು ಒಂದು ಕಡೆ ಸೇರಿ ಹಲಗೆ ಬಾರಿಸುತ್ತ ಕೂರುವುದು.ಜೊತೆಗೆ ಓಣಿಯ ತುಂಬಾ ಓಡಾಡುತ್ತ. ಮನೆ ಮನೆಗೆ ಹೋಗಿ ಹಳೆಯ ಬಟ್ಟೆಗಳನ್ನು ಮತ್ತು ಕಾಮಣ್ಣನ ದೇಣಿಗೆ ಅಂದರೇ ದುಡ್ಡನ್ನು ಕೇಳಿ ಪಡೆದುಕೊಳ್ಳುವುದು. ಜೊತೆಗೆ ಒಂದಿಷ್ಟು ಹುಡುಗರನ್ನು ಆ ಓಣಿಯ ಮನೆಯವರ ಹಿತ್ತಲಿಗೆ ಕಳಿಸಿ ಕುಳ್ಳು (ಬೆರಣಿ )ಮತ್ತು ಕಟ್ಟಿಗೆ ಎಲ್ಲಿ ಇಟ್ಟಿದ್ದಾರೆ ಎಂದು ನೋಡಲು ಕಳಿಸಿ.ಸ್ವಲ್ಪ ರಾತ್ರಿ ಆದಮೇಲೆ ಕುಳ್ಳು ಇಟ್ಟ ಮನೆಯ ಹಿತ್ತಲಿಗೆ ಹೋಗಿ, ಅಲ್ಲಿನ ಕುಳ್ಳು ಮತ್ತು ಕಟ್ಟಿಗೆಗಳನ್ನು ಕದ್ದುಕೊಂಡು ಬಂದು,ಒಂದು ಕಡೆ ಸಂಗ್ರಹಣೆ ಮಾಡುತ್ತಾ ಹೋಗುವುದು.ಹೀಗೆ ಕೆಲವಂದು ಕೇಳಿ ಪಡೆದರೆ ಕೆಲವುಗಳನ್ನು ಕಳುವು ಮಾಡುವುದೇ ಶ್ರೇಷ್ಠ ಅದೇ ಪದ್ಧತಿ ಎಂದು ನಂಬಿದವರು ನಾವಾಗಿದ್ದೆವು.


  ಹೀಗೆ ಎಲ್ಲವು ಒಂದು ಹಂತಕ್ಕೆ ಬಂದಾಗ,ಇನ್ನೆನ್ನೂ ನಾಳೆ ಕಾಮ ಪ್ರತಿಷ್ಠಾಪನೆ ಇದೆ ಎನ್ನುವಾಗ ಅದರ ಹಿಂದಿನ ದಿನ ಓಣಿಯ ಎಲ್ಲ ಹಿರಿಯರು ಸೇರಿ ಕಾಮಣ್ಣನ ಪದ.


ಕಾಮಾ ನಿಮ್ಮವ್ವ ಏನಂತ ಕರದಾಳ್

ಬಾರೋ ನನ್ನ ಮಗನ ಪರದೇಸಿ

ಬಾರೋ ನನ್ನ ಮಗನ ಪರದೇಸಿ.. ಏ ಕಾಮಾ..

ಕಿಚ್ಚಕ್ ತಲಿಯ ಕೊಡಬಾರೋ..


ಹಾಡುತ್ತ ಹುಡುಗರು ಕದ್ದು ತಂದ ಕಟ್ಟಿಗೆಗಳಿಂದ ಕಾಮನನ್ನು ತಯಾರು ಮಾಡುತ್ತಿದ್ದರು.ಮರುದಿನ ಓಣಿಯ ಎಲ್ಲ ಹುಡುಗರು ಕಾಮಣ್ಣನ ದೇಣಿಗೆಯಲ್ಲಿ ಕಾಮನ ಹಣೆಗೆ ಬಾಷಿಂಗ್, ಕೊರಳಿಗೆ ಸಕ್ಕರೆ ಸರ್ ಕಾಯಿ ಹಣ್ಣು ಹೀಗೆ ಎಲ್ಲ ತಂದು ಪೂಜೆ ಮಾಡಿ, ಜೊತೆಗೆ ಕಾಮನಿಗೆ ಆ ದಿನ ಬರುವ ಓಣಿಯ ಎಲ್ಲ ಮನೆಯ ನೈವೇದ್ಯ ಸಂಗ್ರಹಿಸಿ.ಸಂಜೆವೇಳೆ ಆ ಎಲ್ಲ ಪ್ರಸಾದವನ್ನು ಊಟದ ರೂಪದಲ್ಲಿ ಹಂಚಿಕೊಂಡು ತಿನ್ನುತ್ತಿದ್ದೆವು.


  ಮರುದಿನ ಬೆಳಿಗ್ಗೆ ಕಾಮದಹನ ಮತ್ತು ಹೋಳಿ. ದೇಣಿಗೆ ಬಂದ ಹಣದಲ್ಲಿ  ಬಣ್ಣವನ್ನು ತೆಗೆದುಕೊಂಡು ಎಲ್ಲರಿಗೂ ಹಂಚಿ ಬಣ್ಣ ಆಡುತ್ತಿದ್ದೆವು.ಒಬ್ಬನನ್ನು ಏಣಿಯ ಮೇಲೆ ಮಲಗಿಸಿ 'ಕಾಮ ಸತ್ತಿದ್ದಾನೆ'ಎಂದು ಓಣಿಯ ತುಂಬಾ ಅದನ್ನು ಮೆರವಣಿಗೆ ಮಾಡಿ ಎಲ್ಲರಿಗೂ ಬಣ್ಣ ಎರಚುತ್ತ ಸುತ್ತು ಹಾಕುತ್ತಿದ್ದೆವು. ಮದ್ಯಾಹ್ನವರೆಗೂ ಹೋಳಿ ಆಡಿ ಕಾಮನನ್ನು ಸುಡುತ್ತಿದ್ದೆವು.


         ✍️ಪೇಟೆಕವಿ

ಜ್ಯೋತಿಭಾ. ಎನ್. ಚಿಲ್ಲಣ್ಣವರ

             ಹುಬ್ಬಳ್ಳಿ

[16/03, 7:03 PM] Nagarathna HM Madam2: *ಬತ್ತದ ತೊರೆಸ್ನೇಹ ಬಳಗ*

 ಸ್ಪರ್ಧೆಗಾಗಿ...

ಹೋಳಿ ಹಬ್ಬದ ಆಚರಣೆ ಮತ್ತು ಬಾಲ್ಯದ ನೆನಪುಗಳು...


ಹೋಳಿ ಹಬ್ಬ ಎಂದರೆ ಗೋಲಿಯಾಟ ಆಡುವ ಹುಡುಗರಿಂದ ಹಿಡಿದು 90 ...100 ವರ್ಷಗಳ ವಯೋಮಿತಿಯ ವರೆಗೂ ಅತ್ಯಂತ ಸಂಭ್ರಮ ಸಡಗರದಿಂದ ಜಾತಿಭೇದ ಬಣ್ಣ ಬೇದ ಲಿಂಗ ಬೇಧಗಳಿಲ್ಲದೆ ಯಾರು ಸಮನಾಗಿ ಪಾಲ್ಗೊಳ್ಳುವಂತಹ ಹಬ್ಬವೇ ಹೋಳಿ ಹಬ್ಬ..

ಈ ಹೋಳಿ ಹಬ್ಬ ಬಂತೆಂದರೆ ನಾವು ಎರಡು ಮೂರು ದಿನದಿಂದ ಬಣ್ಣಗಳನ್ನು ತಯಾರಿ ಮಾಡುತ್ತಿದ್ದೆವು ಒಂದರಲ್ಲಿ ಅರಿಶಿನ ಮತ್ತೊಂದು ಡಬ್ಬಿಯಲ್ಲಿ ಕುಂಕುಮ ಮತ್ತು ಜೊತೆಗೆ ಬಿಳಿ ಬಟ್ಟೆಗೆ ಹಾಕುವ ನೀಲಿಯನ್ನು ಕೂಡ ಮತ್ತೊಂದು ಡಬ್ಬದಲ್ಲಿ ಬೆರೆಸಿ ಇಟ್ಟುಕೊಳ್ಳುತ್ತಿದ್ದೆವು ಮತ್ತೆ ಮನೆ ಬಾಗಿಲಿಗೆ ಹೋಗಿ ಸೌದೆಗಳನ್ನು ಹಾಗೂ ಹಳೆಯ ಕುರ್ಚಿಗಳು ಚಾಪೆ ಇತರೆ ಅನೇಕ ಹಳೆಯ ಮನೆಯ ಬಳಕೆಯ ವಸ್ತುಗಳನ್ನು ಆರಿಸಿ ಇಡಲಿಕ್ಕೆ ಹೇಳುತ್ತಿದ್ದೆವು. ಹಬ್ಬದ ದಿನ ಎಣ್ಣೆ ಹಚ್ಚಿ ಸ್ನಾನ ಮಾಡಿ ಹಳೆಯ  ಬಟ್ಟೆಗಳನ್ನು  ಧರಿಸಿ ಹೊರಬೀಳುತಿದ್ದವು. ಒಂದು ಕೇರಿಯಿಂದ  ಶಬ್ದವೊಂದು ಕೇಳಿಬರುತ್ತಿತ್ತು ಅಯ್ಯಯ್ಯೋ ದೇವರೇ ಏನಪ್ಪಾ ಎಂಥ ಸಾವು ಬಂತು ನಿನಗೆ ನಿನ್ನೆ ಇಷ್ಟೊತ್ತಿನಲ್ಲಿ ನನ್ನ ಜೊತೆ ಕೂತು ಹೋಳಿಗೆ ಊಟ ಮಾಡ್ತಿದ್ಯಲ್ಲೊ ಇವತ್ತು ನಿನ್ನ ಪ್ರಾಣ ದೇವರು ಕಿತ್ತುಕೊಂಡುಬಿಟ್ಟ ಅಯ್ಯಯ್ಯೋ ಎಂದು ಲಬಲಬ ಎಂದು ಬಾಯಿ ಬಡಿದುಕೊಳ್ಳುತ್ತಾ ಅಳುವ ಶಬ್ದ ಚೀರಾಡುವ ಶಬ್ದ ಶಬ್ದದ ಹಿಂದೆ ಹತ್ತಾರು ಜನ ಅದೇ ರಾಗವನ್ನು ಎಳೆದು ಬಾಯಿ ಬಡಿದುಕೊಂಡು ಅಳುತ್ತಿದ್ದರು ಅದನ್ನು ನೋಡಿ ಗಾಬರಿಗೊಂಡು ನಾವು ಕೂಡ ಅವರ ಜೊತೆ ಸೇರಿ ಅಳುತ್ತಿದ್ದೇವು..

ಸತ್ತಂತಹ ವ್ಯಕ್ತಿಗೆ ಹಣೆಯ ಮೇಲೆ 3 ಪಟ್ಟಿ ವಿಭೂತಿ ಕುಂಕುಮ ಇಟ್ಟು ಹಣೆಯ ಮೇಲೆ ಒಂದು ಕಾಸು ಇಟ್ಟು ಬಾಯಿಗೆ ಒಂದು ಟೊಮೆಟೊ ಇಟ್ಟು ನಾಲ್ಕು ಜನ ಹೆಣದ ರೀತಿಯಲ್ಲಿ ಆತನನ್ನು ಒಯ್ಯುವುದು ಒಟ್ಟಾರೆ ಸತ್ತ ಮನುಷ್ಯನನ್ನು ಸ್ಮಶಾನದತ್ತ ಕರೆದುಕೊಂಡು ಹೋಗುವ ರೀತಿ ಇರುತ್ತಿತ್ತು. ಇದನ್ನೆಲ್ಲಾ ನೋಡುತ್ತಾ   ನಾವು ಅಳುತ್ತಿದ್ದೇವು.. ಹೀಗೆ ನೋಡನೋಡುತ್ತಿದ್ದಂತೆ ಎಲ್ಲರ ಮೈಮೇಲೆ ಹಿಂದೆಯಿಂದ ಬಂದು ಬಣ್ಣಗಳನ್ನು ಕೆನ್ನೆಗಳಿಗೆ ನಂತರ ಇಡೀ ಮೈಮೇಲೆ ನಾವು ಕಲಿಸಿಟ್ಟು ಕೊಂಡಿದ್ದ ಎಲ್ಲಾ ತರಹದ ಬಣ್ಣಗಳನ್ನು ಎರಚಿ ಸಂತೋಷ ಪಡುತ್ತಿದ್ದೆವು ಆ ಕಾಲ ಮತ್ತೆ ಬರಲು ಸಾಧ್ಯವೇ ಇಲ್ಲ ಎಂಬಂತೆ ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳುವ ಸಂದರ್ಭ ಸನ್ನಿವೇಶಗಳು ಒದಗಿ ಬಿಟ್ಟಿದೆ. ಈಗಿನ ಬಣ್ಣಗಳು ಕೆಟ್ಟ ಕೆಟ್ಟ ಕಲಬೆರಿಕೆ ಬಣ್ಣಗಳು ಅವುಗಳನ್ನು ಮೈಮೇಲೆ ಎರಚಿ ಕೊಂಡರೆ ಚರ್ಮದ ತೊಂದರೆಗಳು ಉಂಟಾಗುವಂತಹ ಪರಿಸ್ಥಿತಿಗಳು ಎದುರಾದವು ಹಬ್ಬಗಳು ಎಂದರೆ ನಮಗೆ ತುಂಬಾ ಇಷ್ಟವಾಗುತ್ತಿತ್ತು. ಹಳೆಯ ನೆನಪುಗಳು ಈಗ ಕಾಡುತ್ತವೆ.. ಹಳೆಯ ಕಟ್ಟಿಗೆಗಳನ್ನು ಊರ ಮುಂದೆ ರಾಶಿ ಹಾಕಿ ಬೆಂಕಿ ಹಚ್ಚಿ ಸುಡುತ್ತಿದ್ದರು ಅದಕ್ಕೆ ಎಲ್ಲರ ಮನೆಯ ಬೇಡದ ವಸ್ತುಗಳನ್ನು ತಂದು ಸುಡಲು ಹಾಕುತ್ತಿದ್ದರು .

ಹೀಗೆ ನಡೆಯುತ್ತಿದ್ದಂತಹ ಹೋಳಿ ಹಬ್ಬ ಕ್ರಮೇಣವಾಗಿ ಕೆಲವರ ಪಾಲಾಗಿದೆ ಕೆಲವು ಭಾಗಗಳಲ್ಲಿ ಮಾತ್ರ ಆಚರಣೆಯಾಗುತ್ತಿದೆ ಎಂಬುದೇ ಬೇಸರದ ಸಂಗತಿ... ಏನೇ ಆದರೂ ಹೋಳಿ ಹಬ್ಬ ಬರಲಿ ನಾವೆಲ್ಲರೂ ಸಂಭ್ರಮಿಸೋಣ ಎಂದು ಹೇಳುತ್ತಾ ಧನ್ಯವಾದಗಳೊಂದಿಗೆ ಬರುವ ಹಬ್ಬಕ್ಕೆ ಕಾಯೋಣ...


*ನಾಗರತ್ನ*✍🏻 *ಚಂದಾಪುರ*

[16/03, 8:13 PM] +91 90191 89368: *ಬತ್ತದ ತೊರೆಸ್ನೇಹ ಬಳಗ*

 ಸ್ಪರ್ಧೆಗಾಗಿ...

