ನಮ್ಮ "ಬತ್ತದ ತೊರೆ ಸ್ನೇಹ ಬಳಗ"ದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ "ಕೋಟ ಶಿವರಾಮ ಕಾರಂತರ ಜನ್ಮದಿನ"ದ ಸವಿನೆನಪಿಗಾಗಿ..."ಸಾಹಿತ್ಯ ಸ್ಪರ್ಧೆಗಳ ಸಪ್ತಾಹ "ಪ್ರಾರಂಭವಾಗಿದೆ.
(°)) ದಿನಾಂಕ: ೦೪/೧೦/೨೦೨೧ ರಿಂದ ೦೯/೧೦/೨೦೨೧, ಸೋಮವಾರದಿಂದ ಶುಕ್ರವಾರದವರೆಗೆ...
(°)) ಕವನ ರಚನೆ ಹಾಗೂ ಕವನ ವಾಚನ ವೀಡಿಯೋ, ಕಾದಂಬರಿ ವಿಮರ್ಶಾ ಲೇಖನ, ಲಲಿತ ಪ್ರಬಂಧ, ಪ್ರವಾಸ ಕಥನ, ಮಕ್ಕಳ ನಾಟಕ ರಚನೆ, ಹಾಗೂ ಚಿತ್ರಕಲಾ ಸ್ಪರ್ಧೆ.....
🔴 ಸರ್ವ ಕವಿಮನಗಳಿಗೂ,ಸಾಹಿತ್ಯ ಪ್ರಿಯರಿಗೂ, ಹಾಗೂ ವಿದ್ಯಾರ್ಥಿಗಳಿಗೂ ಸುಸ್ವಾಗತ.
(°)) ಪ್ರತಿದಿನ ಬೆಳಿಗ್ಗೆ ೦೬ ರಿಂದ ರಾತ್ರಿ ೧೦ ರ ವರೆಗೆ ಬರೆಯಲು ಅವಕಾಶವಿದೆ.
(°)) ನಿಯಮದ ಅನುಸಾರ ಸ್ಪರ್ಧೆಯಲ್ಲಿ ಭಾಗವಹಿಸಿರಿ. ನಿಮ್ಮ ಹೆಸರು ಊರು ವೃತ್ತಿ , ವಿದ್ಯಾರ್ಥಿಗಳು ತಮ್ಮ ತರಗತಿ, ಶಾಲೆ ಹೆಸರು, ಫೋನ್ ನಂಬರ್ ಎಲ್ಲವನ್ನೂ ಕೊನೆಯಲ್ಲಿ ಅಗತ್ಯವಾಗಿ ನಮೂದಿಸಿರಿ.
🔵 ಭಾಗವಹಿಸಿದ ಸರ್ವರಿಗೂ "ಇ-ಪ್ರಮಾಣಪತ್ರವನ್ನು" ನೀಡಿ ಪ್ರೋತ್ಸಾಹಿಸಲಾಗುವುದು.
ಮೊದಲ ಮೂರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ಪೋಸ್ಟ್ ಮೂಲಕ ತಲುಪಿಸಲಾಗುವುದು.
ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಿ.
ಡಾ. ಕೋಟ ಶಿವರಾಮ ಕಾರಂತರು – ಜ್ಞಾನ ಮತ್ತು ಸಾಹಿತ್ಯದ ಮಹಾನ್ ಚೇತನ
ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಹಿತಿಗಳಲ್ಲಿ ಡಾ. ಕೋಟ ಶಿವರಾಮ ಕಾರಂತರು ಪ್ರಮುಖರು. ಅವರು ಕೇವಲ ಸಾಹಿತಿಯಾಗಿರದೆ, ಕಾದಂಬರಿಕಾರ, ನಾಟಕಕಾರ, ಚಿಂತಕ, ಪರಿಸರ ಪ್ರೇಮಿ, ಕಲಾವಿದ, ಯಕ್ಷಗಾನ ತಜ್ಞ ಹಾಗೂ ಸಮಾಜಮುಖಿ ವ್ಯಕ್ತಿಯಾಗಿ ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಬಹುಮುಖ ಪ್ರತಿಭೆಯಿಂದಾಗಿ ಅವರನ್ನು ಪ್ರೀತಿಯಿಂದ “ನಡೆದಾಡುವ ವಿಶ್ವಕೋಶ” ಎಂದು ಕರೆಯಲಾಗುತ್ತದೆ.