ಹೋಳಿ ಹಬ್ಬದ ಆಚರಣೆ ಮತ್ತು ಬಾಲ್ಯದ ನೆನಪುಗಳು...


ಹೋಳಿ ಹಬ್ಬ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿ ಹಬ್ಬ ಆಚರಿಸುತ್ತೇವೆ. ಈ ದಿನದಂದು  ಅಕ್ಕಿಹಿಟ್ಟು  ಅರಿಸಿನ  ಬೆರೆಸಿ ಪಿಚಕಾರಿ  ತಯಾರಿಸಿ ಬಣ್ಣದಾಟ  ಆಡುತ್ತಿದ್ದೆವು.  ಬಣ್ಣದಾಟ  ಮುಗಿದ ನಂತರ ಸ್ನಾನ ಮಾಡಿ ದೇವರಲ್ಲಿ  ಪ್ರಾರ್ಥಿಸಿ  ಮನೆಗಳಲ್ಲಿ  ವಿಶೇಷವಾದ ಅಡುಗೆ  ಮಾಡುತ್ತಿದ್ದೇವು. ಮತ್ತೆ  ರಾತ್ರಿ  ವೇಳೆ ಊರಲ್ಲಿ  ಬೇಡದ  ವಸ್ತುಗಳನ್ನು ತಂದು ಒಂದು ಕಡೆ ಗುಡ್ಡೆ ಮಾಡಿ ಒಂದು  ಹುಡುಗನಿಗೆ ಶಿಖಂಡಿ ವೇಷ ಹಾಕಿ  ಅವನಿಂದ  ಊರಲ್ಲಿ ಐದು  ಮನೆಯಿಂದ ಭಿಕ್ಷೆ ಬೇಡಿಸಿ  ಬಂದ  ನಂತರ  ಅವನಿಂದ  ಈ  ಬೇಡದ  ವಸ್ತುಗಳ ಗುಡ್ಡೆಗೆ  ಬೆಂಕಿ  ಇಡುತ್ತಿದ್ದೇವು. ಈ ಹಬ್ಬ  ನಮ್ಮ  ಜೀವನದಲ್ಲಿ  ಸಂತೋಷವನ್ನು ಹಾಗೂ  ಹೊಸ ಬಣ್ಣವನ್ನು ನೀಡುವ  ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ  ಹೊಳೆಯುತ್ತಿರುವ ದೀಪಗಳು,ಬಣ್ಣ ಬಣ್ಣದ ನೀರನ್ನು  ತುಂಬಿಕೊಂಡ ಪಿಚಕಾರಿ, ವಿಶೇಷ  ಕಲಾಕೃತಿಯ ಆಕಾಶ ಬುಟ್ಟಿಗಳು,ಎಲ್ಲವೂ  ತುಂಬ ಅದ್ಬುತವಾಗಿರುತ್ತದೆ. ಈ  ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರತು  ಬಾಳುವ ಸಂದೇಶವನ್ನು ನೀಡುವುದು.ಈ ಹಬ್ಬದ  ಉದ್ದೇಶವೆನೆಂದರೆ ಕೆಟ್ಟದ್ದನ್ನು ಸುಟ್ಟು  ಬಿಡುವುದು.ಕಾಮ, ಕ್ರೋಧ,ಮದ,ಮತ್ಸರಗಳನ್ನೆಲ್ಲಾ ಅಗ್ನಿಕುಂಡದಲ್ಲಿ  ಸುಟ್ಟು  ಸದಾಚಾರವನ್ನು  ರೂಢಿಸಿಕೊಳ್ಳುವುದು. ಇಂಥದ್ದೊಂದು ಅಮೂಲ್ಯ  ಸಂದೇಶ ಸಾರುವ  ಮತ್ತು ಈ  ಮೂಲಕ  ಕೆಟ್ಟದ್ದಕ್ಕೆ ಯಾವತ್ತೂ  ಸೋಲು  ಕಾದಿದೆ ಎಂದು  ಸಾರುವ  ಹೋಳಿ ಹಬ್ಬ.



ಶ್ರೀಮತಿ ರೂಪ ಮಂಜುನಾಥ 

ಮಳವಳ್ಳಿ

[16/03, 8:17 PM] Nagveni Hiremath: ಬತ್ತದ ತೊರೆ ಸ್ನೇಹ ಬಳಗ ಇಂದಿನ ಲೇಖನ ಸ್ಪರ್ಧೆ


ಹೇಳಿ ಹಬ್ಬದ ಆಚರಣೆ ಹಾಗೂ ಬಾಲ್ಯದ ನೆನಪುಗಳು


ಹೋಳಿಹಬ್ಬ ಎಂದ ತಕ್ಷಣ ನೆನಪಿಗೆ ಬರುವುದು ಬಣ್ಣ ಬಣ್ಣದ ಓಕುಳಿ. 


ಹೋಳಿ ಹಬ್ಬ ಆಚರಣೆಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆ ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆ. ಇದನ್ನು ಹೋಳಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ಹಬ್ಬವು ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲ ಏಕತೆಯನ್ನು ಬಿಂಬಿಸಿ ಹೊಸದನ್ನು ಸ್ವಾಗತಿಸುವ ಹಬ್ಬ. ಬಣ್ಣಗಳನ್ನು ಎರೆಚಾಡಿ ಸಂಭ್ರಮಿಸುವುದಕ್ಕಷ್ಟೇ ಈ ಹಬ್ಬವು ಸೀಮಿತವಾಗಿಲ್ಲ. ಬಡವ-ಬಲ್ಲಿದ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತಾತ್ವಿಕ ನಿಲುವನ್ನು ಅಕ್ಷರಶಃ ಆಚರಣೆಗೆ ತರುವುದೇ ಈ ಹೋಳಿ ಹುಣ್ಣಿಮೆ.


ಕಾಮನ ಹಬ್ಬ ಅಥವಾ ಹೋಳಿ ಹಬ್ಬಕ್ಕೆ ಸಾಕಷ್ಟು ಪುರಾಣದ ಹಿನ್ನೆಲೆ ಇದೆ. ಅದಕ್ಕೆ ಪೂರಕವಾದ ಆಚರಣೆಗಳಿವೆ.ಪುರಾಣದ ಪ್ರಕಾರ ತಾರಕಾಸುರನಿಂದ ರಾಕ್ಷಸನು ಘೋರ ತಪಸ್ಸನ್ನು ಮಾಡಿ ಬ್ರಹ್ಮ ದೇವನಲ್ಲಿ ತನಗೆ ಸಾವೇ ಬರಬಾರದು ಎಂದು ವರವನ್ನು ಕೇಳುವನು. ಬ್ರಹ್ಮನು ಆ ವರವನ್ನು ನಿರಾಕರಿಸಿದಾಗ ಶಿವನ ಏಳು ದಿನಗಳ ಮಗುವಿನಿಂದ ತನಗೆ ಸಾವು ಬರಲಿ ಎಂಬ ವರವನ್ನು ಪಡೆದನು.


ನಂತರ ತಾರಕಾಸುರದಿಂದ ದೇವತೆಗಳಿಗೆ ಉಪಟಳ ಹೆಚ್ಚಾಯಿತು. ಅದು ಮಿತಿ ಮೀರಿದಾಗ ದೇವತೆಗಳು ಶಿವನಲ್ಲಿ ಮೊರೆ ಹೋಗುವರು. ಆದರೆ ಶಿವನು ಸಮಾಧಿ ಸ್ಥಿತಿಯಲ್ಲಿದ್ದನು. ಆಗ ಶಿವನ ಧ್ಯಾನವನ್ನು ಭಂಗಪಡಿಸಿ ಪಾರ್ವತಿಯನ್ನು ಮೋಹಿತನನ್ನಾಗಿ ಮಾಡಲು ರತಿ ಮನ್ಮಥರನ್ನು ದೇವತೆಗಳು ಒಪ್ಪಿಸುವರು.


ಅಂತೆಯೇ ರತಿ ಮನ್ಮಥರು ಶಿವನ ಮುಂದೆ ನೃತ್ಯವನ್ನು ಮಾಡಿ ಶಿವನ ಧ್ಯಾನಕ್ಕೆ ಭಂಗವನ್ನು ಉಂಟು ಮಾಡುವರು. ಇದರಿಂದ ಕುಪಿತನಾದ ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟು ಭಸ್ಮ ಮಾಡಿದನು. ಆಗ ರತಿಯು ದುಃಖದಿಂದ ಶಿವನಲ್ಲಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥನು ಕಾಣುವಂತೆ ವರವನ್ನು ಕೊಟ್ಟನು. ಅಂದಿನಿಂದ ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದನು.


ಪುರಾಣದ ಇನ್ನೊಂದು ಕಥೆಯ ಪ್ರಕಾರ ಹೋಲಿಕಾ ದಹನ. ಹಿರಣ್ಯಕಶಿಪು ಎಂಬ ಅತ್ಯಂತ ಬಲಶಾಲಿಯಾದ ರಾಕ್ಷಸನು ತನ್ನ ರಾಜ್ಯದಲ್ಲಿ ದೇವರ ಪೂಜೆಯನ್ನು ನಿಷೇಧಿಸಿ ಎಲ್ಲಾ ಪ್ರಜೆಗಳೂ ತನನ್ನೇ ಆರಾಧಿಸಬೇಕೆಂದು ಕಟ್ಟಪ್ಪಣೆ ಮಾಡುತ್ತಾನೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವನ ಮಗ ಪ್ರಹ್ಲಾದನು ಮಹಾವಿಷ್ಣುವಿನ ಪರಮ ಭಕ್ತ. ಪುಟ್ಟ ಬಾಲಕ ಪ್ರಹ್ಲಾದನ ವಿಷ್ಣುವಿನ ಆರಾಧನೆಯನ್ನು ನಿಲ್ಲಿಸಲು ಸಾಧ್ಯವಾಗದಿದ್ದಾಗ ಮಗನನ್ನು ಕೊಲ್ಲಲು ಹಲವಾರು ರೀತಿ ಪ್ರಯತ್ನಿಸಿದನು ಆದರೆ ಹಿರಣ್ಯಕಶಿಪು ಅಲ್ಲಿಯೂ ವಿಫಲನಾಗುವನು. ನಂತರ ಹಿರಣ್ಯಕಶಿಪು ತನ್ನ ತಂಗಿ ಹೋಲಿಕಾಳ ನೆರವು ಪಡೆಸಿಕೊಳ್ಳಲ್ಲು ನಿರ್ಧರಿಸಿದನು.ಏಕೆಂದರೆ ಅವಳು ಬೆಂಕಿಯು ಅವಳನ್ನು  ಸುಡದೇ ಇರುವ ವರವನ್ನು ಪಡೆದಿರುತ್ತಾಳೆ.

ಹಾಗಾಗಿ ಹಿರಣ್ಯಕಷಪ್ಯು ಪ್ರಹ್ಲಾದನನ್ನು ಕೊಲ್ಲಲು ಹೊಲಿಕಾಳ ತೊಡೆಯ ಮೇಲೆ ಕೂರಿಸಿದಾಗ ಬೆಂಕಿಯು ಅವಳನ್ನೇ ಸುಡುತ್ತದೆ. ಪಾಪ ಕೃತ್ಯ ಎಸಗಿದ ಅವಳೇ ಸುಟ್ಟು ಭಸ್ಮವಾಗುತ್ತಾಳೆ. ಪ್ರಹ್ಲಾದನನ್ನು ಬೆಂಕಿಯು ಸುಡುವುದಿಲ್ಲ. ಹೀಗೆ ಹೋಲಿಕಾ ದುಷ್ಟ ಶಿಕ್ಷೆ ಶಿಕ್ಷ ರಕ್ಷಣೆಯ ಸಾಂಕೇತಿಕವಾಗಿ ಮುಂಬರುವ ಸುದಿನಗಳ ಸ್ವಾಗತಕ್ಕೆ ಬಣ್ಣಗಳ ಓಕುಳಿಯಾಡುವ ಪದ್ಧತಿ ರೂಢಿಗೆ ಬಂದಿದೆ.


ಇನ್ನೊಂದು ರಂಗಿನ ಹಬ್ಬಕ್ಕೆ ಕಥೆಯೂ ಸೇರಿದೆ. ಶ್ರೀ ಕೃಷ್ಣ ಮಗುವಾಗಿದ್ದಾಗ ಅವನ ಸೋದರ ಮಾವ ಕಂಸನು ಪೂತನಿ ಎಂಬ ರಾಕ್ಷಸಿಯನ್ನು ಶ್ರೀ ಕೃಷ್ಣನನ್ನು ಕೊಲ್ಲಲು ಕಳಿಸುವನು. ಬಾಲಕೃಷ್ಣನು ಪೂತನಿಯ ಎದೆ ಹಾಲಿನೊಂದಿಗೆ ರಕ್ತವನ್ನೂ ಹೀರಿ ಅವಳ ಸಂಹಾರ ಮಾಡುವನು. ಅದರಿಂದ ಶ್ರೀ ಕೃಷ್ಣನ ಮೈ ನೀಲಿ ಬಣ್ಣವಾಯಿತು.ಕೃಷ್ಣನ ನೀಲಿ ಬಣ್ಣಕ್ಕೆ ಮೆಚ್ಚುಗೆ ಪಡುವ 

ರಾಧಾ ಕೃಷ್ಣನ ಪ್ರೀತಿಯ ಪ್ರತೀಕವಾಗಿ ಹೋಲಿ ಆಚರಣೆ ಮಾಡಲಾಗುತ್ತದೆ.


ಹೀಗೆ ಹಲವಾರು ಕಥೆಗಳು ಹೊಳಿ ಹಬ್ಬಕ್ಕೆ ಸಂಬಂಧಿಸಿವೆ.


ನಮ್ಮ ಬಾಲ್ಯದಲ್ಲಿ ನಾವು  ದೊಡ್ಡವರು ಸಣ್ಣವರು ಸೇರಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವು.  ನಾವೆಲ್ಲ ಗೆಳತಿಯರು ಹೋಳಿ ಹಬ್ಬ ಬರುತ್ತಿದೆ ಎಂದರೆ ಎರಡು ದಿನ ಮುಂಚೆಯೇ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವು.ಬಣ್ಣಗಳನ್ನು ತಂದು ಇಟ್ಟುಕೊಂಡು ಎರಡು ದಿನ ಹೋಳಿ ಹಬ್ಬವನ್ನು ಆಚರಿಸುತ್ತಿದ್ದೇವು.


ದೈಯಿ ಹಂಡೆ ಮೇಲಕ್ಕೆ ಕಟ್ಟಿ ಅದನ್ನು ಒಡೆಯಲು ಹುಡುಗರು ತಾ ಮುಂದು ನೀ ಮುಂದು ಅಂತ ಅತಿ ಹುರುಪಿನಿಂದ ಅವರೆಲ್ಲ ಮಾಡುವ ಆ ಆಟ ನೋಡಲು ಅತಿ ಖುಷಿ.


 ಬಾಲ್ಯದ ಸವಿನೆನಪುಗಳು ನೀನು ನೆನಪಾದಾಗ ಮನಸ್ಸಿಗೆ ಅದೇನೋ ಆನಂದ ಸಂತೋಷ. ಹೋಳಿ ಹುಣ್ಣಿಮೆ ಬಂದಾಗಲೆಲ್ಲಾ ಆ ಸವಿನೆನಪುಗಳು ಬರುತ್ತವೆ .