ಶಿವರಾಮ ಕಾರಂತರು 1902ರ ಅಕ್ಟೋಬರ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೋಟದಲ್ಲಿ ಜನಿಸಿದರು. ಬಾಲ್ಯದಿಂದಲೇ ಅವರಿಗೆ ಸಾಹಿತ್ಯ, ಕಲೆ ಮತ್ತು ಪ್ರಕೃತಿಯ ಬಗ್ಗೆ ಅಪಾರ ಆಸಕ್ತಿ ಇತ್ತು. ಸ್ವತಂತ್ರವಾಗಿ ಕಲಿಯುವ ಹಂಬಲ ಹೊಂದಿದ್ದ ಅವರು ತಮ್ಮ ಜೀವನದ ಬಹುಭಾಗವನ್ನು ಜ್ಞಾನಾರ್ಜನೆ ಮತ್ತು ಸೃಜನಶೀಲ ಕಾರ್ಯಗಳಿಗೆ ಮೀಸಲಿಟ್ಟರು.
ಕಾರಂತರ ಸಾಹಿತ್ಯದಲ್ಲಿ ಗ್ರಾಮೀಣ ಜೀವನ, ಪ್ರಕೃತಿ, ಮನುಷ್ಯನ ಬದುಕಿನ ಸಂಕಷ್ಟಗಳು, ಸಾಮಾಜಿಕ ಬದಲಾವಣೆ ಹಾಗೂ ಮಾನವೀಯ ಮೌಲ್ಯಗಳು ಪ್ರಮುಖವಾಗಿ ಕಾಣಿಸುತ್ತವೆ. “ಮೂಕಜ್ಜಿಯ ಕನಸುಗಳು”, “ಮರಳಿ ಮಣ್ಣಿಗೆ”, “ಚೋಮನ ದುಡಿ”, “ಬೆಟ್ಟದ ಜೀವ”, “ಸರಸಮ್ಮನ ಸಮಾಧಿ” ಮುಂತಾದ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಅವರ “ಮೂಕಜ್ಜಿಯ ಕನಸುಗಳು” ಕಾದಂಬರಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆಯಿತು.
ಯಕ್ಷಗಾನದ ಸಂರಕ್ಷಣೆ ಮತ್ತು ಅಭಿವೃದ್ಧಿಗೂ ಕಾರಂತರ ಕೊಡುಗೆ ಅಪಾರ. ಯಕ್ಷಗಾನದ ಕುರಿತು ಅಧ್ಯಯನ ನಡೆಸಿ, ಅದರ ಪರಂಪರೆ ಹಾಗೂ ಕಲಾತ್ಮಕತೆಯನ್ನು ಜನರಿಗೆ ಪರಿಚಯಿಸಿದರು. ಪರಿಸರ ಸಂರಕ್ಷಣೆ ಮತ್ತು ಪ್ರಕೃತಿಯ ಬಗ್ಗೆ ಅವರು ತಮ್ಮ ಬರಹಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಕಾರಂತರ ಜೀವನವು ಸರಳತೆ, ಸ್ವತಂತ್ರ ಚಿಂತನೆ, ಪರಿಶ್ರಮ ಮತ್ತು ಜ್ಞಾನಪ್ರೇಮದ ಪ್ರತೀಕವಾಗಿತ್ತು. 1997ರ ಡಿಸೆಂಬರ್ 9ರಂದು ಅವರು ನಿಧನರಾದರು. ಆದರೆ ಅವರ ಕೃತಿಗಳು ಮತ್ತು ವಿಚಾರಗಳು ಇಂದಿಗೂ ಕನ್ನಡಿಗರಿಗೆ ದಾರಿದೀಪವಾಗಿವೆ.
ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಮಾಜಕ್ಕೆ ಕಾರಂತರು ನೀಡಿದ ಕೊಡುಗೆ ಅಪಾರ. ಅವರ ಜೀವನ ಮತ್ತು ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯವಾಗಿದೆ.
ಶುಭಹಾರೈಕೆಗಳು💐
ಬತ್ತದ ತೊರೆ ಸ್ನೇಹ ಬಳಗ,
ನಿರ್ವಾಹಕರು ಹಾಗೂ ನಿರ್ಣಾಯಕರು
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...