ಈಗ ಆ ಮೊದಲು ಸಡಗರ ಸಂಭ್ರಮ ಇಂದಿನ ಮಕ್ಕಳಿಗೆ ಇಲ್ಲ. ಹೋಳಿ ಹಬ್ಬ ಎಂದರೆ ಹಣವನ್ನು ಸಂಗ್ರಹಿಸುವುದು ಹಾಡು ಕುಣಿತಕ್ಕೆ ಮಾತ್ರ.ಎನಿಸಿಬಿಟ್ಟಿದೆ.ಮೊದಲಿನ ಆ ಹೊಳಿ ಹಬ್ಬರ ಸಡಗರ ಇಲ್ಲ.ಬರಿ ಬಣ್ಣ ಎರೆಚುವುದು ಮಾತ್ರ ಹೊಳಿ ಹಬ್ಬ ಅನಿಸಿದೆ.ಆದರೆ ಹಿಂದೆ ಅದು ಎಲ್ಲಾ ಜನರನ್ನು ಒಂದು ಗುಡಿಸುವ ಪರಸ್ಪರ ಸಂತೋಷ ಹಂಚಿಕೊಳ್ಳುವ ಸಾಧನವೇ ಆಗಿತ್ತು ಅಂದರೆ ತಪ್ಪೇನಿಲ್ಲ.


ಒಟ್ಟಿನಲ್ಲಿ ಹೊಳಿ ಹಬ್ಬ ಎಂದರೆ ನಮ್ಮ ಬದುಕು ಕೂಡ ಬಣ್ಣ ಬಣ್ಣವಾಗುತ್ತದೆ.


ನಾಗವೇಣಿ ಹಿರೇಮಠ

ಕಲಬುರ್ಗಿ.

[16/03, 8:24 PM] Savitha Sathish Madam: 🌳🌹🌹🌹✍️✍🌹🌹🌹🌳✍️📝

*ಇಂದು ದಿನಾಂಕ ೧೬/೦೩/೨೦೨೨ ಬುಧವಾರ ಲೇಖನ ಸ್ಪರ್ಧೆಗಾಗಿ:


*ವಿಷಯ : ನಿಮ್ಮೂರಿನಲ್ಲಿ ಹೋಳಿ ಹಬ್ಬದ ಆಚರಣೆ ಹಾಗೂ ಬಾಲ್ಯದ ನೆನಪು* 


*ಪ್ರಕಾರ: ಲೇಖನ ಸ್ಪರ್ಧೆ* 


ಶೀರ್ಷಿಕೆ: ಹೊಸತನವನ್ನು ಸ್ವಾಗತಿಸುವ ಹಬ್ಬ.

*****************************

ಹೋಳಿ ಹಬ್ಬವು ಫಾಲ್ಗುಣ ಮಾಸದ ಶುಕ್ಲಪಕ್ಷದ ಪೂರ್ಣಿಮೆಯಂದು ಆಚರಿಸುತ್ತಾರೆ. ಈ ಹಬ್ಬಕ್ಕೆ ಉತ್ತರ ಭಾರತದಲ್ಲಿ ಬಹಳ ಮಹತ್ವವಿದೆ. ಆದರೆ ನಮ್ಮೂರಾದ ದಕ್ಷಿಣ ಕನ್ನಡದಲ್ಲಿ ಈ ಹಬ್ಬವನ್ನು ಅಷ್ಟೊಂದು ಆಚರಣೆ ಮಾಡಲ್ಲ. ಉತ್ತರ ಭಾಗದಿಂದ ವಲಸೆ ಬರುವವರು ಕೆಲವು ಮಂದಿ ಆಚರಣೆ ಮಾಡುತ್ತಾರೆ ಅಷ್ಟೇ. ನಮಗೆ ಅಷ್ಟೊಂದು ಹಬ್ಬದ  ಆಚರಣೆ ಗೊತ್ತಿಲ್ಲ ಆದರೆ ಓದಿ ತಿಳಿದುಕೊಂಡದ್ದು ಮನದಲ್ಲಿದೆ. ನಾವು ಬಾಲ್ಯದಲ್ಲಿ ಇರುವಾಗ ಈ ಹಬ್ಬದ ಬಗ್ಗೆ ತಿಳುವಳಿಕೆ ಇರಲಿಲ್ಲ. ದೊಡ್ಡವರಾಗುತ್ತ ಹೋದಾಗ ಸ್ವಲ್ಪಮಟ್ಟಿಗೆ ತಿಳಿಯಿತು. ನನ್ನ ಯಜಮಾನರು ನಮ್ಮ ಮನೆ ಪಕ್ಕ ಇರುವ ವಿನಾಯಕ ರೈಸ್ ಇಂಡಸ್ಟ್ರಿಯಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಾರೆ ಅಲ್ಲಿ ಕೆಲವರು ಉತ್ತರದಿಂದ ಕೆಲಸಕ್ಕಾಗಿ ಬಂದವರು ಈ ಹೋಳಿ ಹಬ್ಬದ ಆಚರಣೆಯನ್ನು ಗೌಜಿ ಗಮ್ಮತ್ತಲ್ಲಿ ಮಾಡುತ್ತಾರೆ. ಹಾಗೆ ಸ್ವಲ್ಪ ಆಚರಣೆಯ ಬಗ್ಗೆ ತಿಳಿಯಿತು. ಈ ಹಬ್ಬವನ್ನು ಹೋಳಿ ಹುಣ್ಣಿಮೆಯಂತಲೂ ಕರೆಯುತ್ತಾರೆ. ಈ ಹಬ್ಬವು ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲದೆ, ಏಕತೆಯನ್ನು ಪ್ರತಿಬಿಂಬಿಸಿ ಹೊಸತನವನ್ನು ಸ್ವಾಗತಿಸುವ ಹಬ್ಬವಾಗಿದೆ. ಬಣ್ಣಗಳನ್ನು ಎರಚಾಡಿ ಸಂಭ್ರಮಿಸುತ್ತಾ ಬಡವ-ಬಲ್ಲಿದ ಎಂಬ ಜಾತಿ ಧರ್ಮದ ಎಲ್ಲೆಯನ್ನು ಮೀರಿ ಆಚರಿಸುವ ಸೊಗಸಿನ ಹಬ್ಬ. ಎಲ್ಲರೂ ಒಟ್ಟು ಸೇರಿ ಬಾಳಿದರೆ ಬದುಕೇ ಸ್ವರ್ಗ ಎಂಬುದನ್ನು ಪ್ರತಿಬಿಂಬಿಸುವ ವಿಶೇಷ ಹಬ್ಬ ಹೋಳಿ ಹುಣ್ಣಿಮೆ.

              ಹಿಂದೂ ಧರ್ಮದ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಇದೆ. ಪುರಾಣದ ಪ್ರಕಾರ ತಾರಕಾಸುರನೆಂಬ ರಾಕ್ಷಸನು ಘೋರ ತಪಸ್ಸನ್ನು ಮಾಡಿ ನನಗೆ ಸಾವೇ ಬರಬಾರದು ಎಂದು ಬ್ರಹ್ಮನಲ್ಲಿ ವರವನ್ನು ಕೇಳುವನು. ಆಗ ಬ್ರಹ್ಮನು ಆ ವರವನ್ನು ನಿರಾಕರಿಸಿದಾಗ ಶಿವನ ಏಳು ದಿನಗಳ ಮಗುವಿನಿಂದ ತನಗೆ ಸಾವು ಬರಲಿ ಎಂಬ ವರವನ್ನು ಪಡೆದನು. ನಂತರ ತಾರಕಾಸುರನಿಂದ ದೇವತೆಗಳಿಗೆ ಉಪಟಳ ಹೆಚ್ಚಾಯಿತು ಅದು ಮಿತಿಮೀರಿದಾಗ ದೇವತೆಗಳು ಶಿವನಲ್ಲಿ ಮೊರೆ ಹೋಗುವರು. ಆದರೆ ಶಿವನು ಸಮಾಧಿ ಸ್ಥಿತಿಯಲ್ಲಿದ್ದನು. ಆಗ ಶಿವನ ಧ್ಯಾನವನ್ನು ಭಂಗಪಡಿಸಿ ಪಾರ್ವತಿಯನ್ನು ಮೋಹಿತನನ್ನಾಗಿ ಮಾಡಲು ರತಿ-ಮನ್ಮಥರನ್ನು ದೇವತೆಗಳು ಒಪ್ಪಿಸುವರು. ಅಂತೆಯೇ ರತಿ ಮನ್ಮಥರು ಶಿವನ ಮುಂದೆ ನೃತ್ಯವನ್ನು ಮಾಡಿ ಶಿವನ ಧ್ಯಾನಕ್ಕೆ ಭಂಗವನ್ನುಂಟು ಮಾಡುವರು. ಇದರಿಂದ ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟು ಭಸ್ಮ ಮಾಡಿದನು. ಆಗ ರತಿಯು ದುಃಖದಿಂದ ಶಿವನಲ್ಲಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥನು ಕಾಣುವಂತೆ ವರವನ್ನು ಕೊಟ್ಟನಂತೆ. ಅಂದಿನಿಂದ ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ದಿನದ ಆಚರಣೆಯೇ ಹೋಳಿ ಹುಣ್ಣಿಮೆ.

                ಈ ಹಬ್ಬದಲ್ಲಿ ಬಣ್ಣ-ಬಣ್ಣಗಳ ಎರಚುತ್ತಾ ಎಲ್ಲರೂ ಒಟ್ಟು ಸೇರಿ ದೀಪೋತ್ಸವ ಮಾಡಿ ಆ ದೀಪಗಳ ಮುಂದೆ ತಮ್ಮ ತಪ್ಪುಗಳನ್ನೆಲ್ಲ ಮನ್ನಿಸಬೇಕಾಗಿ ಭಗವಂತನನ್ನು ಪ್ರಾರ್ಥಿಸುವರು. ಈ ಹಬ್ಬವನ್ನು ಇಡೀ ಭಾರತದಲ್ಲಿ ಆಚರಿಸುತ್ತಾರೆ ಉತ್ತರ ಕರ್ನಾಟಕದಲ್ಲಿ ಹೋಳಿ ಹಬ್ಬವನ್ನು ಬಣ್ಣ ಎರಚಿ ತಮಟೆ ಬಡಿದು ನೃತ್ಯ ಮಾಡುತ್ತಾ ಆಚರಿಸುತ್ತಾರೆ. ಆದರೆ ಈ ಉಡುಪಿ ಭಾಗದಲ್ಲಿನ ಸಮುದಾಯ ಹೋಳಿ ಹಬ್ಬವನ್ನು ವಿಶೇಷ ವೇಷ ತೊಟ್ಟು ನೃತ್ಯ ಮಾಡುತ್ತಾ ಆಚರಿಸುತ್ತಾರೆ. ಇಲ್ಲಿ ಕುಡುಂಬಿ,ಮರಾಠಿ ಜನಾಂಗದ ಜನರುಗಳು ಈ ರೀತಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಹೋಳಿ ಹಬ್ಬವು ಹುಣ್ಣಿಮೆಯ ಮೊದಲ ಐದು ದಿನ ಮುಂಚಿತವಾಗಿ ಆರಂಭವಾಗಿ ಹುಣ್ಣಿಮೆಯಂದು ಸಮಾಪ್ತಿಗೊಳ್ಳುವ ಹಬ್ಬ ಇದರ ಆಚರಣೆಯ ಅತ್ಯಂತ ವಿಶಿಷ್ಟವಾದದ್ದು.ಈ ವರ್ಷ ೧೪ರಿಂದ ಆರಂಭವಾಗಿಇದೇ ೧೮ನೇ ತಾರೀಕು ಶುಕ್ರವಾರ ಹುಣ್ಣಿಮೆಯಂದು ಈ ಹಬ್ಬವು ಕೊನೆಗೊಳ್ಳುತ್ತದೆ. ಇಷ್ಟೇ ನನಗನಿಸಿದ್ದು ಇಲ್ಲಿಗೆ ನನ್ನೆರಡು ಬರಹಕ್ಕೆ ಪೂರ್ಣ ವಿರಾಮ ಹಾಕುತ್ತೇನೆ.ಹಾಗೇ ಎಲ್ಲ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.🙏🏻💐


ಸವಿತಾ ಸತೀಶ್ ಶೆಟ್ಟಿ ಗೃಹಿಣಿ (ಬೆಳ್ತಂಗಡಿ ಧರ್ಮಸ್ಥಳ) ✍️

[16/03, 8:26 PM] Shankar Kulal Teacher: 🌹ಸ್ಪರ್ಧೆಗಾಗಿ - ನೆನಪಿನ ಹೋಳಿ🌹


           ಸುತ್ತಮುತ್ತಲೂ ಹೋಳಿಯ ಗುಂಮ್ಟೆ ಸದ್ದು ಕೇಳಿಸುತ್ತಿದೆ.ನನ್ನ ಮನಸು ಬಾಲ್ಯದ ಹೋಳಿಯತ್ತ ಜಾರಿತು.ಓಹ್...! ಅಂದಿನ ಹೋಳಿಯ ಗಂಮತ್ತು ಇಂದೆಲ್ಲಿ ಬರಬೇಕು.ನಮ್ಮದು ಹೇಳಿ ಕೇಳಿ ಉಗ್ರಾಣಿ ಮನೆ.ಊರಿನಲ್ಲಿರುವ ಜಡ್ಡಿನ ಗದ್ದಿಗೆಯವರದು ಅಜಾಲಿಂದ ನಮ್ಮ ಮನೆಗೇ ಬರಬೇಕು.ಅಂದು ಮನೆಯ ನಾಯಿಗಳನ್ನು ಮೊದಲೇ ಕಟ್ಟಿರುತ್ತೇವೆ.ಅಂಗಳವನ್ನು ಸಗಣಿಯಿಂದ ಅಂದವಾಗಿ ಸಾರಿರುತ್ತೇವೆ.ತಾಂಡ್ಯದ ಗುರಿಕಾರ ಮೊದಲಾಗಿ ಬರುತ್ತಾರೆ.ನನ್ನ ತಾಯಿ ಅವರ ಕಾಲನ್ನು ತೊಳೆದು ಅಡ್ಡಬೀಳುತ್ತಾರೆ.ಮನೆಯವರೆಲ್ಲ ಬಾಗಿಲ ಸಂದು ಆಚೆ ಈಚೆ ನಿಂತುಕೊಂಡು ಇಣುಕುತಿರುತ್ತಾರೆ.ಅವರ ಹಿಂದಿನಿಂದ ಹತ್ತು ಹನ್ನೆರಡು ಜನ ಗುಂಮ್ಟೆ ಹಿಡಿದು ಬಡಿಯುತ್ತಾ ಮಂಡಲಾಕಾರವಾಗಿ ಕುಣಿಯುತ್ತಾ ಬರುತ್ತಾರೆ.ಗುಂಮ್ಟೆಯ ಜೊತೆಗೆ ತಟ್ಟೆಯಾಕಾರದ ತಾಳ( ತೆಂಕುತಿಟ್ಟಿನ ಯಕ್ಷಗಾನ ತಾಳದಂತೆ/ ದಾಸಯ್ಯನ ತಟ್ಟೆ ತಾಳದಂತೆ) ಬಡಿಯುತ್ತಾ ಕುಣಿಯುತ್ತಾ ಸುತ್ತು ಬರುತ್ತಾರೆ.ಬಣ್ಣ ಬಣ್ಣದಾ ಹೂವ ತಾಂಬೆ ಎಂದು ಹಾಡುತ್ತಾ ಕುಣಿಯುತ್ತಾರೆ.ಕುಣಿತ ವೇಗ ಪಡೆದಂತೆ ತಮ್ಮಲ್ಲಿರುವ ಕೋಲಾಟದ ಕೋಲಿನಿಂದ ಕೋಲಾಟ ಆಡುತ್ತಾರೆ.ಎಗರಿ ಎಗರಿ ಕುಣಿವ ಚೆಂದ ಅದಕ್ಕೆ ಅವರದೇ ಆದ ಮರಾಠಿ ಭಾಷೆಯ ಹಾಡು ಒಂದಕ್ಕೊಂದು ಮಿಳಿತಗೊಂಡು ವಿಶೇಷವಾದ ಭಕ್ತಿ ಸನ್ನಿವೇಶ ಮೂಡಿಬರುತ್ತದೆ..

           ಈ ಮೊದಲ ಹಂತದ ಕುಣಿತದ ಬಳಿಕ ಭಯ ಮಿಶ್ರಿತ ಕಣ್ಣುಗಳಿಂದ ಇಣುಕುತ್ತಿದ್ದ ಸುಮಾರು ಏಳೆಂಟು ವರ್ಷದ ಒಳಗಿನ ಮಕ್ಕಳನ್ನು ಹಿಡಿದುಕೊಂಡು ಕುಣಿಯುತ್ತಾರೆ.ದೃಷ್ಟಿ ತೆಗೆಯುತ್ತಾರೆ.ಅವರ ಭಯ ಹೋಗಲಾಡಿಸುತ್ತಾರೆ.ತಲೆ ಮೇಲೆ ನೀವಾಳಿಸಿ ಭಯ ಮುಕ್ತರಾಗಿಸುತ್ತಾರೆ.ಅವರು ಹೆದರಿ ಕೂಗುವ ಸ್ವರ ಆಚೆ ಬೆಟ್ಟಿನ ಮನೆಯವರೆಗೂ ಕೇಳಿಸುತ್ತಿತ್ತು.ಕೊನೆಯದಾಗಿ ಮನೆಯಲಿರುವ ವರ್ಷದ ಒಳಗಿನ ಮಕ್ಕಳನ್ನು ಹೆಂಗಸರು ಅವರ ಕೈಲಿಡುತ್ತಾರೆ.ಆ ಮಕ್ಕಳನ್ನು ಜೋಕಾಲಿ ಆಡಿಸಿ ಆಶೀರ್ವಾದ ಮಾಡುತ್ತಾರೆ.ಆ ಮಕ್ಕಳು ಕಿಲಿ ಕಿಲಿ ನಗುವುದನ್ನು ನೋಡಿ ಎಲ್ಲರಿಗೂ ಖುಷಿಯೋ ಖುಷಿ...

            ಆ ಬಳಿಕ ಮನೆ ಯಜಮಾನ ಕಾಯಿ ಎಲೆ ಅಡಕೆ ಒಂದೂ ಕಾಲು ರೂಪಾಯಿ ( ಐದು ಚಕ್ರ) ಭಕ್ತಿ ಪೂರ್ವಕವಾಗಿ ಅರ್ಪಿಸುತ್ತಾರೆ.ಬಳಿಕ ಅಲ್ಲೇ ಕುಳಿತು ಬಾವಿಯಿಂದ ಅವರೇ ನೀರು ಸೇದಿ , ಕುಡಿಯುತ್ತಾರೆ.ಎಲೆ ಅಡಕೆ ಮೆಲ್ಲುತ್ತಾರೆ.ಮನೆಯ ಸುಖ ಕಷ್ಟ,ಬೇಸಾಯದ ವಿಚಾರವಾಗಿ ದನ ಕರು ಎತ್ತು ಕೋಣ ಮದುವೆ ಇತ್ಯಾದಿ ವಿಚಾರಗಳನ್ನು ಮಾತನಾಡುತ್ತಾ ಮುಂದಿನ ಭಟ್ರ ಮನೆಗೋ ಹೆಗ್ಡೇರ ಮನೆಗೋ ಸಾಗುತ್ತಾರೆ.ಆಗ ನಮ್ಮ ಮನೆಯಲ್ಲಿ ಸುಮಾರು ನಲುವತ್ತೆರಡು ಜನರಿದ್ದೆವು.ಒಂದು ಹೊತ್ತಿನ ಊಟಕ್ಕೆ ಹತ್ತು ಸೇರು ಅಕ್ಕಿ ಹಾಕುತ್ತಿತ್ತು.ಹೋಳಿ ಕುಣಿವವರನ್ನು ನೋಡುವುದೇ ಚೆಂದ.ತಲೆಗೆಮುಂಡಾಸು ಕಟ್ಟಿ ಅದಕ್ಕೆ ಅಬ್ಬಲಿಗೆ,ಗೇಟ್ ಹೂವಿನ ಅಲಂಕಾರ.ಉದ್ಧ ಕೈಯ ನಿಲುವಂಗಿ.ಮಣಿ ಕಟ್ಟಿಗೆ ಚೆಂದದ ಕನಕಾಂಬರದ ಅಲಂಕಾರ.ಕಾಲಿಗೆ ಭರತ ನಾಟ್ಯ/ ಯಕ್ಷಗಾನದ ಗೆಜ್ಜೆ.ಸೊಂಟಕ್ಕೆ ಬಿಗಿದ ಬೈರಾಸ.ಕುತ್ತಿಗೆಗೊಂದು ಬಣ್ಣದ ಶಾಲು.ಕೆಲವರಿಗೆ ಜಾತ್ರೆಯ ಬಣ್ಣದ ಕನ್ನಡಕ.ಅವರನ್ನು ನೋಡುವುದೇ ಚೆಂದ.ಕೆಲವರು ಯಕ್ಷಗಾನ ಶೈಲಿಯಲ್ಲಿ ಬಟ್ಟೆ ಹೊಲಿಸುವುದೂ ಉಂಟು.ಆ ಕಾಲ ಇನ್ನು ಬರಲಾರದು.ಬರುವುದೂ ಇಲ್ಲ.

           ಊರಿಗೆ ಐವತ್ತು ವರ್ಷದ ಹಿಂದೆ ಮೆಡಿಕಲ್ ಇಂಜಿನಿಯರಿಂಗ್ ಕಾಲೇಜು ಬಂದ ಮೇಲೆ ಬಣ್ಣಗಳ ಎರೆಚಾಟ ಪ್ರಾರಂಭವಾಯಿತು.ನಮಗೆಲ್ಲ ಖುಷಿಯೋ ಖುಷಿ.ಮಣಿಪಾಲ ದಾಟುವವರ ಮೇಲೆಲ್ಲ ವಿದ್ಯಾರ್ಥಿಗಳು ಬಣ್ಣ ಎರಚಿದರು.ಕೆಲವೊಮ್ಮೆ ಡ್ರೈವರ್ ಮೇಲೆ ಬಿದ್ದು ದೊಡ್ಡ ಗಲಾಟೆಯೇ ಆಯಿತು.ಊರಿನವರೆಲ್ಲ ಅಟ್ಟಿಸಿಕೊಂಡು ಬಾರಿಸಿದರು.ಕೊನೆಗೆ ಜನರ ಒಪ್ಪಿಗೆಯ ಮೇರೆಗೆ ಮಾತ್ರ ಬಣ್ಣ ಹಚ್ಚಲಾಯಿತು.ಆಗ ಊರವರೆಲ್ಲರೂ ಹಣೆಗೊಂದು ಗಂಧ ಎರಡೂ ಕೆನ್ನೆಗಳಿಗೆ ಬಣ್ಣ ಹಚ್ಚಿ ಕೊಂಡರು.ಪರ ರಾಜ್ಯದ ವಿದ್ಯಾರ್ಥಿಗಳು ಅವರಿಷ್ಟದಂತೆ ಕಾಮನಾಟ ಎರಚಾಟಗಳಲ್ಲಿ ತೊಡಗಿದರು.ನಾವು ನೋಡಿ ಸಂತಸ ಪಟ್ಟೆವು.ಈಗ ಕೂಡ ಅದೇ ರೀತಿ ನಡೆಯುತ್ತಿದೆ..

     ಹೋಲೀ ಕೆ ದಿನ್ ದಿಲ್ ಖಿಲ್ ಜಾತೇ ಹೇಂ...

ರಂಗೋಮೆ ರಂಗ್ ಮಿಲ್ ಜಾತೇ ಹೇಂ......ಹೋಲೀರೇ.......


ಶಂಕರ ಕುಲಾಲ ಪರ್ಕಳ

ಉಡುಪಿ ತಾಲೂಕು ಮತ್ತು ಜಿಲ್ಲೆ.

[16/03, 8:45 PM] anuradha yq: ಬತ್ತದ ತೊರೆ ಸ್ನೇಹ ಬಳಗದ ಸ್ಪರ್ಧೆಗಾಗಿ

ಲೇಖನ ಸ್ಪರ್ಧೆ

ವಿಷಯ : ಹೋಳಿ ಹಬ್ಬದ ಆಚರಣೆ ಮತ್ತು ಬಾಲ್ಯದ ನೆನಪುಗಳು


ಹೋಳಿಹಬ್ಬ ಬಂತೆಂದರೆ ವರ್ಣಿಸಲಾಗದ ಸಂತೋಷ.ತಿಂಗಳ ಮೊದಲೇ ಸಂಭ್ರಮ ಶುರುವಾಗಿರುತ್ತಿತ್ತು.ಎಷ್ಟೊಂದು ಬಣ್ಣಗಳನ್ನ ಉಪಯೋಗಿಸಬೇಕು ,ಯಾರ್ಯಾರ ಜೊತೆ ಬಣ್ಣವಾಡಬೇಕು ಹೇಗೆ ಆಚರಿಸಬೇಕು ಅನ್ನುವ ಯೋಜನೆ ಮನದಲ್ಲೇ ಮಾಡುತ್ತಾ ಸಂಭ್ರಮಿಸುತ್ತಿದ್ದೆವು.ನಾವೆಲ್ಲಾ ಯಾರು ಯಾರಿಗೆ ಮೊದಲು ಬಣ್ಣ ಹಚ್ಚಬೇಕೆಂದು ಒಳಗೊಳಗೇ ಯೋಚಿಸಿ ಇಡುತ್ತಿದ್ದೆವು. ಹೋಳೀ ಹಬ್ಬದ ಮೊದಲ ದಿನ ರಾತ್ರಿ ಕಾಮ  ದಹನವಾಗುತ್ತಿತ್ತು .ನಾವು ಸ್ನೇಹಿತರೆಲ್ಲರೂ ಸೇರಿ ಮನೆ ಮನೆಗೂ ಹೋಗಿ ಕಾಮ ದಹನಕ್ಕೆ ಬೇಕಾದ ಕಟ್ಟಿಗೆ ಎಣ್ಣೆ ಎಲ್ಲ ಪಧಾರ್ಥಗಳನ್ನು ತಂದು ಒಗ್ಗೂಡಿಸುತ್ತಿದ್ದೆವು.ಸಾಯಂಕಾಲದಿಂದ ಕಾಮ ದಹನ ಮಾಡುವ ಸ್ಥಳದಲ್ಲಿ ಗುಂಡಿಯನ್ನು ತೋಡಿ ಕಸ ಗುಡಿಸಿ  ಸಾರಿಸಿ ರಂಗೋಲಿ ಹಾಕುತ್ತಿದ್ದರು .ನಂತರ ಪೂಜಿಸಿ ಕಟ್ಟಿಗೆಗಳನ್ನಿಟ್ಟು ಬೆಂಕಿಯನ್ನು ಹಚ್ಚಿ ಅದರ ಸುತ್ತಲೂ ಕೈಮುಗಿದು ಸುತ್ತುತ್ತಾ ಪ್ರಾರ್ಥಿಸುತ್ತಿದ್ದೆವು .ನಂತರ ಆ ಉರಿಯಲ್ಲಿ ಕಡಲೆಗಳನ್ನು ಸುಟ್ಟು ಪ್ರಸಾದದ ರೂಪವಾಗಿ ಎಲ್ಲರಿಗೂ ಕೊಟ್ಟು ತಿನ್ನುತ್ತಾ ಇದ್ವಿ. ಮರುದಿನ ಬಣ್ಣದ ಹಬ್ಬ ಶುರುವಾಗುತ್ತಿತ್ತು.ನಾನಂತೂ ನಮ್ಮ ತಂದೆಗೆ ಹೇಳಿ ಮುಂಚಿತವಾಗಿ ಬಣ್ಣಗಳನ್ನ ತಂದು ಮುಚ್ಚಿಡುತ್ತಿದ್ದೆ.ನಮ್ಮ ತಂದೆ  ಎಬ್ಬಿಸುವವರೆಗೂ ಏಳದ ನಾನು ಹಬ್ಬದಂದು ನಸುಕಿನಲ್ಲೇ ಎದ್ದು ಮೊದಲು ನಮ್ಮ ಚಿಕ್ಕಣ್ಣನಿಗೆ ಬಣ್ಣ ಹಚ್ತಾ ಇದ್ದೆ.ಅದೂ ಎಲ್ಲಾ  ಬಣ್ಣಗಳನ್ನು ಸೇರಿಸಿ ಹಣೆಗೆ ಉದ್ದನೆಯ ತಿಲಕವಿಟ್ಟು ಬಣ್ಣದಿಂದ ಮೀಸೆಯನ್ನು ಮಾಡಿ ಗಲ್ಲಗಳಿಗೆ ಜೋಕರಿನಂತೆ ಗುಂಡಾಕಾರದಲ್ಲಿ ಹಚ್ಚುತ್ತಾ ಇದ್ದೆ.ಎದ್ದ ಮೇಲೆ ಎಲ್ಲರೂ ನೋಡಿ ನಗುವಾಗ ನಮ್ಮಣ್ಣನ ಮೊಗವ ನೋಡಿ ಚಪ್ಪಾಳೆ ತಟ್ಟುತ್ತಾ ಕೇಕೇ ಹಾಕುತ್ತಾ ಕುಣಿಯುತ್ತಿದ್ದೆ. ನಂತರ ನಾನು ಮೊಗ ತೊಳೆಯುವಾಗ ಮೆಲ್ಲನೆ ನಮ್ಮಣ್ಣ ಹಿಂದುಗಡೆಯಿಂದ ಬಂದು ಬಕೆಟ್ಟುಗಟ್ಟಲೇ ಬಣ್ಣದ ನೀರನ್ನು ತಂದು ನನ್ನ ಮೇಲೆ ಸುರಿಯುತ್ತಿದ್ದ ಎಷ್ಟೇ ಎಚ್ಚರಿಕೆಯಿಂದಿ ಇದ್ದರೂ ಇದು ತಪ್ಪುತ್ತಾ ಇರಲಿಲ್ಲ . ಆಗ ಹಬ್ಬದ ಸಂಭ್ರಮವೇ ಅಧ್ಭುತ ಅವರ್ಣನೀಯ  ಆನಂದ ತರುತ್ತಲಿತ್ತು.ಮನೆಯಲ್ಲಿ  ಬಣ್ಣದಾಟ ಆಡಿದ ಮೇಲೆ ಸ್ನೇಹಿತರನ್ನು ಅರಸುತ್ತಾ ಹೋಗ್ತಿದ್ವಿ .ಎಲ್ಲರೊಂದಿಗೂ ಸೇರಿ ಬಣ್ಣದ ಓಕುಳಿಯಾಡಿ ಎಲ್ಲರ ಮನೆಯಲ್ಲಿ ಕೊಡುವ ಸಿಹಿಯನ್ನು ತಿನ್ನುತ್ತಾ .ಅಡಗಿಸಿಕೊಂಡವರನ್ನು ಹುಡಕಿ ಎಳೆದಾಡಿ, ಓಡುವವರನ್ನು ಅಟ್ಟಿಸಿಕೊಂಡು ಬಣ್ಣದ ನೀರನ್ನು ಸುರಿದು ಗಲ್ಲಕ್ಕೆ ಬಣ್ಣವನ್ನು ಹಚ್ಚಿ ಅವರ ಕೈಗೆ ಸಿಗದ ಹಾಗೇ ಓಡುತ್ತಲಿದ್ವಿ.ಆಹಾ ಆ ಸಡಗರ ನೋಡಲು ಕಣ್ಣು ಸಾಲವು.

ಮಧ್ಯಾನ್ಹದವರೆಗೂ ಬಣ್ಣದಾಟವಾಡಿ ಮನೆಗೆ ಬಂದು ಎಲ್ಲವನ್ನೂ ಶುಚಿಗೊಳಿಸಿ ತಲೆ ಸ್ನಾನ ಮಾಡಿ ಹೊಸ ಬಟ್ಟೆ ಹಾಕಿಕೊಳ್ತಾ ಇದ್ವಿ.ನಂತರ ಅಮ್ಮ ಮಾಡಿದ ಹೋಳಿಗೆ ತುಪ್ಪ ವಿವಿಧ ಭಕ್ಷ್ಯಗಳ ಊಟವನ್ನು ಸವಿಯುತ್ತಾ ಇದ್ದೆವು.

ಆಗಿನ ಹಬ್ಬಗಳ ಸಂಬ್ರಮವೇ ಚಂದ.ನಮ್ಮ ಮದುವೆ ಆಗುವವರೆಗೂ ನಾನೂ ನಮ್ಮಣ್ಣನ ನಡುವಿನ ಈ ಹಬ್ಬವನ್ನಾಚರಿಸುವ ರೀತಿ ಕಡಿಮೆಯಾಗಿರಲಿಲ್ಲ .ಪ್ರತೀ ಸಾರಿ ಅಣ್ಣ ಮಲಗಿರುವಾಗ ಅವನ ಮೊಗಕ್ಕೆ ಬಣ್ಣ ಹಚ್ಚುವುದರಿಂದ ಶುರುವಾಗ್ತಾ ಇತ್ತು.ಆದರೆ ಈಗ ನಾವು ಎಲ್ಲರೂ ದೂರ ದೂರ .ಇವಾಗ ನಾವು ನಮ್ಮ ನಮ್ಮ ಮನೆಯಲ್ಲಿ ನಮ್ಮ ಮಕ್ಕಳು ಬಣ್ಣ ಆಡುವುದನ್ನು ನೋಡಿ ಸಂಭ್ರಮಿಸುವೆವು. ಬರ ಬರುತ್ತಾ ಈಗ ಹಬ್ಬವನ್ನು ಆಚರಿಸುವ ರೀತಿ ನೀತಿಗಳು ಬದಲಾಯಿಸುತ್ತಿದೆ .ಈಗ ಹಬ್ಬಗಳಲ್ಲಿ ಮೊದಲಿನ ಉತ್ಸಾಹವಿಲ್ಲ,ಆನಂದವಿಲ್ಲ ಈಗ

ಎಲ್ಲರೂ ತಮ್ಮ ತಮ್ಮಲ್ಲೇ  ಕಾಟಾಚಾರಕ್ಕೆ ಹಬ್ಬವನ್ನು ಆಚರಿಸುತ್ತಾರೆ.ಅದೊಂದು ನೀಯಮವೆಂಬಂತೆ ಪಾಲಿಸುತ್ತಾರೆ.ಮೊದಲಿನ ಕಳೆ ಕಡಿಮೆಯಾಗುತ್ತಾ ಬಂದಿದೆ.ಆದರೂ ಆ ಬಾಲ್ಯದ ಸವಿ ನೆನಪುಗಳೇ ಮಧುರಾನುಭೂತಿ ತರುತ್ತದೆ.


ಅನುರಾಧಾ ಕುಲ್ಕರ್ಣಿ🌺🌺

ಗೃಹಿಣಿ

ಕೋಲ್ಕತ್ತಾ

[16/03, 8:59 PM] Sumangala VK Madm: ಬತ್ತದ ತೊರೆ ಸ್ನೇಹ ಬಳಗ

ಲೇಖನ ಸ್ಪರ್ಧೆಗಾಗಿ 


*ಹೋಳಿ ಹಬ್ಬದ ಆಚರಣೆ ಮತ್ತು ಬಾಲ್ಯದ ನೆನಪು*


*ಶಿರ್ಷಿಕೆ: ಅಜ್ಜಿಯ ಊರು* 

               ನನಗೆ ಬಾಲ್ಯದ ನೆನಪುಗಳೆಂದರೆ ನನ್ನ ಅಜ್ಜಿಯ ಊರು ನೆನಪಿಗೆ ಬರುತ್ತದೆ. ಏಕೆಂದರೆ ಒಂದು ವರ್ಷದ ಮಗುವಿದ್ದಾಗಲೇ ಅಲ್ಲಿ ಇದ್ದವಳು ನನ್ನ ೧೮ ನೇ ವಯಸ್ಸಿಗೆ ನನ್ನ ಊರಿಗೆ ಬಂದೆನು. ಬಾಲ್ಯದಲ್ಲಿ ಹೋಳಿಹಬ್ಬ ಎಂದರೆ ನಾವು ನಮ್ಮ ಅಜ್ಜಿಯ ವಠಾರದಲ್ಲಿ ಒಂದು ೭,೮ ಜನ ಸ್ನೇಹಿತರು ಇದ್ದೇವು. ನಮ್ಮ ಅಜ್ಜ ಕಾಮನ ಹಬ್ಬಕ್ಕೆ ಬಣ್ಣ ಮತ್ತು ಬಣ್ಣದ ನೀರು ಇನ್ನೊಬ್ಬರಿಗೆ ಚುಮುಕಿಸಲು "ಜಿಗಳಿ" ಅಂತ ಹೇಳಿ ತರುತ್ತಿದ್ದರು. ಅದರಿಂದ ನಾನು ನನ್ನ ಸ್ನೇಹಿತರು ಆಡುತ್ತಿದ್ದೇವು. ಅದು ಹಿಂದಿನಿಂದ ಅವರಿಗೆ ಗೊತ್ತಾಗದಂತೆ ಹೋಗಿ ಬಣ್ಣ ಎರಚುವುದಾಗಿತ್ತು. ಹೀಗೆ ಪ್ರತಿ ವರ್ಷ ಬಣ್ಣದೋಕುಳಿ ಆಡುತ್ತಿದ್ದೇವು. ೬ನೇ ತರಗತಿ ಬರುವವರೆಗೂ ಆಡಿದೇವು. ನಂತರ ದೊಡ್ಡವರಾಗಿದ್ದೀರಾ ಇನ್ಮೇಲೆ ಆಡುವುದು ಸಾಕು ಎಂದು ಮನೆಯಲ್ಲಿ ಹೇಳ ತೊಡಗಿದರು ಹಾಗಾಗಿ ಬಿಟ್ಟೇವು. ಅಜ್ಜಿಯ ಊರಲ್ಲಿ ಹೋಳಿ ಹಬ್ಬದ ಆಚರಣೆ ಎಂದರೆ ಹುಣ್ಣಿಮೆ ದಿನದಂದು ಕಾಮಣ್ಣ ಮತ್ತು ರತಿದೇವಿಯನ್ನು ಪ್ರತಿಷ್ಟಾಪನೆ ಮಾಡುವರು. ಆ ದಿನ ಎಲ್ಲರ ಮನೆಯಿಂದ ಅಡುಗೆ ಮಾಡಿ ಪ್ರಸಾದ ನೇವಿದ್ಯ ಮಾಡಿಕೊಂಡು ಬರುವರು. ನಮ್ಮ ಅಜ್ಜಿಯ ಮನೆಯಲ್ಲಿ ಕುಚ್ಚಿದ ಕಡಬು, ಅನ್ನ, ಬದನೆಕಾಯಿ ಪಲ್ಯ, ಸಂಡಿಗೆ, ಮೆಣಸಿನಕಾಯಿ ಎಲ್ಲವನ್ನೂ ಕಾಮಣ್ಣನ್ನು ಇಟ್ಟಿರುವ ಸ್ಥಳಕ್ಕೆ ನಾನು ನನ್ನ ಗೆಳತಿಯರು ಹೋಗಿ ನೇವಿಧ್ಯ ಮಾಡಿಕೊಂಡು ಬರುತ್ತಿದ್ದೇವು. ಮರುದಿನ ಬೆಳಿಗ್ಗೆ ಓಕುಳಿ ಆಡಲು ಶುರು ಮಾಡುತ್ತಿದ್ದರು. ದೊಡ್ಡವರು, ಸಣ್ಣವರು ಎನ್ನದೇ, ಜಾತಿ ಭೇದ ಭಾವವಿಲ್ಲದೆ ಓಕುಳಿ ಆಡುತ್ತಿದ್ದರು‌. ಓಕುಳಿಯ ಸಮಯ ಬೆಳಿಗ್ಗೆಯಿಂದ ಶುರುವಾಗಿ ಕಾಮನ ದಹನವಾಗುವವರೆಗೆ ಆಡುತ್ತಿದ್ದರು. ಕಾಮಣ್ಣನ್ನು ದಹಿಸಿದ ನಂತರ ಓಕುಳಿ ಯಾರು ಆಡುವಂತಿಲ್ಲ. ಅದು ೧೨ ಗಂಟೆಗೆ ಶುರುವಾಗಿ ೪ ಮುಖ್ಯ ಬೀದಿಗಳಲ್ಲಿ ದಹಿಸುವಷ್ಟರಲ್ಲಿ ೨ ಗಂಟೆ ಆಗುತ್ತಿತ್ತು. ದಹಿಸಲು ಕುಳ್ಳು, ಕಟ್ಟಿಗೆಯನ್ನು ಎಲ್ಲರೂ ಮಲಗಿದ ನಂತರ ಕದ್ದು ತಂದು ಗಂಡು ಮಕ್ಕಳು ಹಾಕುತ್ತಿದ್ದರು.(ಕಾಮಣ್ಣನ ಮಕ್ಕಳು ಕಳ್ಳೆ ಸುಳ್ಳೇ ಮಕ್ಕಳು, ಏನೇನು ಕದ್ದಿದ್ರು ಕುಳ್ಳು ಕಟ್ಟಗಿ ಕದ್ದಿದ್ರು ಅಂತಾ ಹಾಡು ಹೇಳುತ್ತಾ ಬಾಯಿ ಬಡೆದುಕೊಳ್ಳುತ್ತಾರೆ). ಕಾಮಣ್ಣನ್ನು ದಹಿಸಿದ ನಂತರ ಅಲ್ಲಿರುವ ಕುಳ್ಳಿನ ಕೆಂಡವನ್ನು ತಂದು ಕಡಲೆಯನ್ನು ಸುಟ್ಟು ತಿನ್ನುತ್ತೇವು ಇದರಿಂದ ಹಲ್ಲು ಗಟ್ಟಿಯಾಗುತ್ತವೆ ಎಂಬ ನಂಬಿಕೆ. ಹಾಗೂ ಅಡುಗೆ ಒಲೆಗೆ ಹಾಕಿ ಹೋಳಿಗೆ ಮಾಡುವುದು ಸಂಪ್ರದಾಯ ಹಿಂದಿನಿಂದ ಬಂದಿದೆ. ಈಗಲೂ ಮಾಡುವರು. ಹಾಗೆಯೇ ಗಂಡು ಮಕ್ಕಳು ಏಣಿಯ ಒಬ್ಬನನ್ನು ಮಲಗಿಸಿ, ಅವನ ಮೇಲೆ ಬೇವಿನ ಸೊಪ್ಪು ಹೊದಿಸಿ, ಅವನನ್ನು ಕಾಮಣ್ಣ ಎಂದು ನೇಮಿಸಿ, ಮನೆ ಮನೆಗೆ ಹೋಗಿ, ಕಾಮಣ್ಣ ಸತ್ತಿದ್ದಾನೆ ಎಂದು ಬಾಯಿ ಬಡಿದುಕೊಂಡು ಅಳುತ್ತಾರೆ. ಆ ಮನೆಯವರು ಹೋಳಿಗೆ ಕೊಡುವವರೆಗೂ ಅಳುವುದು ನಿಲ್ಲಿಸುವುದಿಲ್ಲ ಹಾಗೂ ಆ ಮನೆ ಬಿಟ್ಟು ಮುಂದಕ್ಕೆ ಹೋಗುವುದಿಲ್ಲ. ಹೀಗೆ ವಠಾರದ ಪ್ರತಿ ಮನೆಯಲ್ಲೂ ಹೋಳಿಗೆ ಕೇಳಿ ಪಡೆದು ಕೆರೆ ಇರುವ ಕಡೆ ಹೋಗಿ ಹೋಳಿಗೆ ತಿಂದು ಕೆರೆಯಲ್ಲಿ ಸ್ನಾನ ಮಾಡಿ ಬರುತ್ತಿದ್ದರು. 

         ಈ ಆಚರಣೆಗಳು ಪದ್ಧತಿಗಳು ಇಂದಿಗೂ ಮಾಡುತ್ತಲೇ ಬಂದಿದ್ದಾರೆ. ಇದು ಒಂದು ಮಕ್ಕಳ ಹಬ್ಬ ಎಂದು ಹೇಳಬಹುದು.


✍🏻 *ಕು.ಸುಮಂಗಲಾ.ವಿಕೆ* ✍🏻

ಧಾರವಾಡ

[16/03, 9:00 PM] Kusuma Saliyan Madam: ಲೇಖನ ಸ್ಪರ್ಧೆ

ವಿಷಯ.."ನಿಮ್ಮೂರಿನಲ್ಲಿ ಹೋಳಿ ಹಬ್ಬದ ಆಚರಣೆ ಹಾಗೂ ಬಾಲ್ಯದ ನೆನಪು"


ಹೋಳಿ ಹಬ್ಬದ ಆಚರಣೆ ನಮ್ಮೂರಿನಲ್ಲಿ ನಾನು ಚಿಕ್ಕವಳಿದ್ದಾಗ ಅಷ್ಟೇನೂ ಸಡಗರವಿರಲಿಲ್ಲ. ಕಾರಣ ಹಳ್ಳಿಯ ಜೀವನ ಶೈಲಿಯಲ್ಲಿ ಸರಳವಾಗಿ ಹಿರಿಯರು ನಡೆದುಕೊಂಡು ಬಂದಂತಹ ಪದ್ದತಿಯನ್ನು ಮಾತ್ರ ಅನುಕರಣೆ ಮಾಡಲಾಗುತ್ತದೆ. ಮನೆಯಲ್ಲಿ ದೈವ ದೇವತೆಗಳ ಮುಂದೆ ದೀಪ ಧೂಪಾಯಿಯಿಂದ ಪೂಜಿಸುತ್ತಾರೆ. ಯಾವುದೇ ಹುಣ್ಣಿಮೆ ಇದ್ದರೂ ದಕ್ಷಿಣ ಭಾರತೀಯರಿಗೆ ವಿಶೇಷವೇ. ಹಾಗಂತ ಹೋಳಿ ಹಬ್ಬ ಪ್ರಕೃತಿಯ ಆರಾಧನೆಯಾದರೆ ಒಂದು ರೀತಿಯಲ್ಲಿ, ಇನ್ನೊಂದು ಕಡೆ ಹೋಲಿಕಾ ದಹನದ ವಿಶೇಷ ಸಂಭ್ರಮ. ಪ್ರಹಾಲ್ಲದನ ತಂದೆ ಹಿರಣ್ಯಕಶಿಪು ತನ್ನ ಮಗನ ಮೇಲೆ ಕಠೋರವಾದ ಶಿಕ್ಷೆಯನ್ನು ನೀಡಿ ಅವನ  ಹರಿಭಕ್ತಿ ತಿನ್ನು ತಡೆಯಲು ಪ್ರಯತ್ನಿಸುತ್ತಾನೆ. ಸೋತು ಕೊನೆಗೆ  ಬೆಂಕಿಯಿಂದ ಸುಡುವುದಿಲ್ಲ ಎಂಬ ವರದಾನ ಪಡೆದಿದ್ದ ತನ್ನ ಸಹೋದರಿ ಹೋಲಿಕಾಳ ತೊಡೃಯಲ್ಲಿ ಪ್ರಹಾಲ್ಲಾದನನ್ನು ಕುಳ್ಳಿರಿಸಿ ಬೆಂಕಿಯಿಂದ ಅವನನ್ನು ಸುಡುವ ಉಪಾಯ ಮಾಡಲು ಹರಿಭಕ್ತ ಪ್ರಹಾಲ್ಲಾದನು ಸುಡದೆ, ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಸ್ವತಃ ಸುಟ್ಟು ಭಸ್ಮೀಭೂತಳಾಗುತ್ತಾಳೆ ಈ ದಿನ. ಅದಕ್ಕಾಗಿ ಈ ದಿನದಂದು ಹೋಳಿ ಹಬ್ಬದ ರೂಪದಲಿ ಆಚರಿಸುತ್ತಾರೆ. ಅಲ್ಲದೆ ಶಿವ ಘೋರ ತಪಸ್ಸು ಮಾಡುತ್ತಿದ್ದ ವೇಳೆ ಶಿವ ಪಾರ್ವತಿಯರ ಪುತ್ರನನ್ನು ಶೀಘ್ರದಲ್ಲೇ ಪಡೆಯಲೋಸುಗ ಶಿವನ ತಪೋ ಭಂಗ ಮಾಡಲೆಂದು ರತಿ ಮನ್ಮಥರನ್ನು ದೇವತೆಗಳು ಕೈಲಾಸಕ್ಕೆ ಕರೆತರುತ್ತಾರೆ. ದೇವತೆಗಳ ಇಚ್ಚೆಯಂತೆ ಮನ್ಮಥನು ಹೂಬಾಣವನ್ನು ಬಿಟ್ಟಾಗ ಶಿವನ ತಪೋ ಭಂಗವಾಗುತ್ತದೆ. ಮುಕ್ಕಣ್ಣನು ಮೂರನೇ ಕಣ್ಣಿಂದ ಕಾಮನನ್ನು ಅರ್ಥಾತ್ ಮನ್ಮಥನನ್ನು ಸುಟ್ಟು ಭೂದಿ ಮಾಡುತ್ತಾನೆ ಶಿವ. ಹಾಗಾಗಿ ಕೆಟ್ಟ ಕಾಮನೆಗಳನ್ನು ಸುಟ್ಟು ಬಿಡುವ ಈ ಹಬ್ಬವನ್ನು ವಸಂತ ಋತುವಿನ ಆಗಮದ ಈ ಪರ್ವಕಾಲವನ್ನೂ ಸ್ವಾಗತಿಸುವ ಸಂಪ್ರದಾಯ ಸರಳತೆಯಿಂದ ಆಚರಿಸಲಿಗುತ್ತದೆ ತುಳುನಾಡಿನಲ್ಲಿ.  ಅಂಗಳಕ್ಕೆ ಸೆಗಣಿ ಸಾರಿಸಿ, ತುಳಸಿಯ ಬಳಿ ದೀಪ ಹಚ್ಚಿ ಮೊದಲು ಪ್ರಾರ್ಥನೆ ಮಾಡಲಾಗುತ್ತದೆ. ಆನಂತರ ಕಟ್ಟಿಗೆಗಳನ್ನು ಇಟ್ಟು  ಬೆಂಕಿ ಹೊತ್ತಿಸಿ ಸುತ್ತು ಬಂದು ಅದ್ಕೆ ಹರಳು, ತೆಂಗಿನಕಾಯಿ ಹಾಕುತ್ತಾರೆ. ಪ್ರಸಾದ ರೂಪದಲ್ಲಿ ಸುಟ್ಟ ತೆಂಗಿನಕಾಯಿ ಹಾಗೂ ಕಡ್ಲೆ, ನೆಲಕಡ್ಲೆ ಬೆಲ್ಲ ಇತ್ಯಾದಿ ಹಂಚುತ್ತಾರೆ.ತುಳುನಾಡಿನ ಜನರ ಸಂಸ್ಕೃತಿ ಸಂಸ್ಕಾರ ಅವರದ್ದೇ ಆದ ಜಾನಪದ ಶೈಲಿಯಲ್ಲಿ ವರ್ಣಿಸಲಾಗಿದೆ. ಇತ್ತೀಚೆಗೆ ನಾವು ಈಗ ಮಹಾರಾಷ್ಟ್ರದಲ್ಲಿ ಬಹಳ ವಿಜೃಂಭಣೆಯಿಂದ ಹೋಳಿ ಹಬ್ಬ ಆಚರಿಸುತ್ತೇವೆ.


☘️ಕುಸುಮ್ ಸಾಲಿಯಾನ್☘️

16/03/2022

[16/03, 9:07 PM] ಮಾಲತಿ ರಮೇಶ್: ಸ್ಪರ್ಧೆಗಾಗಿ(ಪ್ರಕಾರ):- ಲೇಖನ

ವಿಷಯ:- ನಮ್ಮೂರಿನಲ್ಲಿ ಹೋಳಿ ಹಬ್ಬದ ಆಚರಣೆ ಹಾಗೂ ಬಾಲ್ಯದ ನೆನಪು

ಶೀರ್ಷಿಕೆ:- ಅಂದದ ಹೋಳಿ


ಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆ ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆ. ಇದನ್ನು *ಹೋಳಿ ಹುಣ್ಣಿಮೆ* ಎಂದು ಕರೆಯಲಾಗುತ್ತದೆ. ಈ ಹಬ್ಬವು ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲ, ಏಕತೆಯನ್ನು ಬಿಂಬಿಸಿ ಹೊಸದನ್ನು ಸ್ವಾಗತಿಸುವ ಹಬ್ಬ. ಬಣ್ಣಗಳನ್ನು ಎರೆಚಾಡಿ ಸಂಭ್ರಮಿಸುವುದಕ್ಕಷ್ಟೇ ಈ ಹಬ್ಬವು ಸೀಮಿತವಾಗಿಲ್ಲ. ಬಡವ-ಬಲ್ಲಿದ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತಾತ್ವಿಕ ನಿಲುವನ್ನು ಅಕ್ಷರಶಃ ಆಚರಣೆಗೆ ತರುವುದೇ ಈ ಹೋಳಿ ಹುಣ್ಣಿಮೆ.


ಆದರೆ ಈಗ ಹೋಳಿ ಹಬ್ಬವು ಒಂದು ಫ್ಯಾಷನ್ ಆಗಿದೆ. ಹಿಂದೆ ಹೋಳಿ ಹಬ್ಬ ಮಾಡುವುದು ಒಂದು ಜನಾಂಗದವರು. ಅವರು ವೇಷ ಮತ್ತು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು, ತಮಟೆ ಬಡಿಯುತ್ತಾ ಮನೆಮನೆಗೆ ಬಂದು ಕುಣಿಯುತ್ತಾರೆ. ಅದೊಂದು ಸಾಂಪ್ರದಾಯಿಕವಾದ ಹಬ್ಬವಾಗಿತ್ತು.  ಈಗ ಪಟ್ಟಣ ಪ್ರದೇಶದಲ್ಲಿ ಹೋಳಿ ಹಬ್ಬವನ್ನು ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಈ ದಿನದಂದು ಬಣ್ಣಬಣ್ಣದ ನೀರನ್ನು,ಬಿದಿರಿನಿಂದ ತಯಾರಿಸಿದ ಕೊಳವೆಯಲ್ಲಿ ಹಾಕಿ ಬಣ್ಣದಾಟ ಆಡುವರು. ರಂಗಿನಾಟದ ನಂತರ  ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು.


ಬಾಲ್ಯದ ನೆನಪು:-

ನಮ್ಮೂರು ಒಂದು ಗ್ರಾಮೀಣ ಪ್ರದೇಶ.ಅಲ್ಲಿ ಹೋಳಿ ಹಬ್ಬ ಬಂತೆಂದರೆ ಅಲ್ಲಿಯ ಜನರಿಗೆ ಏನು ಒಂದು ಖುಷಿ. ಅಲ್ಲಿ ಹೋಳಿ ಹಬ್ಬ ಮಾಡುವುದು ಆ ಜನಾಂಗದವರು ಮಾತ್ರ (ಅಂದರೆ ಕುಡುಬಿ ಜನಾಂಗದವರು). ಅವರ ಮನೆಯಲ್ಲಿ ಒಂದು ತಿಂಗಳ ಹಿಂದೆಯೇ ಸಂಭ್ರಮ, ಸಡಗರ ಪ್ರಾರಂಭವಾಗುತ್ತದೆ. ಹೊಸ ಬಟ್ಟೆ ಖರೀದಿಸುವುದು,ಮನೆಯನ್ನು ಶೃಂಗರಿಸುವುದು.ಅವರ ಮನೆಯ ಪೂಜೆಗೆ ಎಲ್ಲರನ್ನೂ ಕರೆಯುವುದು. ಒಂದು ವಾರ ಖುಷಿಯ ವಾತಾವರಣ. ಹಗಲಿನಲ್ಲಿ ದುಡಿಯಲು ಹೋಗುವುದರಿಂದ, ಅವರು ಹೆಚ್ಚಾಗಿ ರಾತ್ರಿಯಲ್ಲಿ ಎಲ್ಲರ ಮನೆಗೆ ಕುಣಿಯಲು ಹೋಗುತ್ತಿದ್ದರು.ನಮಗೆ ಚಿಕ್ಕವರಿಗಂತೂ ಎಲ್ಲಿಲ್ಲದ ಖುಷಿ. ರಾತ್ರಿಯಿಡೀ ನಿದ್ದೆ ಬಿಟ್ಟು, ಅವರು ನಮ್ಮ ಮನೆಗೆ ಬರುವುದನ್ನು ಕಾಯುತ್ತಾ ಕುಳಿತಿರುತ್ತಿದ್ದೆವು.  ಬಣ್ಣಬಣ್ಣದ ಬಟ್ಟೆ ಹಾಕಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಅವರ ಭಾಷೆಯಲ್ಲಿ ಪದ್ಯಗಳನ್ನು ಹೇಳುತ್ತಾ ಕುಣಿಯುವ ಶೈಲಿ ಇನ್ನೂ ಕಣ್ಣಿಗೆ ಕಟ್ಟಿದಂತಿತ್ತು.ತಮಟೆ ಬಡಿಯುತ್ತಾ ಕುಣಿಯುವುದು, ಕೋಲಾಟದ ಪದ್ಯಗಳನ್ನು ಹೇಳುತ್ತಾ ಕುಣಿಯುವುದು, ಒಬ್ಬ ಜೋಕರ್ ವೇಷ ಹಾಕಿ ಮೂರು ಜನ ಕೋಲು ಹಿಡಿದುಕೊಂಡು ಗೂಡಿ....ಗೂಡೀ ಲಂಗಾಸಿ... ಎಂದು ಮೇಲೆ ಕೆಳಗೆ ಹಾರುತ್ತಾ ಕುಣಿಯುವಾಗ,ನಾವು ಮಕ್ಕಳು ಕೂಡಾ ಅವರೊಂದಿಗೆ ಕುಣಿಯುತ್ತಿದ್ದೇವು.ಆ ರಾತ್ರಿಯಲ್ಲೂ ಅವರೊಂದಿಗೆ ಅಕ್ಕ ಪಕ್ಕದ ಮನೆಗೂ ಹೋಗಿ ಕುಣಿಯುತ್ತಿದ್ದೆವು.  ಆ ದಿನಗಳು ಎಷ್ಟೊಂದು ಚೆನ್ನಾಗಿದ್ದವು. ಈಗಿನ ಮಕ್ಕಳಿಗೆ ಮೊಬೈಲ್ ಒಂದಿದ್ದರೆ ಏನೂ ಬೇಡ.



 *ನಿಮ್ಮೆಲ್ಲರ ಬಣ್ಣಬಣ್ಣದ ಕನಸುಗಳು ನನಸಾಗಲಿ.ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು*


✍️ *ಮಾಲತಿ ರಮೇಶ್ ಕೆಮ್ಮಣ್ಣು*

[16/03, 9:08 PM] Komala Kamaravadi: *ಬತ್ತದ ತೊರೆ ಸ್ನೇಹ ಬಳಗದ ಸ್ಪರ್ಧೆಗಾಗಿ*


ಪ್ರಕಾರ :ಲೇಖನ ಸ್ಪರ್ಧೆ


ನಮ್ಮೂರ ಹೋಳಿ ಹಬ್ಬದ ಆಚರಣೆಯಲ್ಲಿ ಬಾಲ್ಯದ ನೆನಪು.....ಬರೀ ನೆನಪಲ್ಲ;ಸುಮಧುರ ನೆನಪು.ಈ ಹೋಳಿ ಹಬ್ಬದ ಸಮಯ ವಿದ್ಯಾರ್ಥಿಗಳ ಪರೀಕ್ಷೆಯ ಸಮಯ...ಎಲ್ಲಾ ಕಡೆ ರಥೋತ್ಸವಗಳ ಸಮಯ.ಮಾರಿಹಬ್ಬ ಅನೇಕ ಊರುಗಳಲ್ಲಿ ಸಡಗರ ಸಂಭ್ರಮಗಳಿಂದ ನಡೆಯುತ್ತದೆ.ಅಂಥದ್ದೊಂದು ನಮ್ಮೂರು..ಮಾರಿಹಬ್ಬವನ್ನ ಮೂರುದಿನ ಸಕಲ ಸಂಭ್ರಮಗಳಿಂದ ಆಚರಿಸಲಾಗುತ್ತದೆ...ಮೂರನೆಯ ದಿನವೇ *ಹೋಳಿಹಬ್ಬ*


ಆ ದಿನ ಸಂಭ್ರಮವೋ ಸಂಭ್ರಮ.ಚಿಕ್ಕವರು ದೊಡ್ಡವರೆನ್ನದೇ...ಜಾತಿಬೇದಗಳಿಲ್ಲದೆ ಕೂಡಿ ಸಂಭ್ರಮಿಸುವ ಸುದಿನ. ಹೆಂಗಸರ ಕೆನ್ನೆಗಳು ರಂಗೇರಿರುತ್ತವೆ...ಒಬ್ಬರಿಗೊಬ್ಬರು ಬಣ್ಣ ಎರಚಾಡಿ ಖುಷಿಪಟ್ಟ ಸಂಭ್ರಮ ಮೈಕೈ ಮೇಲೆ ಬಟ್ಟೆಗಳ ಮೇಲೆ ವಿಜೃಂಭಿಸಿರುತ್ತದೆ..ಅತ್ತಿಗೆ ನಾದಿನಿಯರ ಸರಸ ಸಲ್ಲಾಪಗಳ  ಮಾತುಗಳು ಒಬ್ಬರನ್ನೊಬ್ಬರು ಜರಿದು ಕಾಲೆಳೆದು ಖುಷಿಪಡುವ ರೀತಿ ಮನಮೋಹಕ...ನಾವು ಮಕ್ಕಳಂತೂ ಊಟ ತಿಂಡಿ ಮರೆತು ಈ ಉಲ್ಲಾಸಗಳಲ್ಲಿ ಭಾಗಿಯಾಗುತ್ತಿದ್ದೆವು.

ನಮ್ಮೂರ ಹೋಕಳಿ ಹಬ್ಬದ ಇಷ್ಟಕ್ಕೆ ಮುಗಿಯುವುದಿಲ್ಲ .ಕೊನೆಯ ಘಟ್ಟದಲ್ಲಿ ಮಾರಯ್ಯನ ಗುಡಿಯ ಮುಂದೆ ಸುಸ್ತಾಗಿ ವರೆಗೂ ಮಂಗಳ   ವಾದ್ಯ ಡೈಲಿ ಜೊತೆಗೆ ಕುಣಿದು ಕುಪ್ಪಳಿಕೆ ದೇವರಿಗೆ ದೇವರಿಗೆ ಹರಕೆಯೊಪ್ಪಿಸುವ ಊರ ಗಂಡನು ಮಕ್ಕಳು(ಇವರನ್ನು ವೀರ ಮಕ್ಕಳೆನ್ನುವರು) ಎಲ್ಲರೂ ಸೇರಿ ತೋಡಿ ನೀರು ತುಂಬಿಸಿದ ಗುಂಡಿಗೆ ಓಡಿ ಬಂದು ಹಾರಿ ಬೀಳುವುದನ್ನು ನೋಡಲು ಜನಗಳಲ್ಲಿ ಸೇರುವುದು...ಮಜವೋ ಮಜ .ಜನರ ಗುಂಪಿನಲ್ಲಿ ನಮಗೇನು ಕಾಣಿಸದ ಕಾರಣ ಬಸವನ ಗುಡಿಯ ಮಂಟಪ ಹತ್ತಿ ನಿಲ್ಲತಿದ್ದೆವು.ಇನ್ನೂ ಕೆಲವರು ಹುಣಸೆ ಮರದ ರೆಂಬೆ  ಕೊಂಬೆಗಳ ಮೇಲೆ ಕುಳಿತು ವೀಕ್ಷಣೆ ಮಾಡುತ್ತಿದ್ದರು..

ನಿಜ ಹೇಳಬೇಕೆಂದರೆ ಸಂಭ್ರಮ ಸಡಗರದ ಹಬ್ಬ ಈ ಹೋಳಿ ಹಬ್ಬ


ಕೋಮಲ ಕಮರವಾಡಿ

ಚಾಮರಾಜನಗರ

[16/03, 9:11 PM] Ramitha2 Madam: ಬತ್ತದ ತೊರೆ ಬಳಗದ ಸ್ಪರ್ಧೆಗಾಗಿ ಹೋಳಿ ಹಬ್ಬದ ಕುರಿತು ಪ್ರಬಂಧ


ವಸಂತ ಮಾಸದ ಆಗಮನವನ್ನು ಸಂಭ್ರಮೋಲ್ಲಾಸದಿಂದ ಸ್ವಾಗತಿಸುತ್ತಾ ಆಚರಿಸುವ ಹಬ್ಬವೇ ಹೋಳಿ ಹಬ್ಬ. ಪಾಲ್ಗುಣ ಮಾಸದಲ್ಲಿ ಏಕಾದಶಿ ದಿನ ಆಚರಿಸುವರು. ಬಾಲ್ಯದ ಹೋಳಿ ಹಬ್ಬದ ನೆನಪುಗಳೆಂದರೆ ನಮ್ಮೂರ ಬಳಿ ಇರುವ ಕುಡುಬಿ ಜನಾಂಗದವರು ಅಂದರೆ ಅವರು  ಗೋವಾದಿಂದ ನಮ್ಮ ಕರಾವಳಿ ಕರ್ನಾಟಕದ ಭಾಗಗಳಾದ ಉಡುಪಿ ಕುಂದಾಪುರದ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದವರು ಹೋಳಿ ಹಬ್ಬದ ಆಚರಣೆಗಳು ಬಹಳ ಚೆನ್ನಾಗಿರುತ್ತದೆ ಎಂದು ಅವರ ಬಾಯಿಂದ ಕೇಳಿದ್ದು ನೆನಪು.

 ನಾನು ನನ್ನ ತವರುಮನೆಯ ಆಸುಪಾಸಿನ ಕಾಡಿಗೆ ಅವರು ಗುಂಪು ಕಟ್ಟಿಕೊಂಡು ಪ್ರಾಣಿ ಬೇಟೆ ಗೆಂದು ಬಂದಾಗ, ಅವರು ಐದು ದಿನ ಆ ಹಬ್ಬವನ್ನು ಆಚರಿಸುತ್ತಾರೆ ಎಂದು ಅವರ ಬಾಯಿಂದ ಕೇಳಿದ ನೆನಪು.

ನನ್ನ ಶಾಲಾ ಕಾಲೇಜು ದಿನಗಳಲ್ಲಿ ಒಂದಷ್ಟು ಬಣ್ಣವನ್ನು ಒಬ್ಬರಿಗೊಬ್ಬರು ಹಚ್ಚಿಕೊಂಡು ಸಂಭ್ರಮಿಸುವುದು ವಾಡಿಕೆ.

ಮದುವೆಗಾಗಿ ಅಥಣಿಗೆ ಹೋದಮೇಲೆ ಅಲ್ಲಿ ಹೋಳಿ ಹಬ್ಬದ ಆಚರಣೆಗಳು ಬಹಳ ಚೆನ್ನಾಗಿದೆ. ಒಂದು ತಮಟೆ ಯಂತಹ ಸಾಧನವನ್ನು ಹಿಡಿದು ಒಂದು ಓಣೆ ಮಕ್ಕಳೆಲ್ಲ ತಮಟೆ ಹೊಡೆಯುತ್ತಾ, ಅಥವಾ ಹಲಗಿ ಬಾರಿಸುತ್ತಾ ಕಾಮದಹನಕ್ಕೆ ಹಣ ಕೇಳುವುದು ಅಲ್ಲಿನ ಮಕ್ಕಳ ವಾಡಿಕೆ‌. ಸುತ್ತಮುತ್ತಲಿನ ಕಟ್ಟಿಗೆ ಒಗ್ಗೂಡಿಸಿ ಬೆಂಕಿ ಹಚ್ಚಿ ಕಾಯಿ ಬೆಂಕಿಗೆ ಕಾಯಿ ಒಡೆದು ಪ್ರಸಾದವಾಗಿ ಹಂಚುವುದು.

ಒಂದು ದಿನ ಎಲ್ಲರೂ ಬಿಳಿ ಬಟ್ಟೆ ಧರಿಸಿ ಬಣ್ಣಗಳ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಇದೆಲ್ಲಾ ನಾನು ನನ್ನ ಮಕ್ಕಳು ಅಥಣಿಯಲ್ಲಿದ್ದಾಗ ಸಂಭ್ರಮಿಸಿದ ದಿನಗಳು ಇದನ್ನು ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟ ಬತ್ತದ ತೊರೆ ಬಳಗಕ್ಕೆ ಧನ್ಯವಾದಗಳು.


ಎಂ ರಮಿತಾ ಶೆಟ್ಟಿ

ಬೈಂದೂರು ಪಡುವರಿ

ಜಡೆಕವನಗಳು ಸಾನೆಟ್ ಕವಿತೆ ಕನ್ನಡ ಸಾಹಿತ್ಯ

ಬತ್ತದ ತೊರೆ ಸ್ನೇಹ ಬಳಗದಿಂದ ಜಡೆಕವನಗಳ ಸಂಗ್ರಹ 

  🌷 ಶೀರ್ಷಿಕೆ - ಬೊಂಬೆಯಾಟ🌷


ಬಾನ ತುಂಬೆಲ್ಲ ಚೆಲ್ಲೈತೆ ಬಣ್ಣದ ಓಕುಳಿ

ಓಕುಳಿಯೊಳಗಡಗಿದೆ ವರ್ಣ ರಂಗೋಲಿ

ರಂಗೋಲಿ ಬಿಡಿಸ್ಯಾವ ಆಗಸದಿ ಚಿತ್ತಾರ

ಚಿತ್ತಾರದಲ್ಲಡಗಿದೆ ಅರ್ಥ ವಿಸ್ತಾರ

ವಿಸ್ತಾರವೀ ಬಾನು ಸೋಜಿಗದ ಆಲಯ

ಆಲಯದ ತುಂಬೆಲ್ಲ ದೈವ ಸಾಕ್ಷಾತ್ಕಾರ

ಸಾಕ್ಷಾತ್ಕಾರವಾಗಲೀ ಜೀವನ

ಜೀವನದ ಪಥದೊಳಡಗಿದೆ ಬದುಕಿನ ಸತ್ಯ

ಸತ್ಯವಿದ್ದರೆ ಎತ್ತಲೂ ಭಯವಿಲ್ಲವಯ್ಯ

ಭಯವಿಲ್ಲವೀ ಜಗದಿ ಹರಿಯಿರಲು

ಹರಿಯಿರಲು ನಡೆವುದೀ ಜೀವನ ನಾಟಕ

ನಾಟಕದ ಸೂತ್ರಧಾರಿಯೆ ಅವನು

ಅವನ ನಡೆಯಂತೆ ನಡೆವ ಬೊಂಬೆಗಳು

ಬೊಂಬೆಗಳಿಗೆ ಜೀವವಿತ್ತು ಆಡಿಸುವವನು

ಆಡಿಸುವನಾತ ಈ ಜೀವದಲೆಯ

ಜೀವದಲೆಯ ಉಸಿರ ನಿಯಾಮಕನೇ ಅವನು//


ಶಂಕರ ಕುಲಾಲ ಪರ್ಕಳ

ಉಡುಪಿ ತಾಲೂಕು ಮತ್ತು ಜಿಲ್ಲೆ.


ಶೀರ್ಷಿಕೆ:-ಬೆಳದಿಂಗಳ ಬೆಳಕು


ಬೆಳದಿಂಗಳ ಬೆಳಕಲ್ಲಿ ಹಾಕುವಳು ರಂಗೋಲಿ

ರಂಗೋಲಿಯ ಚಿತ್ತಾರದ ಸೊಬಗೀನ ಮುತ್ತೈದೆ

ಮುತೈದೆ ಮೂಗಲ್ಲಿ ಮುತ್ತಿನ ಮೂಗೂತಿ

ಮೂಗೂತಿ ಮಿನುಗಿದರೆ ನಕ್ಷತ್ರ ಹೊಳೆದಂತೆ

ಹೊಳೆಯುವ ಬೆಳಕೆಲ್ಲ ಕಾಮನ ಬಿಲ್ಲಂತೆ

ಬಿಲ್ಲಿಗೆ ಹೂಡ್ಯಾನ ಮನ್ಮತ ಹೂಬಾನ

ಬಾನೀನ ರಭಸಕ್ಕೆ ಪ್ರೀತಿಯ ಹೂಮಳೆ

ಮಳೆ ಬಂದರೆ ಭೂತಾಯಿಗೆ ಎಲ್ಲಿಲ್ಲದ ಉಲ್ಲಾಸ

ಉಲ್ಲಾಸ ಮರೆತರೆ ಬಾಡುವುದು ನೈದಿಲೆ

ನೈದಿಲೆ ನೋಡಲು ಕಣ್ಣಿಗೆ ಶೃಂಗಾರು

ಶೃಂಗಾರದ ಕಾವ್ಯ ರತ್ನಾಕರ ಬರೆದಂತೆ

ಬರೆದಂತ ಗ್ರಂಥೋಳು ಭರತೇಶನ ವೈಭವ

ವೈಭವದ ಮೆರವಣಿಗೆ ಕುಣಿಯುತ ಮಾಡ್ಯಾರು

ಮಾಡಿದ ಮಹನಿಯರು ಸ್ವರ್ಗದಿ ಬಂದಿಹರು

ಬಂದಂತ ಬಾಲ್ಯಾರು ಬೀದಿಗೆ ಅಲಂಕಾರ

ಅಲಂಕಾರದಿ ಬಿಡಿಶಾರು ಚಿತ್ತಾರದ ರಂಗೋಲಿ


✍️ಬಾಹುಬಲಿ ಬಿರಾದಾರ ಪಾಟೀಲ ಜಮಖಂಡಿ


ರಂಗೋಲಿ :


ಬಿಡಿಸಬೇಕಿದೆ ನೀ ಬರುವ ದಾರಿಯಲಿ ರಂಗೋಲಿಯನು

ರಂಗೋಲಿ ಚುಕ್ಕಿಗಳಿಡಲು ಕರೆಯಲಾ ತುಂತುರು ಮಳೆಯನು


ಮಳೆ ಮಿಂಚು ಮನದಲ್ಲಿಂದು ನಿನಗಾಗಿ ಮಿಡಿದಿದೆ ಹೃದಯ 

ಹೃದಯದಲ್ಲಿ ಆವರಿಸಿ ನೀ ಅದೇನು ಮಾಡಿದೆ  ಸಂಚು

ಸಂಚಾರಿಯಾಗಿ ಭಾವಗಳ ಬೀದಿಯಲ್ಲಿ ಅಲೆದೆ

ಅಲೆದು  ಚುಕ್ಕಿಗಳಿಂದ ಚುಕ್ಕಿಗೆ ಸೇರುವ ರಂಗೋಲಿ


ರಂಗೋಲಿ ಗೆರೆಯಂತೆ ಬಾಳು ನಿನ್ನೆಡೆಗೆಯೇ ಸೇರಿದೆ

ಸೇರಿದೆ ಹಲವು ತಿರುವುಗಳ ದಾಟಿ ಮನವೆರೆಡು

ಮನದ ಮುಗಿಲಲ್ಲಿ  ನಿನ್ನದೆ ಚಿತ್ತಾರ ಬಿಡಿಸಿರುವೆ

ಬಿಡಿಸುತಲಿ ನಿನ್ನ ಚಿತ್ರವನ್ನು ಮೈಮರೆತೆ ನನ್ನಲ್ಲೇ


ನನ್ನಲ್ಲೇ ಕಳೆದೆ ನಿನ್ನೋಲವ ಸಿಂಚನದಿ ಮಿಂದು 

ಮಿಂದು ನಿಂದೆ ರಂಗು ರಂಗಿನ ಕನಸಿನಲಿ

ಕನಸಿನ ಕಾನನದಲಿ ಭಾವ ಭೃಂಗ ಹಾರಾಡಿದೆ

ಹಾರಿ ನನ್ನಡೆಗೆ ಬಂದು ನೆನಪು ಮನಕೆ ತಂಪಾಗಿಸಿದೆ

ತಂಪಾಗಿಸಿ  ಕಂಪು ಸೂಸಿದೆ ಮನದ ಹೂದೋಟಕೆ

ಹೂದೋಟದಲಿ  ಭಾವಕುಸುಮ ಮೊಗ್ಗೊಡೆದಿದೆ


✍ಅಂಜಲಿ ಶಿದ್ಲಿಂಗ್ 


ಪದ : ರಂಗೋಲಿ

ಅಂಗಳದ ತುಂಬೆಲ್ಲಾ ಸುಂದರ ರಂಗೋಲಿಯು

ರಂಗೋಲಿಯಲಿ ತುಂಬಿದೆ ಹಲವಾರು ಬಣ್ಣಗಳು


ಬಣ್ಣಗಳು ಹೊಳೆಯುತಿವೆ ಇಂದ್ರಧನುವಿನಂತೆ

ಇಂದ್ರಧನುವೇ ಇಂದು ಧರೆಗಿಳಿದು ಬಂದಂತೆ


ಬಂದಿಹರು ದೇವಾನುದೇವರುಗಳೇ ಧರೆಯಲ್ಲಿ

ಧರೆಯೆಲ್ಲಾ ಕಂಗೊಳಿಸಿದೆ ರಂಗೋಲಿಯಲ್ಲಿ


ರಂಗೋಲಿಯ ಚಿತ್ತಾರವೆ ರಸ್ತೆಯ ಇಕ್ಕೆಲವೂ

ಇಕ್ಕೆಲವೂ ಹೊಳೆಯುತಿದೆ ಬಹು ಸುಂದರವಾಗಿ


ಸುಂದರವಾದ ಮಧುರ ಅನುಭೂತಿ ಮನದಲ್ಲಿ

ಮನವು  ತಲೆದೂಗಿರಲು ಭಾವಪರವಶತೆಯಲ್ಲಿ


ಭಾವಪರವಶರಾಗಿ ಪೂಜಿಸುವೆವು ದೇವರನು

ದೇವರ ನಾಮದಿಂದ ಧನ್ಯತೆಯು ಜೀವನದಲಿ


ಜೀವನವು ಸಿಕ್ಕಿರುವುದು ಭಗವಂತನ ಕೃಪೆಯಿಂದ

ಕೃಪೆಯಿರಲು ಭಗವಂತನ ಸ್ವರ್ಗ ಸಮಾನ ಬದುಕು


ಬದುಕಿರುವುದು  ರಂಗೋಲಿಯ ಬಣ್ಣಗಳಂತೆ

ಬಣ್ಣಗಳಂತೆ ಸುಖ ಧುಃಖಗಳು ಸಮಾನವಂತೆ


ಅನುರಾಧಾ ಕುಲ್ಕರ್ಣಿ🌺🌺

ಗೃಹಿಣಿ

ಕೋಲ್ಕತ್ತಾ

🌹ಬತ್ತದ ತೊರೆ ಸ್ನೇಹಬಳಗ🌹

ವಿಷಯ : ಜಡೆಕವನ ರಚನೆ

ಶೀರ್ಷಿಕೆ : 🌷ರಂಗೋಲಿ🌷


ಹೃದಯದ ಅಂಗಳದಲ್ಲಿ ರಂಗಿನ ಚಿತ್ತಾರ

ಚಿತ್ತಾರದಿ ಬೆಸೆದಿರಲು ಗೆರೆಗಳ ಅನುಬಂಧ

ಅನುಬಂಧಕೆ ತುಂಬಿದ ವರ್ಣಗಳ ಅಲಂಕಾರ

ಅಲಂಕಾರಕೆ ಮೆರುಗು ನೀಡಿರಲು ನೀರೆಯರು 

ನೀರೆಯರ ಕರದಿಂದ ಮೂಡಿರಲು ರಂಗೋಲಿ

ರಂಗೋಲಿಯಲ್ಲಿ ಬಿಂಬಿತವಾದ ಮನೋಭಾವ

ಮನೋಭಾವದಿ ಅರಳಿರಲು ಹೊಸ ಸಂಭ್ರಮ

ಸಂಭ್ರಮದಿ ಕಣ್ಮನಗಳಿಗೆ ಹರುಷದ ಉಲ್ಲಾಸ

ಉಲ್ಲಾಸದ ಸಡಗರವು ಸಾರುತ್ತಿರಲು ಸಂಸ್ಕೃತಿ

ಸಂಸ್ಕೃತಿಯ ಆಚರಣೆಗೆ ಸೂಚಕವು ರಂಗವಲ್ಲಿ

ರಂಗವಲ್ಲಿಯಿಂದ ಮನೆಯಂಗಳದಿ ನವ ಶೋಭೆ

ಶೋಭೆಯಲ್ಲಿ ಅರಳಿದೆ ಹೆಂಗಳೆಯರ ಕಲಾತ್ಮಕತೆ

ಕಲಾತ್ಮಕತೆಯ ಕೌಶಲ್ಯಕೆ ಸೋತಿರಲು ವೀಕ್ಷಕರು

ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರಲು ಸ್ತ್ರೀವೃಂದ

ಸ್ತ್ರೀವೃಂದಕೆ ಸಾರ್ಥಕ್ಯದ ನಗುವು ಮೂಡಿರಲು

ಮೂಡಿಹ ನಗು ಅಳಿಯದೆ ಉಳಿಯಲೆಂದೆಂದಿಗೂ 


 ✍️ಸವಿತಾ ನಾಗರಾಜ್

      ಹೈದರಾಬಾದ್


ವಿಷಯ:-ರಂಗೋಲಿ

*ಶೀರ್ಷಿಕೆ:-ಅಂಗಳದಿ ನಗುವ ಚೆಲುವೆ*

ಅಂಗಳದಿ ಅರಳಿದೆ ತರತರದ ರಂಗೋಲಿ

ರಂಗೋಲಿಯು ಹೊಳೆದಿದೆ ನವರಂಗಿನ ಚೆಲುವಲಿ

ಚೆಲುವೆಯೆದೆಯಲಿ ಆನಂದ ತುಂಬಿ ತುಳುಕೈತೆ

ತುಳುಕದಂಥ ಸೌಂದರ್ಯ ಕಣ್ಣ ಮುಂದೈತೆ

ಮುಂದೆ ಮುಂಬಾಗಿಲಲಿ ನಗುತ ನಿಂತೈತೆ

ನಿಂತು ನೋಡುತಿರುವೆ ಸೊಬಗ ಸಿರಿಯನು

ಸಿರಿಯು ಇವಳೆ ಮನಮೆಚ್ಚಿದ ಮಡದಿಯು

ಮಡದಿ ಕೈಯಲಿ ಮೆರೆದಿದೆ ಗೋರಂಟಿ ಚಿತ್ರವು

ಚಿತ್ರ ಕೂಗಿ ಕರೆದಿದೆ ನೂರು ಆಸೆ ತೆರೆದಿದೆ

ತೆರೆದ ಹೃದಯ ಇವಳಿಗೆ ಎಂದೋ ಮೀಸಲಾಗಿದೆ

ಮೀಸಲಿಟ್ಟ ಒಲವಿಗೆ ಒಡತಿ ಅವಳೆ ಅಲ್ಲವೇ,

ಅಲ್ಲವೇ ನನ್ನ ಚೆಲುವೆ ನಿನ್ನ ನಗುವಲಿ ನನ್ನ ಗೆಲುವೆ

ಗೆಲುವು ಸಿಕ್ಕಿ ಜೀವನಕೆ ನಲಿವು ಮೂಡಿದೆ

ಮೂಡಿದೆ ಮುಂಜಾನೆಯ ರವಿಯ ಹೊಂಬಣ್ಣ

ಬಣ್ಣದಲಿ ಕಂಡೆನು ಇವಳ ಒಲವ ಕಣ್ಣ

ಕಣ್ಣಮುಚ್ಚಿ ಕುಳಿತರು ಕಾಡುವ ಸೊಬಗು ಅವಳದು.


*ಆನಂದಜಲ,ಶಿಕ್ಷಕಿ*

   *ತುರುವೇಕೆರೆ*



*ಪದ- ರಂಗೋಲಿ*


*ಶೀರ್ಷಿಕೆ- ಮನೆಯೊಡತಿ*


ಮುಂಜಾವದ ಸುಂದರ ಸಮಯದಲ್ಲಿ

ಸಮಯದಲ್ಲಿ ಮನೆ ಒಡತಿಯು ಅಂಗಳದಲ್ಲಿ

ಅಂಗಳದಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿ

ರಂಗೋಲಿಯ ಹೊಸ ವಿನ್ಯಾಸಗಳು ಸುಂದರ

ಸುಂದರವಾಗಿ ಆ ದಿನಕ್ಕೆ ಶುಭ ಕೋರುತಲಿ

ಶುಭ ಕೋರುತಲಿ ದಿನದ ಕೆಲಸದ ಪ್ರಾರಂಭವು

ಪ್ರಾರಂಭವಾಯಿತು ದಿನದ ಗಡಿಬಿಡಿಯಲ್ಲಿ

ಗಡಿಬಿಡಿ ಆ ಸಮಯದಲ್ಲಿ ಮನೆ ಒಡತಿಯು

ಒಡತಿಯು ದೇವರ ನೆನೆಯುತ್ತ ಮನೆಗೆಲಸವೂ

ಮನೆಗೆಲಸ ಮಾಡುತ್ತಲಿ ಮನೆ ಅವರನ್ನೆಲ್ಲ

ಮನೆಯವರೆಲ್ಲರ ಇಷ್ಟವನ್ನು ಅರಿತು ನಡೆದಳು

ನಡೆದಳು ಕೆಲಸ-ಕಾರ್ಯಗಳ ಮಾಡುತ್ತ ನಗುತಲಿ

ನಗುತಲಿ ಮನೆ ಮಂದಿಯ ಮನಗೆದ್ದಳು

ಗೆಲ್ಲುವಳು ಮನೆಯ ಬೆಳಗಿ ಗೃಹಲಕ್ಷ್ಮಿ ತಾನಾಗಿ 

ತಾನಾಗಿ ಮನೆಯನ್ನು ಸುರಕ್ಷಿತವಾಗಿ ಇರುಸುವಳು

ಇರುಸುವಳು ಮನೆಯ ಗೌರವವನ್ನು ಕಾಪಾಡುವಳು.


*ಕೆ ಆರ್ ಉಷಾ ದಿದ್ದಿಗಿ*

ಹೈದರಾಬಾದ್


ಜಡೆ ಕವನ

ದತ್ತ ಪದ..ರಂಗೋಲಿ.


ಶೀರ್ಷಿಕೆ . ರಾಂಗಾದ ರಂಗೋಲಿ.


ರಂಗು ರಂಗಿನ ರಂಗಾದ ರಂಗೋಲಿ

ರಂಗೋಲಿ ಹಾಕೋಣ ನಾವೆಲ್ಲ ಸೇರಿ

ಸೇರಿ ಗೆಳತಿಯರೆ ರಂಗೋಲಿ ಸ್ಪರ್ಧೆಗೆ

ಸ್ಪರ್ಧೆಗೆ ಸ್ಫೂರ್ತಿ ನಿಮ್ಮ ನಗುವೇ ನೋಡಿ.

ನೋಡಿ ಆನಂದಿಸಿ ಹೇಳಬೇಕು ಎಲ್ಲರೂ

ಎಲ್ಲರೂ ಹಾಕುವರು ರಂಗೋಲಿ ಆದರೆ

ಆದರೆ ಬತ್ತದ ತೊರೆಯಲ್ಲಿರುವ ಕನ್ಯಾ ಮಣಿಗಳ ಹಾಗಲ್ಲ ನೋಡಿ.

 ನೋಡಿ ಯಾರಿಗೂ ಬರಲ್ಲ ಇಂತಹ ರಂಗೋಲಿ

ರಂಗೋಲಿ ಹಾಕುವವರು ದಿನನಿತ್ಯ ಇಲ್ಲಿ

ಇಲ್ಲಿ ನಡೆಯುವುದು ದಿನನಿತ್ಯ ಒಂದು ಸ್ಪರ್ಧೆ

ಸ್ಪರ್ಧೆ ಹೆಸರಲ್ಲಿ ಹಂಚುವರು ಪ್ರೀತಿ

ಪ್ರೀತಿಯ ಜೊತೆಗೆ ಸಾಹಿತ್ಯದ ಸಿಂಚನ

ಸಿಂಚನ ಮೂಡಿಸಿದೆ ಮನದಲ್ಲಿ  ಸಾಹಿತ್ಯ ಚಿತ್ತಾರ

ಸಾಹಿತ್ಯ ಸುಧೆಯ ಸವಿಯೋಣ ಬನ್ನಿ

ಬನ್ನಿ ನಾವೆಲ್ಲ ಬೇಳೆಯೋಣ ಎಲ್ಲರನ್ನು ಬೆಳೆಸುತ್ತಾ.ಸಾಗೋಣ ಮುಂದೆ.


ನಾಗವೇಣಿ ಹೀರೆಮಠ

ಕಲಬುರ್ಗಿ.


: ಜಡೆಕವನ ರಚನೆ


*ವಿಷಯ :ರಂಗೋಲಿ*

*ಶೀರ್ಷಿಕೆ: ಬರೆದೆ ನಿನ್ನ ಚಿತ್ತಾರವ

ಮನದೊಳಗೆ ಬರೆದೆ ನಿನ್ನ ಚಿತ್ತಾರವ

ಚಿತ್ತಾರವ ಬಿಡಿಸ ಹೊರಟೆ ಕಲ್ಪನೆಯೊಳು

ಕಲ್ಪನೆಯೊಳು ರಂಗೋಲಿಯ ಹಾಕಲೇ

ಹಾಕಲೇ ನಿನ್ನ ನಗುಮೋರೆಯ ಚಂದವ

ಚಂದವ ಚುಕ್ಕಿಗಳಂಗಳದಿ ಬಿತ್ತಲೇ

ಬಿತ್ತಲೇ ಮುಖದೊಳಿಹ ಮಂದಸ್ಮಿತವ

ಮಂದಸ್ಮಿತವ ಮುದಗೊಳಿಪ ಅಲಂಕಾರವ

ಅಲಂಕಾರವ ಮಾಡಲೇ ಬಣ್ಣದೊಳಗೆ

ಬಣ್ಣದೊಳಗೆ ಮೂಡಿಹ ಚಿತ್ರವೇ ನಾಚಿದಂತಿದೆ

ನಾಚಿದಂತಿದೆ ಬಳುಕಿ ಎನ್ನ ನೋಡಿ ಕರೆದಂತಿದೆ

ಕರೆದಂತಿದೆ ಆ ಕುಡಿ ಹುಬ್ಬ ಚೆಲುವು 

ಚೆಲುವು ಕಂಡೆನ್ನ ಮನವು ನಲಿದಂತೆ

ನಲಿದಂತೆ ಆ ಕಣ್ಣ‌ಸನ್ನೆ ಮೋಡಿಮಾಡಿ ಸೆಳೆಯಲು

ಸೆಳೆಯಲು ಬರೆದ ಮುಗುಳು ನಗೆಯ ಚಿತ್ರವು

ಚಿತ್ರವು ಜೀವ ಪಡೆದೆನ್ನ ಮೈಯ ಸೋಕಿದಂತಾಗಲು

ಸೋಕಿದಂತಾಗಲು ಬಣ್ಣದೊಳಗವಿತೆನ್ನ ಕಾಡಿರಲು



*ಸುಮನ.ಜಿ.ಕಾರಂತ್*

*ಮೂಡಬಿದ್ರಿ*


ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...